ಮಾಣಿ : ಪೇರಮೊಗ್ರುವಿನಲ್ಲಿ ಮೆಹ್ಫಿಲೇ ಮೌಲಿದ್

ಮಾಣಿ : ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಆಶ್ರಯದಲ್ಲಿ ಪೇರಮೊಗ್ರು ತಾಜುಲ್ ಉಲಮಾ ಕಾಟೇಜ್‍ನಲ್ಲಿ ಇತ್ತೀಚೆಗೆ ಮೆಹ್ಫಿಲೇ ಮೌಲಿದ್ ಕಾರ್ಯಕ್ರಮ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕೆದಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮುಹಮ್ಮದ್ ಜಿ ವಹಿಸಿದ್ದರು. ಎಸ್ಸೆಸ್ಸೆಫ್ ಪುತ್ತೂರು ಡಿವಿಶನ್ ಕಾರ್ಯದರ್ಶಿ ಸಿದ್ದೀಕ್ ಕಬಕ ಉದ್ಘಾಟಿಸಿದರು. ಎಸ್ಸೆಸ್ಸೆಫ್ ದ.ಕ.ಜಿಲ್ಲಾ ಸದಸ್ಯ ಹನೀಫ್ ಸಖಾಫಿ ಉದ್ಘಾಟಿಸಿದರು.

ಮಾಣಿ ದಾರುಲ್ ಇರ್ಶಾದ್ ನಿರ್ವಹಣಾ ಕಾರ್ಯದರ್ಶಿ ಮುಹಮ್ಮದ್ ಶರೀಫ್ ಸಖಾಫಿ ಮಾಣಿ ಮುಖ್ಯ ಪ್ರಭಾಷಣಗೈಯ್ದರು. ಹಾಫಿಳ್ ಅನಸ್ ನೆಲ್ಯಾಡಿ ಸಂದೇಶ ಭಾಷಣ ಮಾಡಿದರು. ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಅಧ್ಯಕ್ಷ ಹಾರಿಸ್ ಮದನಿ ನೇತೃತ್ವದಲ್ಲಿ ಮೌಲಿದ್ ಮಜ್ಲಿಸ್ ನಡೆಯಿತು. ಬಳಿಕ ಶಾಂತಿನಗರ ದರ್ಸ್ ವಿದ್ಯಾರ್ಥಿಗಳಿಂದ ಆಕರ್ಷಕ ಬುರ್ದಾ ಆಲಾಪನೆ ನಡೆಯಿತು. ಈ ಸಭೆಯಲ್ಲಿ ತಹ್ಲೀಲ್ ಸಮರ್ಪಣೆ ನಡೆಸಿ ಪ್ರಾರ್ಥಿಸಲಾಯಿತು.

ಎಸ್‍ವೈಎಸ್ ಸೂರಿಕುಮೇರ್ ನಿರ್ದೇಶಕ ಯೂಸುಫ್ ಹಾಜಿ, ಎಸ್ಸೆಸ್ಸೆಫ್ ಪುತ್ತೂರು ಡಿವಿಶನ್ ಕ್ಯಾಂಪಸ್ ಕಾರ್ಯದರ್ಶಿ ಶಫೀಖ್ ಈಶ್ವರಮಂಗಿಲ, ಎಸ್‍ವೈಎಸ್ ಬುಡೋಳಿ ಅಧ್ಯಕ್ಷ ಇಬ್ರಾಹಿಂ ಹಾಜಿ ಶೇರಾ, ಬದ್ರಿಯಾ ಜುಮಾ ಮಸೀದಿ ಪೇರಮೊಗ್ರು ಮಾಜಿ ಅದ್ಯಕ್ಷ ಇಸ್ಮಾಈಲ್ ಹಾಜಿ ಕಲ್ಲಾಜೆ, ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಮಾಜಿ ಕಾರ್ಯದರ್ಶಿ ಸ್ವಾದಿಖ್ ಕಡಂಬು, ಎಸ್‍ವೈಎಸ್ ಪೆರ್ನೆ ಸೆಂಟರ್ ಪ್ರಮುಖರಾದ ಹನೀಫ್ ಮುಸ್ಲಿಯಾರ್, ಹಮೀದ್ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಗಡಿಯಾರ್ ಕಾರ್ಯಕ್ರಮ ನಿರೂಪಣೆಗೈಯ್ದರು. ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಕೋಶಾಧಿಕಾರಿ ಅಶ್ರಫ್ ಜಿ.ಎಂ ಸ್ವಾಗತಿಸಿ, ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಕಾರ್ಯದರ್ಶಿ ಸಲೀಮ್ ಮಾಣಿ ಧನ್ಯವಾದ ಸಲ್ಲಿಸಿದರು.

Leave a Reply

Please enter your comment!
Please enter your name here