ಮಾ. 25 ರಿಂದ 28 ರವರೆಗೆ ಸಯನ್ಸ್ ಎಕ್ಸ್‍ಪ್ರೆಸ್ ರೈಲು ಸಾರ್ವಜನಿಕ ವೀಕ್ಷಣೆಗೆ

ಮ0ಗಳೂರು :- ವಿದ್ಯಾರ್ಥಿಗಳಲ್ಲಿ, ಅಧ್ಯಾಪಕರಲ್ಲಿ ಹಾಗೂ ಸಾರ್ವಜನಿಕರಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸಲು, ದೇಶದ ಮೂಲೆಮೂಲೆಗಳ ನನಾ ಸಂಸ್ಕøತಿಗಳನ್ನು ಪ್ರತಿಬಿಂಬಿಸುವ, ನಾನಾ ಭಾಗದ ನಾನಾ ಸೂಕ್ಷ್ಮ ಜೀವಿಗಳ, ಅರಣ್ಯ, ಕೃಷಿ, ಉದ್ದಿಮೆ ಕೈಗಾರಿಕೆ ಹೀಗೇ ವಿವಿಧ ವಿಷಯಗಳಿಗೆ ಸಂಬಂಧಿಸಿದ ವಿಜ್ಞಾನ ಪ್ರದರ್ಶನದೊಂದಿಗೆ ಭಾರತದಾದ್ಯಂತ ಸಂಚರಿಸುವ ವಿಜ್ಞಾನ ಎಕ್ಸ್‍ಪ್ರೆಸ್ ರೈಲುಗಾಡಿಯು ಮಾ. 25 ರಂದು ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣಕ್ಕೆ ಆಗಮಿಸಿ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ ಇವರು ತಿಳಿಸಿದ್ದಾರೆ.
ಅವರು ಇಂದು ಈ ಸಂಬಂಧ ತಮ್ಮ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2007 ರಲ್ಲಿ ಆರಂಭಿಸಿದ ಈ ರೈಲು ಗಾಡಿಯು 16 ಹವಾನಿಯಂತ್ರಿತ ಬೋಗಿಗಳೊಂದಿಗೆ 4 ಹಂತಗಳಲ್ಲಿ ಭಾರತದಾದ್ಯಂತ ಸಂಚರಿಸಿ ವಿಜ್ಞಾನಲೋಕದ ವಿಸ್ಮಯಗಳ ಪರಿಚಯವನ್ನು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಮಾಡಿಸುತ್ತಿದೆ.
ಮಾ. 25 ರಿಂದ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30ವರೆಗೆ ಈ ವಿಜ್ಞಾನ ಎಕ್ಸ್ ಪ್ರೆಸ್ ರೈಲುಗಾಡಿಯಲ್ಲಿ ಸಾರ್ವಜನಿಕರು ವಿಜ್ಞಾನ ಪ್ರದರ್ಶನಗಳನ್ನು ವೀಕ್ಷಿಸಬಹುದಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಮಂಗಳೂರು ನಗರದ ಎಲ್ಲಾ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಸಾರ್ವಜನಿಕರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಲು ಅವರು ವಿನಂತಿಸಿದ್ದಾರೆ.

Leave a Reply

Please enter your comment!
Please enter your name here