ಮಹಿಳೆ ಮೇಲೆ ಹಲ್ಲೆ ; ಸೇವಾದಳದ ಸಂಚಾಲಕ ಅಶ್ರಫ್ ಬಂಧನ

ಮಹಿಳೆ ಮೇಲೆ ಹಲ್ಲೆ ; ಸೇವಾದಳದ ಸಂಚಾಲಕ ಅಶ್ರಫ್ ಬಂಧನ

ಮಂಗಳೂರು: ಮಹಿಳೆ ಮತ್ತು ಆಕೆಯ ಮಗಳ ಮೇಲೆ ಹಲ್ಲೆ ನಡೆಸಿದ್ದಕ್ಕೆ ಸಂಬಂಧಿಸಿ ಜಿಲ್ಲಾ ಸೇವಾದಳ ಸಂಚಾಲಕ ಅಶ್ರಫ್ ಅವರನ್ನು ಸೋಮವಾರ ಪೋಲಿಸರು ಬಂಧಿಸಿದ್ದಾರೆ.

ಮಾಹಿತಿಗಳ ಪ್ರಕಾರ ಸೋಮವಾರ ಸಂಜೆ ಜೋನ್ ಮೊಂತೆರೊ ಎಂಬವರು ತನ್ನ ಪತ್ನಿ ಹಾಗೂ ಮಗಳೊಂದಿಗೆ ವಸ್ತುಗಳ ಖರೀದಿಗಾಗಿ   ತಮ್ಮ ಕಾರಿನಲ್ಲಿ ಹೊರಟಿದ್ದು, ತಮ್ಮ ಸಹರಾ ರೆಸಿಡೆನ್ಸಿ ಹೊರಬರುವ ದಾರಿಯಲ್ಲಿ ಅಶ್ರಫ್ ಅವರು ತನ್ನ ಕಾರನ್ನು ದಾರಿಗೆ ಅಡ್ಡವಾಗಿ ನಿಲ್ಲಿಸಿದ್ದರು ಎನ್ನಲಾಗಿದೆ. ಈ ವೇಳೆ ಜೋನ್ ಮೊಂತೆರೊ ಅಶ್ರಫ್ ಅವರ ಬಳಿ ಕಾರನ್ನು ದಾರಿಯಿಂದ ತೆಗೆಯುವಂತೆ ವಿನಂತಿಸಿದ್ದು, ಅವರು ನಿರಾಕರಿಸಿದ್ದಲ್ಲದೆ ಕೆಟ್ಟ ಶಬ್ಬಗಳಿಂದ ಬೈದು ಜೋನ್ ಅವರ ಪತ್ನಿ ಹಾಗೂ ಮಗಳ ಮೇಲೆ ಹಲ್ಲೆ ನಡೆಸಿದರು ಎನ್ನಲಾಗಿದೆ. ತಾಯಿ ಮತ್ತು ಮಗು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಕುರಿತು ಮ್ಯಾಂಗಲೋರಿಯನ್ ನೊಂದಿಗೆ ಮಾತನಾಡಿದ ಜೋನ್ ಅವರ ಪತ್ನಿ ನಾವು ಶಾಪಿಂಗ್ ಮಾಡುವ ಸಲುವಾಗಿ ಹೊರಗಡೆ ಹೊರಟಿದ್ದು, ಅಶ್ರಫ್ ತನ್ನ ವಾಹನವನ್ನು ನಿಲ್ಲಿಸಿ ಹೊರಹೋಗುವ ದಾರಿಯನ್ನು ತಡೆಗಟ್ಟಿದ್ದರು. ನಾನು ಕಾರಿನಿಂದ ಇಳಿದು ಅಶ್ರಫ್ ಅವರಲ್ಲಿ ಕಾರನ್ನು ತೆಗೆದು ದಾರಿಬಿಡುವಂತೆ ಕೋರಿಕೊಂಡೆ ಅದಕ್ಕೆ ಅವರು ಕೆಟ್ಟ ಭಾಷೆಯನ್ನು ಬಳಿಸಿದ್ದು ಇದಕ್ಕೆ ಆಕ್ಷೇಪಿಸಿದ್ದಕ್ಕೆ ತನ್ನ ಮೇಲೆ ಹಲ್ಲೆ ನಡೆಸಿದರು. ಬಳಿಕ ಅಪಾರ್ಟ್ ಮೆಂಟಿನ ಇತರ ನಿವಾಸಿಗಳು ಕೂಡ ಕಾರನ್ನು ತೆಗೆಯುವಂತೆ ವಿನಂತಿಸಿದ ವೇಳೆ ನನ್ನ ಮಗಳ ಮೇಲೆಯೂ ಕೂಡ ಹಲ್ಲೆ ನಡೆಸಿದ್ದಾರೆ. ಅಶ್ರಫ್ ಅವರು ಕಳೆದ ವರ್ಷ ಅಪಾರ್ಟ್ ಮೆಂಟಿನ ವಾಚ್ ಮೆನ್ ಮೇಲೆ ಕೂಡ ಹಲ್ಲೆ ನಡೆಸಿದ್ದರು ಎಂದರು.

ಅಶ್ರಫ್ ಅವರ ವಿರುದ್ದ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅವರನ್ನು ಬಂಧಿಸಲಾಗಿದೆ. ಸೆಕ್ಷನ್ 427, 323 ಹಾಗೂ 354 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆಶ್ರಫ್ ಅವರು ಕೂಡ ಪ್ರತಿದೂರನ್ನು ಜೋನ್ ಮೊಂತೆರೋ ವಿರುದ್ದ ದಾಖಲಿಸಿದ್ದಾರೆ.

Leave a Reply