ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಫಘಾತಕ್ಕೆ ಮೂರು ಬಲಿ

ಬಂಟ್ವಾಳ: ತಾಲೂಕಿನ ನೇರಳಕಟ್ಟೆ ಸಮೀಪದ ಕೊಡಾಜೆಯ ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ನಡೆದ ಓಮ್ನಿ ಕಾರು ಹಾಗೂ ಕೆ ಎಸ್ ಆರ್ ಟಿ ಸಿ ಬಸ್ ನಡುವಿನ ಭೀಕರ ರಸ್ತೆ ಅಫಘಾತದಲ್ಲಿ ಮೂರು ಮಂದಿ ಸ್ಥಳದಲ್ಲೇ ಸಾವಿಗೀಡಾಗಿ, ಆರು ಮಂದಿ ಗಂಭಿರ ಗಾಯಗೊಂಡ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಮೃತರನ್ನು ಪುತ್ತೂರಿನ ಸಂಜೀವ ಶೆಟ್ಟಿ ಜವಳಿ ಮಳಿಗೆ ಸಿಬಂದಿಗಳಾದ ಸಂಧ್ಯಾ, ನಯನಾ ಹಾಗೂ ಕಾರಿನ ಚಾಲಕ ತೇಜಸ್ ಎಂದು ಗುರುತಿಸಲಾಗಿದೆ.

image001accident-maani-bcroad-20160612 image002accident-maani-bcroad-20160612 image003accident-maani-bcroad-20160612 image004accident-maani-bcroad-20160612 image005accident-maani-bcroad-20160612 ksrtc-bus-car-collision-dead-spot-20160612-00

ಮಾಹಿತಿಗಳ ಪ್ರಕಾರ ಪುತ್ತೂರಿನ ಹೆಸರಾಂತ ಜವಳಿ ಮಳಿಗೆ ಸಂಜೀವ ಶೆಟ್ಟಿ ಜವಳಿ ಮಳಿಗೆಯ ಸಿಬಂದಿಗಳು ದೇವಸ್ಥಾನದವೊಂದರಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆಂದು ಪುತ್ತೂರಿನಿಂದ ಪಣೋಲಿಬೈಲಿಗೆ ತೆರಳುತ್ತಿದ್ದ ವೇಳೆ, ಕೋಡಾಜೆ ಬಳಿ ಆಟೋ ರಿಕ್ಷಾವೊಂದನ್ನು ಒವರ್ ಟೇಕ್ ಮಾಡುವ ಸಂದರ್ಭದಲ್ಲಿ ಮಂಗಳೂರಿನಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸು ಮುಕಾಮುಕಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ,
ಅಪಘಾತದ ರಭಸಕ್ಕೆ ಓಮ್ನಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಓಮ್ನಿಯ ಚಾಲಕ ಸೇರಿದಂತೆ ಮೂವರು ಸ್ಥಳದಲ್ಲಿ ಮೃತಪಟ್ಟಿದ್ದು ಇತರ ಆರು ಮಂದಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ,

Leave a Reply

Please enter your comment!
Please enter your name here