ಮದುವೆಯ ದಿನವೇ ಕುಸಿದು ಬಿದ್ದು ಮದುಮಗ ಸಾವು

ಮದುವೆಯ ದಿನವೇ ಕುಸಿದು ಬಿದ್ದು ಮದುಮಗ ಸಾವು

ಸುಳ್ಯ: ಮದುವೆಯ ದಿನವೇ ಯುವಕನೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಪಂಜ ಗ್ರಾಮದ ಕಂಡೂರಿನಲ್ಲಿ ನಡೆದಿದೆ.

ಮೃತ ಯುವಕನನ್ನು ಪಂಜ ಗ್ರಾಮದ ಕಂಡೂರಿನ ನಿವಾಸಿ ಪರಮೇಶ್ವರ ಗೌಡರ ಮಗ ಸಚಿನ್ (31) ಎಂದು ಗುರುತಿಸಲಾಗಿದೆ.

groom-died-wedding-20160713

ಮಾಹಿತಿಗಳ ಪ್ರಕಾರ ಸಚಿನ್ ಮದುವೆಯು ಜುಲೈ 13 ರಂದು ಸುಬ್ರಾಯ ಸ್ವಾಮಿ ಸಭಾ ಭವನದಲ್ಲಿ ನಿಗದಿಯಾಗಿದ್ದು, ಬೆಳಿಗ್ಗೆ ಸಚಿನ್ ತನ್ನ ಗಡ್ಡವನ್ನು ತೆಗೆದುಕೊಳ್ಳುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದರು ಎನ್ನಲಾಗಿದೆ. ಕೂಡಲೇ ಸಚಿನನ್ನು ಸ್ಥಳೀಯ ಆದರ್ಶ ಆಸ್ಪತ್ರೆಗೆ ಕೊಂಡೊಯ್ದಿದ್ದು, ತೀವೃ ಗಾಯಗೊಂಡ ಅವರು ಮೃತಪಟ್ಟಿದ್ದಾರೆ.

ಸಚಿನ್ ಅವರ ವಿವಾಹವು ಎಡಮಂಗಲ ಹೊನ್ನಂಪಾಡಿ ನಿವಾಸಿ ಗಾಯತ್ರಿಯೊಂದಿಗೆ ನಡೆಯಬೇಕಾಗಿತ್ತು.

ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply