ಮಕ್ಕಳ ಕಳ್ಳ ಸಾಗಣೆ ಮೂವರ ಬಂಧನ

ಮಕ್ಕಳ ಕಳ್ಳ ಸಾಗಣೆ ಮೂವರ ಬಂಧನ

ಮಂಗಳೂರು: ಮಕ್ಕಳ ಕಳ್ಳಸಾಗಾಣಿಕೆಗೆ ಸಂಬಂಧಿಸಿ ಉರ್ವಾ ಪೋಲಿಸರು ಮೂರು ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರನ್ನು ಮಂಕಿ ಸ್ಟ್ಯಾಂಡ್ ನಿವಾಸಿಗಳಾದ ಜಲೀಲ್ (43) ಆತನ ಪತ್ನಿ ಮೈಮುನಾ ಹಾಗೂ ಭದ್ರಾವತಿಯ ರೇಶ್ಮ (22) ಎಂದು ಗುರುತಿಸಲಾಗಿದೆ.

child-trafficking-20160803.mp4 832016 82833 PM child-trafficking-20160803.mp4 832016 82830 PM child-trafficking-20160803.mp4 832016 82811 PM

ಪೋಲಿಸ್ ಮೂಲಗಳ ಪ್ರಕಾರ ಮಕ್ಕಳ ಕಳ್ಳಸಾಗಣೆಯ ಖಚಿತ ಮಾಹಿತಿಯನ್ನು ಆಧರಿಸಿ ಜಲೀಲ್, ಮೈಮುನಾ ಹಾಗೂ ರೇಶ್ಮಾ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಮಕ್ಕಳ ಕಳ್ಳಸಾಗಾಣಿಕೆಯ ಮಾಹಿತಿ ಹೊರಬಿತ್ತು. ಆರು ತಿಂಗಳ ಹಿಂದೆ ಭಧ್ರಾವತಿಯ ರೇಶ್ಮಾ ಅವರು ಜಲೀಲ್ ಅವರಿಗೆ ಫೋನ್ ಮಾಡಿ ಅರಸಿಕರೆ ರೈಲ್ವೆ ನಿಲ್ದಾಣದಲ್ಲಿ ಮಗುವೊಂದು ಸಿಕ್ಕಿದ್ದು, ಆ ಮಗುವನ್ನು ರೂ 90000 ಕ್ಕೆ ಮಾರುತ್ತೇನೆ ಎಂದು ಹೇಳಿದ್ದಳು. ಜಲೀಲ್ ಹಾಗೂ ಮೈಮುನ ಹಣ ಪಾವತಿಸಲು ಒಪ್ಪಿದ್ದರು ಎನ್ನಲಾಗಿದೆ. ಪೋಲಿಸರು ಧಾಳಿಯ ವೇಳೆ ಮಗುವನ್ನು ವಶಪಡಿಸಿಕೊಂಡು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಿ ಬಳಿಕ ಪುತ್ತೂರು ರಾಮಕೃಷ್ಣ ಆಶ್ರಮ ಪುತ್ತೂರು ಇಲ್ಲಿಗೆ ವರ್ಗಾಯಿಸಲಾಗಿದೆ.

ಉರ್ವಾ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Please enter your comment!
Please enter your name here