ಮರಳು ಸಮಸ್ಯೆ; ಏ22 ರಂದು ಕರ್ನಾಟಕ ಕಾರ್ಮಿಕ ವೇದಿಕೆಯಿಂದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ

ಉಡುಪಿ: ಜಿಲ್ಲೆಯಾದ್ಯಂತ ಉಂಟಾಗಿರುವ ಕೃತಕ ಮರಳಿನ ಸಮಸ್ಯೆಯನ್ನು ಕೂಡಲೇ ಪರಿಹರಿಸುವಂತೆ ಒತ್ತಾಯಿಸಿ ಕರ್ನಾಟಕ ಕಾರ್ಮಿಕ ವೇದಿಕೆ ಉಡುಪಿ ಜಿಲ್ಲಾ ಘಟಕ ಲಾರಿ ಮ್ಹಾಲಕರು ಹಾಗೂ ಚಾಲಕರ ಸಂಘ, ಕಟಪಾಡಿ ವಲಯ ಹಾಗೂ ಮರಳು ಧಕ್ಕೆಯವರ ಮತ್ತು ಹಲವು ಸಂಘಟನೆಗಳು ಸೇರಿ ಜಿಲ್ಲಾಧಿಕಾರಿಗಳ ಕಚೇರಿಗೆ ಏಪ್ರಿಲ್ 22 ರಂದು ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷ ರವಿ ಶೆಟ್ಟಿ ಹೇಳಿದರು.

karnataka-karmika-vedike-20160419

ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಉಡುಪಿ ಜಿಲ್ಲೆಯಲ್ಲಿ ಸೃಷ್ಟಿಯಾಗಿರುವ ಕೃತಕ ಮರಳು ಅಭಾವದಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದು, ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನೆರೆ ಹೊರೆಯ ಜಿಲ್ಲೆಯಲ್ಲಿ ಇಲ್ಲದ ಸಮಸ್ಯೆ ಕೇವಲ ಉಡುಪಿ ಜಿಲ್ಲೆಯಲ್ಲಿ ಮಾತ್ರ ಉಲ್ಬಣಗೊಂಡಿದೆ. ಮರಳು ತೆಗೆಯುವ ಪರ್ಮಿಟ್ ಜನವರಿ 22 ಕ್ಕೆ ಮುಗಿದಿದ್ದು, ಚುನಾವಣೆ ಪ್ರಯುಕ್ತ ದಿನಾಂಕ ಮುಗಿದಿದ್ದರೂ ನಿರಂತರವಾಗಿ ಮರಳು ತೆಗೆಯುವುದು ಹಾಗೂ ಸರಬರಾಜು ಮಾಡುವುದರಲ್ಲಿ ಯಾವುದೇ ರೀತಿಯ ತೊಂದರೆಯಾಗಲಿಲ್ಲ. ಆದರೆ ಚುನಾವಣೆ ಮುಗಿದ ತಕ್ಷಣ ಮರಳು ಸರಬರಾಜನ್ನು ಸಂಪೂರ್ಣ ಬಂದ್ ಮಾಡಿರುವುದರ ಹಿಂದಿನ ಮರ್ಮ ಏನು ಎನ್ನುವುದು ತಿಳಿದಿಲ್ಲ.

karnataka-karmika-vedike-20160419-01

ಜಿಲ್ಲೆಯಲ್ಲಿ ಮರಳುಗಾರಿಕೆಯನ್ನು ಸಂಪೂರ್ಣ ನಿರ್ಭಂಧಿಸಿದ್ದು ಆದರೂ ಜಿಲ್ಲೆಯಲ್ಲಿ ಅಕ್ರಮವಾಗಿ ಮರಳು ಸರಬರಾಜು ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, ಜಿಲ್ಲಾಡಳಿತ ಇದನ್ನು ಸರಿಪಡಿಸಲು ಜಿಲ್ಲಾಡಳಿತ ವಿಫಲವಾಗಿದೆ
ಜಿಲ್ಲಾಡಳಿತದ ಈ ಕ್ರಮವನ್ನು ಖಂಡಿಸಿ ಕೂಡಲೇ ಮರಳಿನ ಸಮಸ್ಯೆಯನ್ನು ಸರಿಪಡಿಸಬೇಕು ಎಂಬ ಒತ್ತಾಯದೊಂದಿಗೆಕರ್ನಾಟಕ ಕಾರ್ಮಿಕ ವೇದಿಕೆ ಉಡುಪಿ ಜಿಲ್ಲಾ ಘಟಕ ಲಾರಿ ಮ್ಹಾಲಕರು ಹಾಗೂ ಚಾಲಕರ ಸಂಘ, ಕಟಪಾಡಿ ವಲಯ ಹಾಗೂ ಮರಳು ಧಕ್ಕೆಯವರ ಮತ್ತು ಹಲವು ಸಂಘಟನೆಗಳು ಸೇರಿ ಜಿಲ್ಲಾಧಿಕಾರಿಗಳ ಕಚೇರಿಗೆ ಏಪ್ರಿಲ್ 22 ರಂದು ಮುತ್ತಿಗೆ ಹಾಕಲು ನಿರ್ಧರಿಸಿದ್ದು, ಅಂದು ಬೆಳಿಗೆ 7 ಗಂಟೆಗೆ ನಗರದ ಕ್ಲಾಕ್ ಟವರಿನಿಂದ ಪ್ರತಿಭಟನೆ ಆರಂಭಿಸಿ ಜಿಲ್ಲಾಧಿಕಾರಿ ಕಚೇರಿ ವರೆಗೆ ಜಾಥಾದ ಮೂಲಕ ತೆರಳಿ ಮುತ್ತಿಗೆ ಹಾಕಲಾಗುವುದು ಎಂದರು.
ಸುದ್ದಿಗೋಷ್ಟಿಯಲ್ಲಿ ಲಾರಿ ಚಾಲಕ ಮ್ಹಾಲಕ ಸಂಘದ ರಾಘವೇಂದ್ರ ಶೆಟ್ಟಿ, ವೇದಿಕೆಯ ಪ್ರಧಾನ ಕಾರ್ಯದರ್ಶಿ ರವಿಶಾಸ್ತ್ರಿ ಬನ್ನಂಜೆ, ಉಪಾಧ್ಯಕ್ಷ ಸುರೇಶ್ ಸೇರಿಗಾರ್, ಮಹಿಳಾಧ್ಯಕ್ಷೆ ಚಂದ್ರಿಕಾ ಎಸ್ ಶೆಟ್ಟಿ ಉಪಸ್ಥಿತರಿದ್ದರು.

Leave a Reply