ಮೀನಿನ ಆಹಾರ ಸೇವಿಸಿ ಅಸ್ವಸ್ಥಗೊಂಡ ಕಾರ್ಮಿಕರಿಗೆ ಪರಿಹಾರಕ್ಕೆ ತುಳುನಾಡ ರಕ್ಷಣಾ ವೇದಿಕೆ ಒತ್ತಾಯ

ಮೀನಿನ ಆಹಾರ ಸೇವಿಸಿ ಅಸ್ವಸ್ಥಗೊಂಡ ಕಾರ್ಮಿಕರಿಗೆ ಪರಿಹಾರಕ್ಕೆ ತುಳುನಾಡ ರಕ್ಷಣಾ ವೇದಿಕೆ ಒತ್ತಾಯ

ಮಂಗಳೂರು: ಕರ್ನಾಟಕದ ಕರಾವಳಿ ಪ್ರದೇಶ ಮಂಗಳೂರು ಮತ್ಸೋದ್ಯಮಕ್ಕೆ ಹೆಸರು ವಾಸಿ. ಅಂತೆಯೇ ಮೀನು ಇಲ್ಲಿನ ಬಹುತೇಕ ಜನರ ಆಹಾರವಾಗಿದೆ. ಮಂಗಳೂರು ತಾಲೂಕಿನ ಉಳ್ಳಾಲ ಪರಿಸರದಲ್ಲಿ ಅನೇಕ ಮೀನು ರಫ್ತು ಮಾಡುವ ಕಾರ್ಖಾನೆಗಳಿವೆ. ಇದರಲ್ಲಿ ಸಾವಿರಾರು ಕಾರ್ಮಿಕರು ದುಡಿಯುತ್ತಿದ್ದಾರೆ. ಉಳ್ಳಾಲದ ಕಾರ್ಖಾನೆಗೆ ರಫ್ತಾಗುವ ಮೀನಿಗೆ ರಾಸಾಯನಿಕ ಸಿಂಪಡಿಸಲಾಗುತ್ತದೆ. ತಲೆಯ ಭಾಗವನ್ನು ಬೇರ್ಪಡಿಸಿ, ಕೆಳಗಿನ ಭಾಗವನ್ನು ಮಾತ್ರ ಕಾರ್ಖಾನೆಯಿಂದ ರಫ್ತು ಮಾಡಲಾಗುತ್ತದೆ. ಮೀನಿನ ತಲೆಯಿಂದ ತಯಾರಿಸಿದ ಆಹಾರವನ್ನು ಕಾರ್ಮಿಕರಿಗೆ ಪೂರೈಸಿದರ ಪರಿಣಾಮವಾಗಿ ಸುಮಾರು 100 ಕ್ಕಿಂತಲೂ ಅಧಿಕ ಮಂದಿ ಕೆಲವೇ ಕೆಲವು ಸಮಯದಲ್ಲಿ ಅಸ್ವಸ್ಥಗೊಂಡು (ಹೊಟ್ಟೆನೋವು, ಕಾಲು ನೋವು, ವಾಂತಿ ಭೇದಿ) ಆಸ್ಪತ್ರೆ ಸೇರಬೇಕಾಯಿತು. ಅಲ್ಲದೆ ಈ ಮೀನಿನ ತಲೆಯ ಭಾಗವನ್ನು ಮಂಗಳೂರಿನ ವಿವಧ ಭಾಗದಲ್ಲಿ ಸೇವಿಸಿದ ಪರಿಣಾಮ ವಿವಿಧ ಕಡೆಯ ಜನರು ಅಸ್ವಸ್ಥಗೊಂಢು ದೇರಳಕಟ್ಟೆ, ತೊಕ್ಕೋಟ್ಟು ಉಳ್ಳಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.

sai_8339

ಈ ಘಟನೆಯಿಂದ ಸುಮಾರು 300 ಕ್ಕಿಂತಲೂ ಹೆಚ್ಚು ಜನರು  ತೊಂದರೆಗೊಳಗಾಗಿದ್ದಾರೆಂದು ತಿಳಿದು ಬಂದಿದ್ದು. ಈ ಬಗ್ಗೆ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪುರವರ ನೇತೃತ್ವದ ನಿಯೋಗವು ಆಸ್ಪತ್ರೆಗೆ ಭೇಟಿ ನೀಡಿ ದಾಖಲಾದ ಕಾರ್ಮಿಕರನ್ನು ಭೇಟಿ ಮಾಡಿದಾಗ ಫಿಶ್‍ಮಿಲ್‍ನಲ್ಲಿ ಕೆಲಸ ಮಾಡುವ ಕಾರ್ಮಿಕರಲ್ಲಿ  ಶೇ75% ಮಂದಿಗೆ ವಿಮಾ ಸೌಲಭ್ಯ, ಇ.ಎಸ್.ಐ, ಪ್ರೊವಿಡೆಂಟ್‍ಫಂಡ್ ಸೌಲಭ್ಯವನ್ನು ಮಾಲಕರು ಮಾಡಿರುವುದಿಲ್ಲ ಎಂದು ಕಾರ್ಖಾನೆ ಆಡಳಿತ ಮಂಡಳಿಯ ವಿರುದ್ಧ ಕಾರ್ಮಿಕರು ದೂರು ತೋಡಿಕೊಂಡರು ಹಾಗೂ ನಾವು ಒರಿಸ್ಸಾ ರಾಜ್ಯ ಸೇರಿದಂತೆ ಬೇರೆ ಬೇರೆ ರಾಜ್ಯದವರು. ನಮ್ಮ ಕಷ್ಟವನ್ನು ಯಾರಿಗೂ ಹೇಳಿದರು ಪ್ರಯೋಜನವಾಗುತ್ತಿಲ್ಲ. ಹಾಗೂ ಮಾಲಕರನ್ನು ಎದುರು ಹಾಕಿಕೊಳ್ಳಲು ಧೈರ್ಯವಿಲ್ಲ ತಾವು ದಯವಿಟ್ಟು ನಮ್ಮ ನ್ಯಾಯಯುತ ಹಕ್ಕಿಗೆ ಹೋರಾಟ ಮಾಡಬೇಕಾಗಿ ವಿನಂತಿಸಿಕೊಂಡರು.

ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ರವರ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಗಳನ್ನು, ಪೊಲೀಸ್ ಆಯುಕ್ತಕರನ್ನು, ಉಪಕಾರ್ಮಿಕ ಆಯುಕ್ತರನ್ನು ಭೇಟಿ ಮಾಡಿ ಅವಘಡದಿಂದ ತೊಂದರೆ ಉಂಟಾದ ಕಾರ್ಮಿಕರ ಮತ್ತು ಜನರ ಮೇಲ್ಕಾಣಿಸಿದ ಸಮಸ್ಯೆ ಸಂಕಷ್ಟಗಳನ್ನು ಆಲಿಸಿ ನ್ಯಾಯಯುತ ಪರಿಹಾರ ನೀಡಬೇಕಾಗಿ ಒತ್ತಾಯಿಸಿತು. ಕಾರ್ಮಿಕರಿಗೆ ನ್ಯಾಯಯುತವಾದ ಭದ್ರತೆ ಸಿಗದಿದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆ ವತಿಯಿಂದ ಕಾನೂನು ಮತ್ತು ನ್ಯಾಯಯುತ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಎಚ್ಚರಿಸಿದರು.

ನಿಯೋಗದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಪದಾಧಿಕಾರಿಗಳಾದ ಜೆ. ಇಬ್ರಾಹಿಂ, ಪ್ರಶಾಂತ್ ಭಟ್ ಕಡಬ, ಆನಂದ್ ಅಮೀನ್ ಅಡ್ಯಾರ್, ಜ್ಯೋತಿಕ ಜೈನ್, ರಕ್ಷಿತ್ ಬಂಗೇರ ಕುಡುಪು, ಹರೀಶ್ ಶೆಟ್ಟಿ ಶಕ್ತಿನಗರ, ರಾಜೇಶ್ ಕುತ್ತಾರ್, ರಿಯಾಜ್ ಬೇಂಗ್ರೆ, ನವಾಜ್ ಬಜಾಲ್, ಚಂದ್ರಶೇಖರ್ ಕಣ್ಣಗುಡ್ಡೆ, ಮುಂತಾದವರು ಉಪಸ್ಥಿತರಿದ್ದರು.

Leave a Reply