ಮನೆ ಸಕ್ರಮೀಕರಣ: ಶುಲ್ಕ ಬದಲಾವಣೆ

ಮನೆ ಸಕ್ರಮೀಕರಣ: ಶುಲ್ಕ ಬದಲಾವಣೆ

ಮ0ಗಳೂರು: ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಕಟ್ಟಿರುವ ನಮೆಗಳನ್ನು ಸಕ್ರಮಗೊಳಿಸಲು ಕರ್ನಾಟಕ ಭೂ ಕಂದಾಯ ಕಾಯಿದೆ 1964 ರ ಕಲಂ 94 ಸಿ ರಡಿಯಲ್ಲಿ ಅಕ್ಟೋಬರ್ 4 ರವರೆಗೆ ಮತ್ತು 94 ಸಿಸಿ ಅಡಿಯಲ್ಲಿ ಆಗಸ್ಟ್ 27 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ವರೆಗೆ ಅಜಿ ಸಲ್ಲಿಸದೆ ಇರುವವರು ನಿಗಧಿತ ಅವಧಿಯೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸರ್ಕಾರವು ಸಕ್ರಮಗೊಳಿಸಿರುವ ವಾಸದ ಮನೆಗಳು ಬಡವರಿಗೆ ಸಂಬಂಧಿಸಿರುವ ಕಾರಣ ಅವರಾರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹಾಲಿ ನಿಗಧಿಪಡಿಸಿರುವ ಮರ್ಗಸೂಚಿ ಬೆಲೆಯ ಶೇಕಡಾವರು ಶುಲ್ಕದ ಬದಲಿಗೆ ಕರ್ನಾಟಕ ಭೂ ಕಂದಾಯ ನಿಯಮಗಳು , 1966 ಕ್ಕೆ ಅವಶ್ಯವಿರುವ ತಿದ್ದುಪಡಿಯನ್ನು ಮಾಡಿರುತ್ತದೆ. ಅದರಂತೆ ,94 ಸಿ ರಡಿಯಲ್ಲಿ 30*40 ವಿಸ್ತೀರ್ಣದ ಮನೆ ಅಡಿ ಸ್ಥಳಕ್ಕೆ ರೂ. 400, ಪ.ಜಾ/ಪ.ಪಂ/ಅಂಗವಿಕಲರಿಗೆ ಹಾಗೂ ಮಾಜಿ ಸೈನಿಕರಿಗೆ ರೂ. 1000 ದಂತೆ, 40*60 ವಿಸ್ತೀರ್ಣದ ಮನೆ ಅಡಿಸ್ಥಳಕ್ಕೆ ರೂ. 400 ಪ.ಜಾತಿ/ಪ.ಪಂಗಡ/ ಅಂಗವಿಕಲರಿಗೆ ಹಾಗೂ ಮಜಿ ಸೈನಿಕರಿಗೆ ರೂ.2000 ದಂತೆ ಹಾಗೂ 50*80 ವಿಸ್ತೀರ್ಣದ ಮನೆ ಅಡಿ ಸ್ಥಳಕ್ಕೆ ರೂ.6000, ಪ.ಜಾ/ಪ.ಪಂ/ಅಂಗವಿಕಲರಿಗೆ ಹಾಗೂ ಮಾಜಿ ಸೈನಿಕರಿಗೆ ರೂ. 6000 ದಂತೆ ಶುಲ್ಕ ವಿಧಿಸಲಾಗಿದೆ.

ನಗರ ಪ್ರದೇಶದಲ್ಲಿ 20*30 ಮನೆ ಅಡಿ ಸ್ಥಳದ ವಿಸ್ತೀರ್ಣಕ್ಕೆ, ರೂ 10,000 ದಂತೆ ಪ.ಜಾ/ಪ.ಪಂ/ಅಂಗವಿಕಲರಿಗೆ ಹಾಗೂ ಮಾಜಿ ಸೈನಿಕರಿಗೆ ರೂ. 5000 ದಂತೆ ಶುಲ್ಕ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Leave a Reply

Please enter your comment!
Please enter your name here