ಮಂಗಳೂರು: ಹಿಟಾಚಿ ಯಂತ್ರಕ್ಕೆ ಬೈಕ್ ಡಿಕ್ಕಿ – ಯುವಕ ಸಾವು

ಮಂಗಳೂರು: ಉಳ್ಳಾಲ ನೇತ್ರಾವತಿ ಹಳೆ ಸೇತುವೆಯಲ್ಲಿ ಶನಿವಾರ ಬೆಳಿಗ್ಗೆ ಬೈಕ್ ಹಾಗೂ ಹಿಟಾಚಿ ಯಂತ್ರದ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರೋರ್ವರು ಮೃತಪಟ್ಟಿದ್ದಾರೆ.

image005thokkottu-bridge-20160326-005 image002thokkottu-bridge-20160326-002 image003thokkottu-bridge-20160326-003 image004thokkottu-bridge-20160326-004 image001thokkottu-bridge-20160326-001

ಮೃತರು ಸಕಲೇಶಪುರ ಮೂಲದ ಯುವಕನಾಗಿದ್ದು, ಹೆಸರು ತಿಳಿದುಬಂದಿಲ್ಲ.
ಉಳ್ಳಾಲದ ಹಳೆ ಸೇತುವೆ ದುರುಸ್ಥಿ ಕೆಲಸ ನಡೆಯುತ್ತಿದ್ದು, ಇದರ ಬಗ್ಗೆ ಅರಿವಿಲ್ಲದೆ ಯುವಕ ಬೈಕ್ ಸವಾರಿ ಮಾಡಿ ಕೊಂಡು ಬಂದಿದ್ದು, ಅವರ ಬೈಕ್ ಹಿಟಾಚಿ ಯಂತ್ರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವಕ ಮೃತಪಟ್ಟಿದ್ದಾರೆ.
ಈ ಕುರಿತು ಕಂಕನಾಡಿ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply