ಮಹಿಳಾ ದಿನಾಚರಣೆ : ಪೂರ್ಣಿಮಾ ಜನಾರ್ಧನ, ಪ್ರಜ್ಞಾ ಕೊಡವೂರಿಗೆ ಸನ್ಮಾನ

ಮಹಿಳಾ ದಿನಾಚರಣೆ : ಪೂರ್ಣಿಮಾ ಜನಾರ್ಧನ, ಪ್ರಜ್ಞಾ ಕೊಡವೂರಿಗೆ ಸನ್ಮಾನ

ಉಡುಪಿ:- ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಜೇಸಿಐ ಉಡುಪಿ ಸಿಟಿ ವತಿಯಿಂದ ಮಾ,8 ಬುಧವಾರ ಕೊಡವೂರಿನಲ್ಲಿ ಸಾಹಿತಿ ಸಂಘಟಕಿ ಪೂರ್ಣಿಮಾ ಜನಾರ್ಧನ ಅವರಿಗೆ ಮಾನವತಾ ರತ್ನ ಮತ್ತು ರಾಷ್ಟ ಮಟ್ಟದ ವಾಲಿಬಾಲ್ ಆಟಗಾರ್ತಿ ಪ್ರಜ್ಞಾ ಕೊಡವೂರು ರವರಿಗೆ ಖೇಲ್ ರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜೇಸಿಐ ವಲಯ ನಿಕಟ ಪೂರ್ವ ಅದ್ಯಕ್ಷ ಸಂದೀಪ್ ಕುಮಾರ್,ಜೇಸಿಐ ಉಡುಪಿ ಸಿಟಿ ಅದ್ಯಕ್ಷ ಕರುಣಾಕರ ಬಂಗೇರ,ವಲಯಾಧಿಕಾರಿ ರಾಘವೇಂದ್ರ ಪ್ರಭು ಕರ್ವಾಲು,ಜನಾರ್ಧನ ಕೊಡವೂರು,ಜೇಸಿರೆಟ್ ಅದ್ಯಕ್ಷೆ ಅಕ್ಷತಾ ಕೆ.ಎ,ಜಗದೀಶ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.