ಮದ್ಯದ ಕಿಕ್ಕ್ ; ಐಡಿಯಲ್ ಐಸ್ ಕ್ರೀಮ್ ಕಟ್ಟಡ ಏರಿ ರಾದ್ದಾಂತ ಸೃಷ್ಟಿಸಿದ ಯುವಕ

ಮದ್ಯದ ಕಿಕ್ಕ್ ; ಐಡಿಯಲ್ ಐಸ್ ಕ್ರೀಮ್ ಕಟ್ಟಡ ಏರಿ ರಾದ್ದಾಂತ ಸೃಷ್ಟಿಸಿದ ಯುವಕ

ಮಂಗಳೂರು: ಕುಡಿತದ ಅಮಲಿನಲ್ಲಿದ್ದ ಯುವಕನೋರ್ವ ನಗರದ ಹಂಪನಕಟ್ಟೆ ಬಳಿಯ ಐಡಿಯಲ್ ಐಸ್ಕ್ರೀಮ್ ಪಾರ್ಲರ್ ಕಟ್ಟಡ ಛಾವಣಿ ಏರಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.

ಈತನ ರಾದ್ದಾಂತವನ್ನು ವೀಕ್ಷಿಸಿಲು ಸ್ಥಳದಲ್ಲಿ ಬೃಹತ್ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಯಿತು.

man-ideal-icecream1-20160809 image027ideal-icecream-jump-man-20160809-027 image026ideal-icecream-jump-man-20160809-026 image025ideal-icecream-jump-man-20160809-025 image024ideal-icecream-jump-man-20160809-024 image023ideal-icecream-jump-man-20160809-023 image022ideal-icecream-jump-man-20160809-022 image021ideal-icecream-jump-man-20160809-021 image020ideal-icecream-jump-man-20160809-020 image019ideal-icecream-jump-man-20160809-019 image018ideal-icecream-jump-man-20160809-018 image017ideal-icecream-jump-man-20160809-017 image016ideal-icecream-jump-man-20160809-016 image015ideal-icecream-jump-man-20160809-015 image014ideal-icecream-jump-man-20160809-014 image013ideal-icecream-jump-man-20160809-013 image012ideal-icecream-jump-man-20160809-012 image011ideal-icecream-jump-man-20160809-011 image010ideal-icecream-jump-man-20160809-010 image009ideal-icecream-jump-man-20160809-009 image008ideal-icecream-jump-man-20160809-008 image007ideal-icecream-jump-man-20160809-007 image004ideal-icecream-jump-man-20160809-004 image005ideal-icecream-jump-man-20160809-005 image006ideal-icecream-jump-man-20160809-006 image001ideal-icecream-jump-man-20160809-001 image002ideal-icecream-jump-man-20160809-002 image003ideal-icecream-jump-man-20160809-003 ideal-man-roof-20160809 image011man-ideal-icecream-20160809-011 image010man-ideal-icecream-20160809-010 image009man-ideal-icecream-20160809-009 image008man-ideal-icecream-20160809-008 image007man-ideal-icecream-20160809-007 image006man-ideal-icecream-20160809-006 image005man-ideal-icecream-20160809-005 image002man-ideal-icecream-20160809-002 image003man-ideal-icecream-20160809-003 image004man-ideal-icecream-20160809-004 image001man-ideal-icecream-20160809-001

ಕಟ್ಟಡ ಏರಿದ ಯುವಕ ಬೇಕಲದ ಪಲಕನ್ನು ನಿವಾಸಿ ಫಾಯಿಮ್ ಸಲ್ಮಾನ್ (25) ವೃತ್ತಿಯಲ್ಲಿ ಕ್ಷೌರಿಕ ವ್ರತ್ತಿಯವನಾಗಿದ್ದು, ಬಟ್ಟೆ ಖರೀದಿಗಾಗಿ ನಗರಕ್ಕೆ ಆಗಮಿಸಿದ್ದನು. ಬಳಿಕ ಮದ್ಯ ಸೇವಿಸಿದ ಯುವಕ ಸಂಜೆ ಹೊತ್ತಿಗೆ ನಗರದ ಗಣಪತಿ ಹೈಸ್ಕೂಲ್ ರಸ್ತೆಯಲ್ಲಿರುವ ಐಡಿಯಲ್ ಪಾರ್ಲರಿನ ಕಟ್ಟಡದ ಛಾವಣಿ ಏರಿ ಅತ್ತಿಂದಿತ್ತ ಸಂಚರಿಸಲು ತೊಡಗಿದನು. ಇದಲ್ಲದೆ ತಾನು ಛಾವಣಿಯಿಂದ ಕೆಳಗೆ ಜಿಗಿಯುವುದಾಗಿ ಸಾರ್ವಜನಿಕರಿಗೆ ಬೆದರಿಕೆ ಕೂಡ ಹಾಕುತ್ತಿದ್ದ. ಕೊನೆಗೂ ಸ್ಥಳೀಯ ನಾಗರಿಕರು ಪೋಲಿಸರಿಗೆ ಮಾಹಿತಿ ನೀಡಿದ್ದು, ಬಂದರು ಠಾಣಾ ಪೋಲಿಸರು ಸ್ಥಳಕ್ಕೆ ಧಾವಿಸಿ ಆತನನ್ನು ಕೆಳಗಿಳಿಯುವಂತೆ ಕೋರಿಕೊಂಡರೂ ಕೆಳಗೆ ಧುಮುಕುವ ಬೆದರಿಕೆ ಒಡ್ಡುತ್ತಲೇ ಇದ್ದನು.

ಇವನ ರಾದ್ಧಾಂತದಿಂದ ಪೋಲಿಸರು ಅಗ್ನಿಶಾಮಕ ದಳದವರನ್ನು ದೂರವಾಣಿ ಕರೆ ಮಾಡಲಾಯಿತು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬಂದಿಗಳು ಯುವಕನನ್ನು ಕೆಳಗಿಳಿಸಲು ಕೋರಿಕೊಂಡರೂ ಒಪ್ಪದೆ ಕೆಳಗೆ ಹಾರುವ ಧಮಕಿ ಹಾಕುತ್ತಿದ್ದ.

ಕೊನೆಗೂ ಆತನಲ್ಲಿ ಮಾತನಾಡುತ್ತಾ ಅಗ್ನಿಶಾಮಕ ದಳದ ಸಿಬಂದಿಗಳು ಕಟ್ಟಡವನ್ನು ಏರಿ ಯುವಕನನ್ನು ಹಿಡಿದು ಆತನನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗುವುದರೊಂದಿಗೆ ಕುಡಕನ ರಾದ್ಧಾಂತಕ್ಕೆ ಬ್ರೇಕ್ ಹಾಕಲಾಯಿತು.

Leave a Reply

Please enter your comment!
Please enter your name here