ಮುಂಬಯಿ: ಥಾಣೆ ಹಳೆ ಕಟ್ಟಡ ಕುಸಿತ ಬಂಟ್ವಾಳ ಮೂಲದ ಐವರು ದುರ್ಮರಣ

ಮುಂಬಯಿ: ಉಪನಗರ ಥಾಣೆ ಸ್ಟೇಷನ್‍ನ ಪಕ್ಕದಲ್ಲಿರುವ ಬಿ-ಕೆಬಿನ್ ಪರಿಸರದ ಕೃಷ್ಣ ನಿವಾಸ ಬಿಲ್ಡಿಂಗ್  ಇಂದಿಲ್ಲಿ ಮುಂಜಾನೆ ಸುಮಾರು 2.50ರ ವೇಳೆಗೆ ಕುಸಿದು ಬಿದ್ದಿದ್ದು ಬಂಟ್ವಾಳ ಮೂಲದ 5 ಜನ ಸೇರಿದಂತೆ ಒಟ್ಟು 12 ಜನರು ದುರ್ಮರಣಕ್ಕೀಡಾಗಿದ್ದಾರೆ.

1-thane-building-collapsed 3-thane-building-collapsed-002 4-thane-building-collapsed-003 5-thane-building-collapsed-004

ಸುಮಾರು 50 ವರ್ಷಗಳ ಹಳೆ ಕಟ್ಟಡವಾಗಿದ್ದು, ಶಿಥಿಲಾವಸ್ಥೆಯಲ್ಲಿದ್ದು ವಾಸ್ತವಕ್ಕೆ ತುಂಬಾ ಅಪಾಯಕಾರಿ ಕಟ್ಟಡವಾಗಿತ್ತು. ಥಾಣೆ ಮುನ್ಸಿಪಾಲ್ ಕಾರ್ಪೋರೇಷನ್ ಮತ್ತು ವಾರ್ಡ್ ಅಧಿಕಾರಿಗಳು ಕಟ್ಟಡ ಮಾಲಿಕರಿಗೆ ನೋಟಿಸ್ ನೀಡಿದ್ದರೂ ನಿವಾಸಿಗಳು ವಾಸ್ತವ್ಯ ತೆರವು ಮಾಡದಿರುವುದೇ ಘಟನೆಗೆ ಕಾರಣವಾಗಿದೆ ಎಂದು ಸ್ಥಾನೀಯರು ಆರೋಪಿಸಿದ್ದಾರೆ.

ಕೃಷ್ಣ ನಿವಾಸ ಹೆಸರಿನ ಮೂರು ಹಂತಸ್ತಿನ ಕಟ್ಟಡವಾಗಿದೆ. ಕಟ್ಟಡ ಮಾಲೀಕರು ಮತ್ತು ಬಿಲ್ಡರ್‍ಗಳ ಮಧ್ಯೆ ತಕರಾರುವಿದ್ದು ವಿವಾದ ವ್ಯಾಜ್ಯ ಕೋರ್ಟ್ ಮೆಟ್ಟಲೇರಿತ್ತು ಎನ್ನಲಾಗಿದೆ. ಇದೀಗಲೇ 12 ಮೃತದೇಹಗಳನ್ನು ಗುರುತಿಸಲಾಗಿದ್ದು, 10 ಜನರನ್ನು ರಕ್ಷಿಸಿ ಸ್ಥಳಿಯ ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ಅವರಲ್ಲಿ 7 ಜನರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಆಗ್ನಿಶಾಮಕ ದಳದ ಮತ್ತು ಸ್ಥಾನೀಯ ಸಮಾಜ ಸೇವಕರು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದು ಥಾಣೆ ಪೋಲೀಸ್ ಅಧಿಕಾರಿಗಳು ಕೇಸು ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

2-thane-building-collapsed-001

ಮೃತರಲ್ಲಿ ಐವರು ಬಂಟ್ವಾಳ ಮೂಲದವರು:

ಪಗ್ಡಿಚಾಳ್‍ನಲ್ಲಿನ ಈ ಕಟ್ಟಡದಲ್ಲಿ ಬಂಟ್ವಾಳ ಶ್ರೀ ವೆಂಕಟರಮಣ ದೇವಸ್ಥಾನದ ಹಿಂಭಾಗದ ಮೂಲ ನಿವಾಸಿಗಳು ಸುಮಾರು ನಾಲ್ಕು ದಶಕಗಳಿಂದ ಇಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಆ ಪಯ್ಕಿ ರಾಮಚಂದ್ರ ಪಾಂಡುರಂಗ ಭಟ್ (62), ಮೀರಾ ಪಾಂಡುರಂಗ ಭಟ್ (58), ಸುಭ್ರಾಯ (ಸುಭಾಶ್) ಭಟ್ (56)ರುಚಿತ ಭಟ್ (25), ರಶ್ಮೀ ರಾಮಚಂದ್ರ ಭಟ್ (25) ಎನ್ನಲಾಗಿದೆ. ಸರ್ಕಾರ ಮತ್ತು ಮಹಾರಾಷ್ಟ್ರ ಶಾಸನವು ಈ ಬಗ್ಗೆ ಗಂಭೀರವಾಗಿ ಪರಿಶೀಲನೆ ನಡೆಸಿದ್ದು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ವಕ್ತಾರರು ತಿಳಿಸಿದ್ದಾರೆ.

Leave a Reply