ಮನ ಪರಿವರ್ತನೆಗೊಂಡು, ಭವಿಷ್ಯದ ಶಿಲ್ಪಿಗಳಾಗೊಣ – ವಂ ರಾಯ್ಸನ್ ಫೆರ್ನಾಂಡಿಸ್

ಮನ ಪರಿವರ್ತನೆಗೊಂಡು, ಭವಿಷ್ಯದ ಶಿಲ್ಪಿಗಳಾಗೊಣ – ವಂ ರಾಯ್ಸನ್ ಫೆರ್ನಾಂಡಿಸ್

ಉಡುಪಿ: ತಪ್ಪುಗಳಿಗಾಗಿ ಪಶ್ಚಾತಾಪಪಟ್ಟು ಮನಪರಿವರ್ತನೆಗೊಂಡು ಬಂಧಿಖಾನೆಯಿಂದ ಬಿಡುಗಡೆ ಹೊಂದಿ ನಮ್ಮಿಂದ ನಾವೇ ಭವಿಷ್ಯದ ಶಿಲ್ಪಿಗಳಾಗಬೇಕು ಎಂದು ಉಡುಪಿ ಶೋಕಮಾತಾ ಇಗರ್ಜಿಯ ಸಹಾಯಕ ಧರ್ಮಗುರು ವಂ ರೋಯ್ಸನ್ ಫೆರ್ನಾಂಡಿಸ್ ಹೇಳಿದರು.

prision-ministry-india-udupi-01

ಅವರು ಹಿರಿಯಡ್ಕದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಉಡುಪಿ ಧರ್ಮಪ್ರಾಂತ್ಯದ ಪ್ರಿಸನ್ ಮಿನಿಸ್ಟ್ರಿ ಇಂಡಿಯಾ ಸಂಸ್ಥೆಯ ಪಾಲಕರಾದ ಸಂತ ಮ್ಯಾಕ್ಸ್ ಮಿಲಿಯನ್ ಕೋಲ್ಬೆ ಇವರ ಹಬ್ಬದಾಚರಣೆಯ ಸಂದರ್ಭದಲ್ಲಿ ವಿಚಾರಣಾಧಿ ಕೈದಿಗಳನ್ನು ಉದ್ದೇಶಿಸಿ ಮಾತನಾಡಿದರು.

ನಾವೆಲ್ಲರೂ ಹುಟ್ಟುವಾಗ ಸ್ವತಂತ್ರರಾಗಿ ಹುಟ್ಟುತ್ತೇವೆ, ಆದರೆ ಬೆಳೆಯುತ್ತಾ ಬೆಳೆಯುತ್ತಾ ವಿವಿಧ ಸಂಕೋಲೆಗಳಲ್ಲಿ ಬಂಧಿತರಾಗುತ್ತೇವೆ. ಪರಿಸ್ಥಿತಿಯ ವಿಷಮಗಳಿಗೆಯಲ್ಲಿ ತಿಳಿದೋ ತಿಳಿಯದೆಯೋ ಮಾಡಿದ ತಪ್ಪಿನಿಂದಾಗಿ ಹಲವಾರು ವಿಚಾರಣಾಧಿ ಕೈದಿಗಳು ಇಂದು ಬಂಧಿಖಾನೆಯಲ್ಲಿದ್ದಾರೆ. ಭಾವನೆಗಳ ಕೈಯಲ್ಲಿ ಮನಸ್ಸುಕೊಟ್ಟು ಕ್ಷಣ ಮಾತ್ರದ ಸುಖ, ಸಂತೋಷಗಳತ್ತ ಚಿತ್ತ ಹರಿಸಿ ತಪ್ಪುಗಳನ್ನು ಮಾಡಬಾರದು. ನಾವ್ಯಾರೂ ಶೂನ್ಯರಲ್ಲ, ಎಲ್ಲರಿಗೂ ಆತ್ಮಶಕ್ತಿ ಇದೆ. ಬದುಕು ನೀರ ಮೇಲಿನ ಗುಳ್ಳೆ, ತಪ್ಪುಗಳಿಗಾಗಿ ಪಶ್ಚಾತಾಪಪಟ್ಟು ಮನವಪರಿವರ್ತನೆಗೊಂಡು ಬಂಧಿಖಾನೆಯಿಂದ ಬಿಡುಗಡೆ ಹೊಂದಿ ಸಮಾಜಮುಖಿಯಾಗಿ ನಮ್ಮ ಭವಿಷ್ಯವನ್ನು ನಾವೇ ರೂಪಿಸಲಿಕೊಳ್ಳಲು ಸಾಧ್ಯ ಎಂದರು.

prision-ministry-india-udupi-02

ಸಂಸ್ಥೆಯ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಫ್ರಾನ್ಸಿಸ್ ಕರ್ನೆಲಿಯೋ ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಸಂತ ಮ್ಯಾಕ್ಸ್ ಮಿಲಿಯನ್ ಕೋಲ್ಬೆಯವರ ಜೀವನದ ಕಿರು ಚಿತ್ರಣ ನೀಡಿ ಸರ್ವರಿಗೂ ಸ್ವಾಗತಿಸಿದರು.

ಜಿಲ್ಲಾ ಕಾರಾಗೃಹದ ಅಧೀಕ್ಷರಾದ ಶಿವಕುಮಾರ್ ಮಾತನಾಡಿ ಪ್ರಿಸನ್ ಮಿನಿಸ್ಟ್ರಿ ಇಂಡಿಯಾ ದೇಶದಲ್ಲಿರುವ ಎಲ್ಲಾ ಕಾರಾಗೃಹಗಳ ಅವಿಭಾಜ್ಯ ಅಂಗ. ಅವರ ಸಹಕಾರ ಪಡೆದು ಬಿಡುಗಡೆಗೊಂಡ ಕೈದಿಗಳು ಸನ್ಮಾರ್ಗದಲ್ಲಿ ನಡೆಯುವಂತಾಗಲಿ ಎಂದು ಶುಭ ಹಾರೈಸಿದರು.

ಕಾರ್ಯದರ್ಶಿ ಭಗಿನಿ ಮೆಲಾನಿಯರವರು ಸಂಸ್ಥೆಯ ಕಾರ್ಯಚಟುವಟಿಕೆಗಳ ವರದಿಯನ್ನು ಪ್ರಸ್ತುತಪಡಿಸಿದರು.

ಈ ಸಂದರ್ಭಧಲ್ಲಿ ಜಿಲ್ಲಾ ಕಾರಾಗೃಹಕ್ಕೆ ಸಂಸ್ಥೆಯು ಕೊಡಮಾಡಿದ ರೆಫ್ರಿಜರೇಟರನ್ನು ಅತಿಥಿಗಳು ಸಾಂಕೇತಿಕವಾಗಿ ಉದ್ಘಾಟಿಸಿದರು. ವಾಲ್ಟರ್ ಮಾರ್ಟಿಸ್ ವಂದಿಸಿದರು. ಆಲ್ವಿನ್ ಫೆರ್ನಾಂಡಿಸ್ ತಮ್ಮ ದೇಶಭಕ್ತಿ ಹಾಗೂ ಇತರ ಭಕ್ತಿಗೀತೆಗಳೊಂದಿಗೆ ಮನೋರಂಜನೆ ನೀಡಿದರು. ಗ್ರೆಶಿಯನ್ ಬುತೆಲ್ಲೊ ಕಾರ್ಯಕ್ರಮ ನಿರೂಪಸಿದರು.

Leave a Reply