ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹಿಂದಿರುಗುತ್ತಿದ್ದ ವ್ಯಕ್ತಿಯನ್ನು ಕಡಿದು ಕೊಲೆ

ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹಿಂದಿರುಗುತ್ತಿದ್ದ ವ್ಯಕ್ತಿಯನ್ನು ಕಡಿದು ಕೊಲೆ

ಸುಳ್ಯ: ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹಿಂದಿರುಗುತ್ತಿದ್ದ ವ್ಯಕ್ತಿಯೋರ್ವರನ್ನು ಮಾರಕಾಯುಧಗಳಿಂದ ಕೊಲೆಗೈದ ಘಟನೆ ಶುಕ್ರವಾರ ಸುಳ್ಯ ತಾಲೂಕಿನ ಐವರ್ನಾಡು ಎಂಬಲ್ಲಿ ನಡೆದಿದೆ.

ಮೃತರನ್ನು ಬೆಳ್ಳಾರೆಯ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ನೇಲ್ಯಮಜಲು ಎಂದು ಗುರುತಿಸಲಾಗಿದೆ.

ismail-murder-20160923 image001ismail-murder-20160923-001 image002ismail-murder-20160923-002 image003ismail-murder-20160923-003 image004ismail-murder-20160923-004 image005ismail-murder-20160923-005

ಇಸ್ಮಾಯಿಲ್ ಅವರು ಶುಕ್ರವಾರ ಮಧ್ಯಾಹ್ನ ಐವರ್ನಾಡು ಮಸೀದಿಯಲ್ಲಿ ನಮಾಜು ಮುಗಿಸಿ ಹಿಂದಿರುಗುತ್ತಿದ್ದ ವೇಳೆ ತಂಡವೊಂದು ಅವರ ಮೇಲೆ ತಲವಾರಿನಿಂದ ಗಂಭೀರವಾಗಿ ಧಾಳಿ ನಡೆಸಿ ಪರಾರಿಯಾಗಿದೆ. ಗಂಭೀರ ಗಾಯಗೊಂಡ ಇಸ್ಮಾಯಿಲ್ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply