ಮಲ್ಪೆ ಸಣ್ಣ ವ್ಯಾಪಾರಸ್ಥರ ಸಂಘದಿಂದ ಕರ್ನಾಟಕ ಕಾರ್ಮಿಕರ ವೇದಿಕೆಗೆ ಮನವಿ  

ಉಡುಪಿ: ಮಲ್ಪೆ ಬೀಚ್ ಸಣ್ಣ ವ್ಯಾಪಾರಸ್ಥರ ಸಂಘದಿಂದ ಅವರಿಗಾದ ಅನೇಕ ತೋದರೆಗಳಿಗೆ ಮತ್ತು ಸಂಘದ ನ್ಯಾಯಯುತ ಹೋರಾಟಕ್ಕೆ ಬೆಂಬಲ ಕೊಡುವಂತೆ ಕೋರಿ ನಿಯೋಗವು ಉಡುಪಿ ಜಿಲ್ಲಾ ಕರ್ನಾಟಕ ಕಾರ್ಮಿಕರ ವೇದಿಕೆಯ ಜಿಲ್ಲಾಧ್ಯಕ್ಷರಿಗೆ ಮನವಿ ಸಲ್ಲಿಸಿದರು.

20160224-karnataka-karmika-vedike-003 20160224-karnataka-karmika-vedike-004

ಮನವಿಯನ್ನು ಸ್ವೀಕರಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ರವಿ ಶೆಟ್ಟಿ, ಸಣ್ಣ ವ್ಯಾಪಾರಸ್ಥರು ಬಹಳ ಹಿಂದಿನಿಂದಲೂ ಮಲ್ಪೆಯಲ್ಲಿ ವ್ಯಾಪಾರ ನಡೆಸಿಕೊಂಡು ಬರುತ್ತಿರುವುದು ತಿಳಿದು ಬಂದಿರುತ್ತದೆ. ಯಾವುದೇ ಸರ್ಕಾರವಿರಲಿ, ಜಿಲ್ಲಾಡಳಿತವಿರಲಿ ಬಡ ಕೂಲಿ ಕಾರ್ಮಿಕ ವ್ಯಾಪಾರಸ್ಥರಿಗೆ ಯಾವುದೇ ರೀತಿಯ ಅನ್ಯಾಯ ಆಗದಂತೆ, ನೋಡಿಕೊಳ್ಳಬೇಕೆಂದು ಸ್ಥಳೀಯಾಡಳಿತಕ್ಕೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಣ್ಣ ವ್ಯಾಪಾರ ಸಂಘದ ಅಧ್ಯಕ್ಷರಾದ ವಾಸುದೇವ್, ಕಾರ್ಯದರ್ಶಿಗಳಾದ ಮೋಹನ್, ರಾಮಣ್ಣ, ಗಿರೀಶ್, ಹರೀಶ್, ಕಾನೂನು ಸಲಹೆಗಾರರಾದ ಸದಾಶಿವ್ ಅಮೀನ್, ವೀರಣ್ಣ ಕುರುವತ್ತಿ ಗೌಡರ್, ನಿಯಾಬ್ ಮತ್ತಿತರರು ಉಪಸ್ಥಿತರಿದ್ದರು.

Leave a Reply