ಮರಳು ಅಭಾವ ವಿರೋಧಿಸಿ ಕರ್ನಾಟಕ ಕಾರ್ಮಿಕ ವೇದಿಕೆ ಪ್ರತಿಭಟನೆ

ಉಡುಪಿ:  ಜಿಲ್ಲೆಯಾದ್ಯಂತ ಉಂಟಾಗಿರುವ ಮರಳು ಅಭಾವದ ವಿರುದ್ದ ಕರ್ನಾಟಕ ಕಾರ್ಮಿಕ ವೇದಿಕೆ ಜಿಲ್ಲಾಧಿಕಾರಿಗಳ ಕಛೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ವೇದಿಕೆಯ ಅಧ್ಯಕ್ಷ ರವಿ ಶೆಟ್ಟಿ ಉಡುಪಿ ಜಿಲ್ಲೆಯಾದ್ಯಂತ ಪ್ರತಿವರ್ಷ ಮರಳು ಕೃತಕ ಅಭಾವ ಎದುರಿಸುತ್ತಿದ್ದು ಇದರಿಂದ ಚಿಕ್ಕಪುಟ್ಟ ಮನೆ ಕಟ್ಟುವರಿಂದ ಹಿಡಿದು ದೊಡ್ಡ ಬಿಲ್ಡಿಂಗ್ ನಿರ್ಮಿಸುವವರಿಗೂ ತೊಂದರೆ ಆಗಿರುವುದು ನಿಜ. ಹಾಗೆಯೇ ಫೈನಾನ್ಸ್ ನಿಂದ ಸಾಲ ಪಡೆದು ಲಾರಿ ನಡೆಸುತ್ತಿರುವ ಸಾಮಾನ್ಯ ಮಾಲಿಕರ ಪರಿಸ್ಥಿತಿ ಇದಕ್ಕೂ ಭಿನ್ನ. ದಿನನಿತ್ಯ ಜೀವನಕ್ಕೆ ಆಧಾರವಾಗಿರುವ ಲಾರಿಯನ್ನು ಫೈನಾನ್ಸಿನವರು ಎಳೆದೊಯ್ಯುವ ಪರಿಸ್ಥಿತಿ ಉಂಟಾಗಿದೆ.

image001karnataka-karmika-vedike-protest-20160422 image002karnataka-karmika-vedike-protest-20160422 image003karnataka-karmika-vedike-protest-20160422 image005karnataka-karmika-vedike-protest-20160422 image007karnataka-karmika-vedike-protest-20160422

ಇದನ್ನೆಲ್ಲಾ ನಂಬಿಕೊಂಡು ಬದುಕುತ್ತಿರುವ ಕಾರ್ಮಿಕರ ಗೋಳು ಹೇಳತೀರದ್ದಾಗಿದ್ದು ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ಬಂದಂತಹ ಅಸಂಘಟಿತ ಕೂಲಿಕಾರ್ಮಿಕರು ಒಂದು ಕಡೆ ಬರದಿಂದ ತತ್ತರಿಸಿದ್ದು ಕೆಲಸವೂ ಇಲ್ಲದಂತಾಗಿ ಪರದಾಡುವ ಪರಿಸ್ಥಿತಿ ತಲುಪಿದ್ದು ಈ ಹಿಂದೆ ರೈತರು ಸಂಕಷ್ಟಿಕ್ಕೀಡಾಗಿ ಆತ್ಮಹತ್ಯೆ ದಾರಿ ತುಳಿದಂತೆಯೇ ಕಾರ್ಮಿಕರಿಗೂ ಆ ದುಸ್ಥಿತಿ ಬಂದೊದಗುವ ಲಕ್ಷಣಗಳು ಕಂಡು ಬರುತ್ತಿದ್ದು, ಇನ್ನು ಒಂದು ತಿಂಗಳಲ್ಲಿ ಮೀನು ಮೊಟ್ಟೆ ಇಡುವ ಸಂದರ್ಭವಾಗಿ ದ್ದುದರಿಂದ ಆ ಸಮಯದಲ್ಲಿ ಒಂದು ತಿಂಗಳು ಮರಳು ತೆಗೆಯುವಂತಿಲ್ಲ. ಬೇಸಿಗೆಯ ಎಲ್ಲಾ ದಿನಗಳು ಹೀಗೆ ಉರುಳಿ ಹೋದರೆ ಕಾರ್ಮಿಕನ ಗತಿಯೇನು ? ಮನೆ ಕಟ್ಟುವ ಕಟ್ಟಿಸುವವರ ಗತಿಯೇನು ? ಮರಳು ಆಭಾವದಿಂದ ಜಿಲ್ಲಾಯಾದ್ಯಂತ ವ್ಯವಹಾರ ವಹಿವಾಟಿನ ಮೇಲೆ ಬಾರಿ ಪರಿಣಾಮ ಬೀರಿದ್ದು ನಷ್ಟದ ಹಾದಿ ತುಳಿಯುತ್ತಿದ್ದಾರೆ.
ಆದ್ದರಿಂದ ಮರಳು ನೀತಿ ಜಾರಿಗೆ ಬರುವವರೆಗೆ ಮಾನವೀಯತೆಯಿಂದ ಕಾರ್ಮಿಕರ ಹಿತದೃಷ್ಟಿ ಆಧರಿಸಿ ನಾಳೆಯಿಂದಲೇ [23-04-2016] ಮರಳು ತೆಗೆಯಲು ಅನುವು ಮಾಡಿಕೊಡುವುದು, ಪ್ರತಿವರ್ಷವೂ ಮರಳು ಸಮಸ್ಯೆ ಉಲ್ಬಣಿಸುತ್ತಿದ್ದು ಅದಕ್ಕೆ ಮೊದಲೇ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಈ ರೀತಿ ಸಮಸ್ಯೆ ಆಗದ ರೀತಿಯಲ್ಲಿ ನೋಡಿಕೊಳ್ಳುವುದು. ಹೊರ ರಾಜ್ಯ, ಹೊರ ಜಿಲ್ಲೆಗೆ ಇಲ್ಲಿಂದ ಮರಳು ಹೋಗದ ರೀತಿ ಮತ್ತು ಇಲ್ಲಿಗೆ ಬಾರದ ರೀತಿ ನೋಡಿಕೊಳ್ಳುವಂತೆ ಆಗ್ರಹಿಸಿದರು.
ಒತ್ತಾಯಕ್ಕೆ ಮಣಿದ ಜಿಲ್ಲಾಡಳಿತ ನಾಳೆಯಿಂದಲೇ ಮರಳುಗಾರಿಕೆ ಪುನರಾರಂಭ
ಕರ್ನಾಟಕ ಕಾರ್ಮಿಕರ ವೇದಿಕೆ (ರಿ.) ಉಡುಪಿ ಜಿಲ್ಲೆ,ಲಾರಿ ಮಾಲಕರ ಸಂಘ ಕಟಪಾಡಿ, ಶಾರದಾ ಆಟೋ ಮತ್ತು ಸುಭಾಸ್‍ನಗರ ಆಟೋ ಯೂನಿಯನ್ ಮತ್ತು ರೋಟರಾಕ್ಟ್ ಕ್ಲಬ್ ಸುಭಾಸ್‍ನಗರ ಹಾಗೂ ಇನ್ನಿತರ ಸಂಘ-ಸಂಸ್ಥೆಗಳೊಂದಿಗೆ ಸೇರಿ ಉಡುಪಿಯ ಕ್ಲಾಕ್ ಟವರ್‍ನಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ನಡೆದ ಬೃಹತ್ ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತ ನಾಳೆಯಿಂದಲೇ ಮರಳುಗಾರಿಕೆಯನ್ನು ಪುನರಾರಂಭಿಸಲು ಅನುಮತಿ ನೀಡಿತು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಮಿಕರ ವೇದಿಕೆ (ರಿ.) ಉಡುಪಿ ಜಿಲ್ಲೆಯ ಅಧ್ಯಕ್ಷರಾದ ರವಿ ಶೆಟ್ಟಿ ಮಾತನಾಡಿ ಯಾವುದೇ ಅಧಿಕೃತ ಮಾಹಿತಿಯಿಲ್ಲದೆ ಪತ್ರಿಕಾ ಪ್ರಕಟಣೆ ನೀಡಿ ಕಾರ್ಮಿಕರ ಹೋರಾಟದ ದಿಕ್ಕು ತಪ್ಪಿಸಲು ಯತ್ನಿಸಿದ ಹೊೈಗೆ ದೋಣಿ ಸಂಘಟನೆಯ ಪತ್ರಿಕಾ ಹೇಳಿಕೆಯ ಬಗ್ಗೆ ಕಿಡಿಕಾರಿದರು. ಇದರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

Leave a Reply

Please enter your comment!
Please enter your name here