ಮಳೆಗಾಗಿ ಶಾಸಕ ಡಿ ವೇದವ್ಯಾಸ ಕಾಮತ್ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪ್ರಾರ್ಥನೆ

ಮಳೆಗಾಗಿ ಶಾಸಕ ಡಿ ವೇದವ್ಯಾಸ ಕಾಮತ್ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪ್ರಾರ್ಥನೆ

ಮಂಗಳೂರು: ಮಂಗಳೂರು ಮಹಾನಗರದಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಿದ್ದು, ಶೀಘ್ರದಲ್ಲಿ ಮಳೆ ಬಂದು ನಾಗರಿಕರಿಗೆ ಅತ್ಯವಶ್ಯಕವಾದ ನೀರು ಸಿಗುವಂತಾಗಲು ದೇವರು ಅನುಗ್ರಹಿಸಬೇಕು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪ್ರಾರ್ಥಿಸಿದರು.

ಈ ಸಂದರ್ಭ ಶಾಸಕರೊಂದಿಗೆ ದೇವಸ್ಥಾನದ ಟ್ರಸ್ಟಿ ಪ್ರಶಾಂತ್ ರಾವ್, ಮಾಜಿ ಮನಪಾ ಸದಸ್ಯರಾದ ಪೂರ್ಣಿಮಾ, ಚಂದ್ರಕಾಂತ ನಾಯಕ್, ವಾರ್ಡ್ ಬಿಜೆಪಿ ಅಧ್ಯಕ್ಷ ಮುರಳಿಧರ ನಾಯಕ್, ಬಿಜೆಪಿ ಮುಖಂಡರಾದ ವಸಂತ ಜೆ ಪೂಜಾರಿ, ರಮೇಶ್ ಹೆಗ್ಡೆ, ಸುಧಾಕರ ಜೋಷಿ, ಸೂರಜ್, ಶಿವಾನಂದ,ಮೋಹನ್ ಆಚಾರ್ಯ, ಗೋಪಾಲಕೃಷ್ಣ ಭಟ್ ಸಹಿತ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು