ಮಿಥುನ ರೈ ಪರ ಪುತ್ತೂರಿನಲ್ಲಿ ದಕ ಜಿಲ್ಲಾ ಯುವ ಜೆಡಿಎಸ್ ವತಿಯಿಂದ ಪ್ರಚಾರ

90

ಮಿಥುನ ರೈ ಪರ ಪುತ್ತೂರಿನಲ್ಲಿ ದಕ ಜಿಲ್ಲಾ ಯುವ ಜೆಡಿಎಸ್ ವತಿಯಿಂದ ಪ್ರಚಾರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಲೋಕಸಭಾ ಚುನಾವಣೆಯ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಿಥುನ ರೈ ಪರ ಪುತ್ತೂರು ವಿಧಾನ ಸಭಾ ಕ್ಷೇತ್ರದ ಸಂಪ್ಯ , ಬನ್ನೂರು, ಮಟ್ಟೆತಡ್ಕ ಪ್ರದೇಶದಲ್ಲಿ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮತಯಾಚನೆ ಮತ್ತು ಪ್ರಚಾರ ಕಾರ್ಯದಲ್ಲಿ ಜಾತ್ಯಾತೀತ ಜನತಾದಳ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣ ರವರು ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸ್ಥಳೀಯ ಜೇಡಿಎಸ್ ನಾಯಕರಾದ ಶಿವ ಸಾಲ್ಯಾನ್, ಗೋಪಾಲ ಸಾಲಿಯಾನ್,ಸುಂದರ ,ಯೋಗೀಸ ,ಹನೀಫ್ ಮತ್ತು ಕಾರ್ಯಕರ್ತರೊಂದಿಗೆ ಜಿಲ್ಲಾ ಯುವ ಜೆಡಿಎಸ್ ನಾಯಕರುಗಳಾದ ಮೊಹಮ್ಮದ್ ಆಸೀಫ್, ಲಿಕಿತ್ ಅಂಚನ್ , ಮೊಹ್ಮದ್ ಫೈಝಲ್, ರತೀಶ್ ಕರ್ಕೇರ, ಹಿತೇಶ್ ರೈ, ಇತರರು ಭಾಗವಹಿಸಿದ್ದರು.