ಮತ್ತೋಮ್ಮೆ ಗ್ರೀನ್ ಕಾರಿಡಾರಿಗೆ ಸಾಕ್ಷಿಯಾದ ಉಡುಪಿ

ಮತ್ತೋಮ್ಮೆ ಗ್ರೀನ್ ಕಾರಿಡಾರಿಗೆ ಸಾಕ್ಷಿಯಾದ ಉಡುಪಿ

ಉಡುಪಿ: ಶನಿವಾರ ಮಣಿಪಾಲ ಸಮೀಪದ ಮಣ್ಣಪಳ್ಳ ಗಣಪತಿ ದೇವಸ್ಥಾನದ ಬಳಿ ನಡೆದ ಬೈಕ್ ಅಫಘಾತದಲ್ಲಿ ಗಂಭೀರ ಗಾಯಗೊಂಡು ಬ್ರೈನ್ ಡೆಡ್ ಆಗಿದ್ದ ಬೈಂದೂರಿನ ಹಿಮಾಂಶು ರಾವ್ ಅವರ ಅಂಗಾಗಳನ್ನು ಗ್ರೀನ್ ಕಾರಿಡಾರ್ ಮೂಲಕ ಸೋಮವಾರ ಬೆಳಿಗ್ಗೆ ಬೆಂಗಳೂರಿಗೆ ರವಾನಿಸಲಾಯಿತು.

ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾದ ಹಿಮಾಂಶು ಅವರ ಕಿಡ್ನಿ, ಕಾರ್ನಿಯಾ, ಹೃದಯ ಮತ್ತು ಲಿವರ್ ಗಳನ್ನು ಅವರ ತಂದೆ ತಾಯಿ ನಿರ್ಧರಿಸಿದ್ದು ಅದರಂತೆ ಬೆಂಗಳೂರಿನ ವೈದ್ಯರ ತಂಡ ಮಣಿಪಾಲಕ್ಕೆ ಆಗಮಿಸಿ ಬೆಳಿಗ್ಗೆ ಆರು ಗಂಟೆಗೆ ಗ್ರೀನ್ ಕಾರಿಡಾರ್ ನೆರವಿನಿಂದ ಝೀರೊ ಟ್ರಾಫಿಕ್ ಮೂಲಕ ಅಂಗಾಗಳನ್ನು ಮಂಗಳೂರಿನ ಬಜ್ಪೆ ಅಂತರಾಷ್ಟ್ರೀಯ ವಿಮಾನದ ಮೂಲಕ ಬೆಂಗಳೂರಿಗೆ ರವಾನಿಸಲಾಯಿತು,

himanshu-rao

ಹಿಮಾಂಶು ಅವರ ಕಿಡ್ನಿಗಳನ್ನು ಮಣಿಪಾಲ ಆಸ್ಪತ್ರೆಯ ರೋಗಿಗೆ ಉಪಯೋಗಿಸಲಾಗುವುದು ಎಂದು ವೈದ್ಯರು ತಿಳಿಸದ್ದಾರೆ.

ಬೈಂದೂರಿನ ಮಕ್ಕಳ ತಜ್ಞ ಡಾ ರವಿರಾಜ್ ಪುತ್ರರಾಗಿದ್ದ ಹಿಮಾಂಶು ಉಡುಪಿಯಲ್ಲಿ ಪಿಯುಸಿ ವಿದ್ಯಾಭ್ಯಾಸ ಪಡೆಯುತ್ತಿದ್ದರು.

ಅಂಗಾಂಗಳನ್ನು ಬೆಂಗಳೂರಿಗೆ ರವಾನಿಸಲು ಅಗತ್ಯ ನೆರವನ್ನು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ ಟಿ ಬಾಲಕೃಷ್ಣ, ಡಿವೈಎಸ್ಪಿ ಕುಮಾರಸ್ವಾಮಿ ಅವರ ನೇತ್ರತ್ವದ ತಂಡ ಒದಗಿಸಿದ್ದು, ಗ್ರೀನ್ ಕಾರಿಡಾರ್ ಮೂಲಕ ಝೀರೊ ಟ್ರಾಫಿಕ್ ವ್ಯವಸ್ಥೆಯನ್ನು ಮಾಡಿ ಪೋಲಿಸರು ಸಹಕರಿಸಿದರು.

 

Leave a Reply

Please enter your comment!
Please enter your name here