ಮೀನುಗಾರರಿಗೆ ಬಯೋಮೆಟ್ರಿಕ್: ಜೂನ್ 30 ಕೊನೆಯ ದಿನಾಂಕ

ಉಡುಪಿ: ದೋಣಿಗಳಲ್ಲಿ ಹೋಗುವ ಮೀನುಗಾರರಿಗೆ ಬಯೋಮೆಟ್ರಿಕ್ ಕಾರ್ಡ್ ಕಡ್ಡಾಯವಾಗಿರುತ್ತದೆ. ಇಲ್ಲಿಯವರೆಗೂ ಬಯೋಮೆಟ್ರಿಕ್ ಕಾರ್ಡ್ ಮಾಡಿಸದ ಮೀನುಗಾರಿಕೆ ದೋಣಿಯಲ್ಲಿ ಹೋಗುವ ಕಾರ್ಮಿಕರಿಗೆ ಬಯೋಮೆಟ್ರಿಕ್ ಕಾರ್ಡ್ ತೆಗೆಯುವ ಕಾರ್ಯಕ್ರಮವನ್ನು ಜೂನ್ 20 ರಿಂದ ಜೂನ್ 30 ರ ವರೆಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಆಯೋಜಿಸಲಾಗಿದೆ.
ಇದು ಕೊನೆಯ ಅವಕಾಶವಾಗಿರುವುದರಿಂದ ಮತ್ತು ದೋಣಿಯಲ್ಲಿ ಹೋಗುವ ಕಾರ್ಮಿಕರಿಗೆ ಕಡ್ಡಾಯವಾಗಿರುವುದರಿಂದ ಇದರ ಸೌಲಭ್ಯವನ್ನು ಪಡೆದುಕೊಳ್ಳಲು ತಿಳಿಸಲಾಗಿದೆ.
ಮೀನುಗಾರರ ಸಂಘ ಸಂಸ್ಥೆಗಳು ತಮ್ಮ ಸದಸ್ಯರಲ್ಲಿ ವ್ಯಾಪಕ ಪ್ರಚಾರ ನೀಡಿ ಬಯೋಮೆಟ್ರಿಕ್ ಕ್ಯಾಂಪ್ ಆಯೋಜಿಸಿರುವ ಬಗ್ಗೆ ತಿಳಿಸುವಂತೆ ಹಾಗೂ ಬಯೋಮೆಟ್ರಿಕ್ ಕ್ಯಾಂಪ್‍ನ್ನು ಮಂಗಳೂರು ತಾಲೂಕಿನ ಉಳ್ಳಾಲ, ಬೈಕಂಪಾಡಿ ಮತ್ತು ಮಂಗಳೂರು ಮೀನುಗಾರಿಕೆ ಬಂದರಿನ ಮಾಹಿತಿ ಕೇಂದ್ರ, ಉಡುಪಿ ಜಿಲ್ಲೆಯ ಉಡುಪಿ ತಾಲೂಕಿನ ಹೆಜಮಾಡಿ ಕೋಡಿ, ಮಲ್ಪೆ, ಹಂಗಾರಕಟ್ಟೆ ಹಾಗೂ ಕುಂದಾಪುರ ತಾಲೂಕಿನ ಗಂಗೊಳ್ಳಿ, ಉಪ್ಪುಂದದಲ್ಲಿ ಸ್ಥಳ ನಿಗದಿಪಡಿಸಲಾಗಿದೆ ಎಂದು ಮೀನುಗಾರಿಕಾ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply