ಮಹಿಳೆಯ ಜೊತೆ ಚಿಲ್ಲರೆ ಹಣದ ವಿವಾದ ; ನದಿಗೆ ಹಾರಿದ ಬಸ್ ಕಂಡಕ್ಟರ್

ಮಹಿಳೆಯ ಜೊತೆ ಚಿಲ್ಲರೆ ಹಣದ ವಿವಾದ ; ನದಿಗೆ ಹಾರಿದ ಬಸ್ ಕಂಡಕ್ಟರ್

ಸುಬ್ರಹ್ಮಣ್ಯ : ಬಸ್ ಪ್ರಯಾಣಿಕ ಮಹಿಳೆಯೊಬ್ಬಳ ಜೊತೆ ಚಿಲ್ಲರೆ ಹಣ ನೀಡುವ ಕುರಿತ ವಿವಾದಿಂದ ಬೇಸತ್ತ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಕುಮಾರಾಧಾರ ನದಿಗೆ ಹಾರಿದ ಘಟನೆ ನಡೆದಿದೆ
ಮೃತ ಕಂಡಕ್ಟರನ್ನು ವಾಮಂಜೂರು ನಿವಾಸಿ ದೇವದಾಸ (42) ಎಂದು ಗುರುತಿಸಲಾಗಿದೆ
ಬಸ್ ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿತ್ತು.ಮಹಿಳಾ ಪ್ರಯಾಣಿಕೆ ಕಂಡಕ್ಟರ್ ದೇವದಾಸ ಬಳಿ ತಾನು ರೂ.500 ನೀಡಿದ್ದೇನೆ, ನನಗೆ ಚಿಲ್ಲರೆ ಕೊಡಬೇಕೆಂದುಹೇಳಿದಾಗ, ಅದನ್ನು ಒಪ್ಪದ ದೇವದಾಸ ನೀವು ರೂ.100ರ ನೋಟು ಕೊಟ್ಟಿದ್ದೀರಿ ಎಂದು ಹೇಳಿದರು. ಇದರಿಂದ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಕಡಬ ಪೊಲೀಸ್ ಠಾಣೆಯಲ್ಲಿ ಈ ಕುರಿತು ಮಾತುಕತೆ ನಡೆದು ಬಸ್ ತನ್ನ ಪ್ರಯಾಣ ಮುಂದುವರಿಸಿತು. ಆದರೆ ಮಹಿಳಾ ಪ್ರಯಾಣಿಕೆ ಮತ್ತೆ ಚಿಲ್ಲರೆ ಪ್ರಶ್ನೆಯನ್ನೆತ್ತಿ ಕಂಡಕ್ಟರ್ ಜೊತೆ ವಾದ ಬೆಳೆಸಿದರು.ಬೇಸತ್ತು ಹೊಳೆಗೆ ಹಾರಿದಬಸ್ ಕಂಡಕ್ಟರ್ ಈ ಘಟನೆಯಿಂದ ಬೇಸತ್ತು ಹೊಳೆಗೆ ಹಾರಿದರು. ಕೂಡಲೇ ಬಸ್ಸಿನ ಚಾಲಕ ಬ್ರಹ್ಮಣ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೀರಲ್ಲಿ ಕೊಚ್ಚಿಹೋದ ಕಂಡಕ್ಟರ್ನ ಶೋಧ ಕಾರ್ಯ ಆರಂಭವಾಗಿದೆ.ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿ ಗೋಪಾಲ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Leave a Reply