ಮುಂಬಯಿ: ಮುಲುಂಡ್ ಫ್ರೆಂಡ್ಸ್ ಆಶ್ರಯದ ವಾರ್ಷಿಕ ಕಬ್ಬಡಿ ಪಂದ್ಯಾಟ

ಮುಂಬಯಿ: ಉಪ ನಗರದ ಸಾಮಾಜಿಕ ಸಂಘಟನೆ ಮುಲುಂಡ್ ಫ್ರೆಂಡ್ಸ್ ಮಹಾನಗರದಲ್ಲಿನ ತುಳು ಕನ್ನಡಿಗ, ಊರಿನಲ್ಲಿನ ಯುವಕರಿಗಾಗಿ ವಾರ್ಷಿಕವಾಗಿ ಆಯೋಜಿಸುವಂತೆ ಈ ಬಾರಿಯೂ 2015ನೇ ವಾರ್ಷಿಕ ಕಬಡ್ಡಿ ಪಂದ್ಯಾಟವನ್ನು ಇದೇ ಅ.18ನೇ ರವಿವಾರ ಮುಲುಂಡ್ ಪೂರ್ವದ (ಆರ್‍ಪಿಎಫ್) ಮೈದಾನದಲ್ಲಿ ಆಯೋಜಿಸಿದೆ ಎಂದು ಮುಲುಂಡ್ ಫ್ರೆಂಡ್ಸ್ ಅಧ್ಯಕ್ಷ ಸುರೇಶ್ ಶೆಟ್ಟಿ ಯೆಯ್ಯಾಡಿ ತಿಳಿಸಿದ್ದಾರೆ.

ಕಬ್ಬಡಿ ಸ್ಪರ್ಧೆಯು ಅಂದು ಬೆಳಿಗ್ಗೆ ಆರಂಭಗೊಂಡು ಸಂಜೆ ವರೆಗೆ ನಡೆಯಲಿದೆ. ಪಂದ್ಯಾಟಗಳು ಬೆಳಿಗ್ಗೆ ಮಹಾನಗರದಲ್ಲಿನ ವಿವಿಧ ಕ್ಷೇತ್ರದ ಗಣ್ಯರ ಹಸ್ತದಿಂದ ಉದ್ಘಾಟಿಸಲ್ಪಡಲಿದೆ. ಸಂಜೆ ಸಮಾರೋಪ ಸಮಾರಂಭದೊಂದಿಗೆ ಬಹುಮಾನ ವಿತರಣೆ ಜರಗಲಿದೆ. ಪಂದ್ಯಾಟದಲ್ಲಿ ನಗರದ ಹಲವಾರು ಗಣ್ಯರು, ಸಂಘಟನೆಗಳ ಮುಖಂಡರು, ರಾಜಕೀಯ ನೇತಾರರು ಮತ್ತು ಸಿನೇಮಾ ತಾರೆಯಾರು ಭಾಗವಹಿಸಲಿದ್ದಾರೆ.

ಪಂದ್ಯಾಟದಲ್ಲಿ ಪ್ರಥಮ ವಿಜೇತ ತಂಡಕ್ಕೆ ರೂಪಾಯಿ 33,333/- ಪ್ರಶಸ್ತಿ ಮತ್ತು ಫಲಕ, ದ್ವಿತೀಯ ವಿಜೇತ ತಂಡಕ್ಕೆ 22,222/- ಪ್ರಶಸ್ತಿ ಮತ್ತು ಫಲಕ, ತೃತೀಯ ತಂಡಕ್ಕೆ 1,111/- ಪ್ರಶಸ್ತಿ ಮತ್ತು ಫಲಕ, ಉತ್ತಮ ಶಿಸ್ತುಬದ್ಧ ತಂಡಕ್ಕೆ 5,555/- ಪ್ರಶಸ್ತಿ ಮತ್ತು ಫಲಕ, ಉತ್ತಮ ಹಿಡಿತಗಾರ, ಉತ್ತಮ ದಾಳಿಗಾರ, ಉತ್ತಮ ಸರ್ವ ಶ್ರೇಷ್ಠರಿಗೆ ತಲಾ ರೂ.1111/- ನಗದು ಬಹುಮಾನ ನೀಡಿ ಗೌರವಿಸಲಾಗುವುದು.

ಪಂದ್ಯಾಟದಲ್ಲಿ ಭಾಗವಹಿಸುವ ಆಸಕ್ತ ತಂಡಗಳು ಮೊಬಾಯ್ಲ್ ಸಂಖ್ಯೆ 9892169914, 9869121755, 09594677613, 838337403 ಇವುಗಳಿಗೆ ಕರೆನೀಡಿ ಅಧಿಕ ಮಾಹಿತಿ ಪಡೆದು ತಮ್ಮ ತಂಡದ ಹೆಸರುಗಳನ್ನು ನೋಂದಾಯಿಸುವಂತೆ ಮುಲುಂಡ್ ಫ್ರೆಂಡ್ಸ್ ಅಧ್ಯಕ್ಷ ಸುರೇಶ್ ಶೆಟ್ಟಿ ಯೆಯ್ಯಾಡಿ ಮತ್ತು ಪದಾಧಿಕಾರಿಗಳು ಈ ಮೂಲಕ ವಿನಂತಿಸಿದ್ದಾರೆ.

Leave a Reply

Please enter your comment!
Please enter your name here