ಮನೆ ಅಂಗಳದಲ್ಲಿ ಮರಿಯಲದ ಮಿನದನ

ಮನೆ ಅಂಗಳದಲ್ಲಿ ಮರಿಯಲದ ಮಿನದನ

ಮಂಗಳೂರು: ಇಂಟರ್ ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಆಶ್ರಯದಲ್ಲಿ ಪಡು ಬೊಂಡಂತಿಲ ಶ್ರೀ ಚಿತ್ತರಂಜನ್ ಶೆಟ್ಟಿಯವರ ಆಶ್ರಯ ಮನೆ ಅಂಗಳದಲ್ಲಿ ಮರಿಯಲದ ಮಿನದನ ಕಾರ್ಯಕ್ರಮ ಭಾನುವಾರ ಆಯೋಜಿಸಲಾಯಿತು. ಬಿ.ಚಿತ್ತರಂಜನ್ ಶೆಟ್ಟಿ ದಂಪತಿ ದೀಪವನ್ನು ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಟ್ರಸ್ಟ್ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಶುಭ ಹಾರೈಸಿದರು.

ದುಬಾಯ್ ಬಂಟರ ಸಂಘದ ಪ್ರಮುಖರಾದ ಸರ್ವೋತ್ತಮ ಶೆಟ್ಟಿ ದುಬಾಯ್,ಪಾರ್ಲೆಗುತ್ತು ಭುಜಂಗ ಶೆಟ್ಟಿ, ಮುಂಬಯಿ ಉದ್ಯಮಿ ಪಾದೆ ಅಜಿತ್ ರೈ, ಜಪ್ಪು ಶಶಿಧರ್ ಶೆಟ್ಟಿ, ಪ್ರಸಾದ್ ರೈ ಕಲ್ಲಿಮಾರು ಹೊಸಮನೆ, ದೇವಿ ಚರಣ್ ಶೆಟ್ಟಿ, ಅಡ್ಯಾರ್ ಪ್ರದೀಪ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ರೈ, ಶಮೀನಾ ಆಳ್ವ, ಪುಷ್ಪಾಕರ ಶೆಟ್ಟಿ, ಗಣೇಶ್ ಮಲ್ಲಿ, ಎಂ.ಸಿ ಶೆಟ್ಟಿ, ರಘುರಾಮ ಶೆಟ್ಟಿ, ನೇಮಿರಾಜ್ ಶೆಟ್ಟಿ, ಮೃದುಲಾಕ್ಷಿ ಶೆಟ್ಟಿ, ಗೀತಾ ಶೆಟ್ಟಿ, ಬಂಟ ಸಮುದಾಯದ ಪ್ರಮುಖರಾದ ಶಶಿರಾಜ್ ಕೊಳಂಬೆ, ಸುರೇಶ್ಚಂದ್ರ ಶೆಟ್ಟಿ, ಸಿ.ಎಸ್.ಭಂಡಾರಿ, ಜಗನ್ನಾಥ ಶೆಟ್ಟಿ, ವಿಜಯ ವಿಠಲನಾಥ ಶೆಟ್ಟಿ, ಪೂರ್ಣಿಮಾ ರೈ, ಆರತಿ ಆಳ್ವ, ಕುತ್ತಾರ ಗುತ್ತು ಚಂದ್ರಹಾಸ ಅಡ್ಯಂತಾಯ, ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು, ರತನ್ ಶೆಟ್ಟಿ, ಮಿಥುನ್ ರೈ, ಹಾಗೂ ಇತರ ವಲಯಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ರಾಜ್ ಗೋಪಾಲ್ ರೈ ಸ್ವಾಗತಿಸಿದರು, ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು, ತೆಂಗಿನಕಾಯಿ ಸುಲಿಯುವ, ಮಡಿಕೆ ಒಡೆಯುವ, ಸಂಗೀತ ಕುರ್ಚಿ, ಲಗೋರಿ, ಹಗ್ಗ ಜಗ್ಗಾಟ, ಸೇರಿದಂತೆ ಹಲವಾರು ಗ್ರಾಮೀಣ ಕ್ರೀಡೆಗಳನ್ನುಸಂಯೋಜಿಸಲಾಗಿತ್ತು

Leave a Reply