ಮಣಿಪಾಲ: ಎರಡು ತಂಡಗಳ ನಡುವೆ ಹೊಡೆದಾಟ: ಪರಸ್ಪರ ದೂರು ದಾಖಲು

ಮಣಿಪಾಲ: ಎರಡು ಗುಂಪುಗಳು ಪರಸ್ಪರ ಹೊಡೆದಾಟಿಕೊಂಡ ಕುರಿತು ಎರಡು ಪ್ರತ್ಯೇಕ ದೂರುಗಳು ಮಣಿಪಾಲ ಠಾಣೆಯಲ್ಲಿ ಭಾನುವಾರ ದಾಖಲಾಗಿದೆ.
ಭಾನುವಾರ ಸಂಜೆ ಸುಮಾರು 7.30 ವೇಳೆಗೆ ಉಡುಪಿ ತಾಲೂಕು ಹೆರ್ಗಾ ಗ್ರಾಮದ ಕೊಡಂಗೆ ಎಂಬಲ್ಲಿ ದಿನಕರ ಶೆಟ್ಟಿ ಹೆರ್ಗಾ, ಪ್ರಕಾಶ್‌ ಶೆಟ್ಟಿ, ಸಂಕೇತ್‌, ಸತೀಶ್‌ ಮತ್ತು ಇತರ 15 ಜನರುಗಳು ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿಕೊಂಡು ಮಾರಾಕಾಸ್ತ್ರಗಳನ್ನು ಹೊಂದಿ ಪಿರ್ಯಾದಿ ಪೀಟರ್ ಡಿ’ಸೋಜಾ ಇವರ ತಮ್ಮನ ಜೆಸಿಬಿ ರಸ್ತೆಯಲ್ಲಿ ಹೋಗುವಾಗ ತಡೆಯನ್ನುಂಟು ಮಾಡಿ ಅದೇ ವಿವಾದದಿಂದ ಕೊಡಂಗೆಯ ಪಿರ್ಯಾದಿಯ ತಮ್ಮ ಬೋನಿಫಾಸ್‌ ಮನೆಯ ಅವರಣದಲ್ಲಿ ಪಿರ್ಯಾದಿಯ ತಮ್ಮ ಬೋನಿಫಸ್‌ ಮತ್ತು ಅಣ್ಣ ಅಂತೋನಿಯವರಿಗೆ ಹಲ್ಲೆ ನಡೆಸಿದ್ದು, ದಿನಕರ ಶೆಟ್ಟಿ ಮತ್ತಿತರು ಹಲ್ಲೆ ನಡೆಸಿದ ಪರಿಣಾಮ ಬೋನಿಫಸ್‌ ಹಾಗೂ ಅಂತೋನಿಯವರ ಮೈ,ಕೈ, ಮುಖ ಹಾಗೂ ತಲೆಗೆ ಗಂಭೀರ ಸ್ವರೂಪದ ರಕ್ತಗಾಯವಾಗಿದ್ದಾಗಿದೆ ಎಂದು ಪೀಟರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ
ಪೀಟರ್ ಅವರ ದೂರಿಗೆ ಪ್ರತಿದೂರಾಗಿ ಹೆರ್ಗಾ ಗ್ರಾಮದ ಕೊಡಂಗೆ ದೇವಸ್ಥಾನ ಹತ್ತಿರ ರಸ್ತೆಯಲ್ಲಿ ಅಕ್ಷಿತ್ ಶೆಟ್ಟಿ ಇವರು ಮೋಟಾರ್ ಸೈಕಲ್‌ನಲ್ಲಿ ಬರುತ್ತಿರುವಾಗ ಎದುರಿನಿಂದ ಬೋನಿ, ಪೀಟರ್‌, ಟೋನಿ ಮತ್ತು ಜೆಸಿಬಿ ಚಾಲಕ ಹಾಗೂ ಇತರರಿಬ್ಬರು ಬಂದು ಅಡ್ಡಗಟ್ಟಿ ಏಕಾಏಕಿಯಾಗಿ ಅವರಲ್ಲಿ ಪೀಟರ್ ಎಂಬವನು ಕೈಯಿಂದ ಚರಂಡಿಗೆ ದೂಡಿ ಹಾಕಿ, ಕೈಯಿಂದ ಅವರೆಲ್ಲರೂ ತಲವಾರು ಮತ್ತು ರಾಡ್‌‌ನಿಂದ ಎರಡು ಕಾಲುಗಳಿಗೆ, ಕೈಗಳಿಗೆ ಎಡಕಿವಿ ತಲೆಗೆ ಹೊಡೆದು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ.
ಎರಡು ತಂಡಗಳನ್ನು ದೂರುಗಳನ್ನು ಮಣಿಪಾಲ ಪೋಲಿಸರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply