ಮಣಿಪಾಲ: ಚಿಕಿತ್ಸೆಗಾಗಿ ಆಗಮಿಸಿದ ಮಾನಸಿಕ ಅಸ್ವಸ್ಥ ಹುಡುಗ ನಾಪತ್ತೆ

ಮಣಿಪಾಲ: ಆಸ್ಪತ್ರೆಯಲ್ಲಿ ಚಿಕಿತ್ಡೆಗಾಗಿ ಆಗಮಿಸಿದ ಮಾನಸಿಕ ಅಸ್ವಸ್ಥ ಹುಡುಗ ಕಾಣೆಯಾದ ಘಟನೆ ಮಾರ್ಚ್ 14 ಮಣಿಪಾಲದಲ್ಲಿ ನಡೆದಿದೆ.

veeresh-missing-manipal

ಮಾರ್ಚ್ 14 ರಂದು ಬಳ್ಳಾರಿ ಜಿಲ್ಲೆ ಕೂಡ್ಲಗಿ ನಿವಾಸಿ ಕೆ ಎಂ ಗುರುಪಾದಯ್ಯ ತನ್ನ ಮಗ ಕೆ ಎಂ ವೀರೇಶನೊಂದಿಗೆ ಕೆಎಮ್‌ಸಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಬಂದಿದ್ದು, ವಿರೇಶನು ಮಾನಸಿಕ ಅಸ್ವಸ್ತನಾಗಿದ್ದು, ಆಸ್ಪತ್ರೆಯ ಕೌಂಟರ್ ಬಳಿ ಚೆಯರ್‌ ಮೇಲೆ ವಿರೇಶನನ್ನು ಕುಳ್ಳಿರಿಸಿ ಚೀಟಿ ಮಾಡಿಸಿ ತಿರುಗಿ ನೋಡಿದಾಗ ವಿರೇಶನು ಕುಳ್ಳಿರಿಸಿದ ಸ್ಥಳದಲ್ಲಿ ಇಲ್ಲದೆ ಇದ್ದು, ಸುತ್ತಮುತ್ತ ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಈತನಕ ವಿರೇಶನು ಸಿಗದೇ ಕಾಣೆಯಾಗಿದ್ದಾಗಿರುತ್ತಾನೆ.
ಈ ಕುರಿತು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಕಲಾಗಿದೆ.

Leave a Reply