ಮುಂಬೈಯಲ್ಲಿ ಉದ್ಯಮಿ ಅಪಹರಣ ಪ್ರಕರಣ: ಓರ್ವನ ಬಂಧನ

Spread the love

ಮುಂಬೈಯಲ್ಲಿ ಉದ್ಯಮಿ ಅಪಹರಣ ಪ್ರಕರಣ: ಓರ್ವನ ಬಂಧ

ಮಂಗಳೂರು: ಮುಂಬೈನಲ್ಲಿ ಉದ್ಯಮಿಯೊಬ್ಬರನ್ನು ಅಪಹರಿಸಿ 5 ಕೋ. ರೂ. ಬೆಲೆಬಾಳುವ ರೂಬಿ, ಡೈಮಂಡ್‌, ಚಿನ್ನ ಅಳವಡಿಸಿದ ಸೊತ್ತನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯ ಸಹಿತಸೊತ್ತನ್ನು ವಶಪಡಿಸಿಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಬಿಕರ್ನಕಟ್ಟೆಯ ಮಂಜಾರ ಅಪಾರ್ಟ್‌ಮೆಂಟ್‌ ನಿವಾಸಿ ಕೆ.ಎಫ್. ಯೂನುಸ್‌(42) ಎಂದು ಗುರುತಿಸಲಾಗಿದೆ.

5-crore-ruby

ನಗರದ ಬಿಕರ್ನಕಟ್ಟೆ ನಿರ್ಮಾಣ ಹಂತ ವೊಂದರ ಕಟ್ಟಡದ ಬಳಿಯಲ್ಲಿ ಆರೋಪಿ ತಲ್ಲತ್‌ ಹಾಗೂ ಯೂನಸ್‌ ಮಾರುತಿ ಆಲ್ಟೋ ಕಾರಿನಲ್ಲಿ ಬೆಲೆಬಾಳುವ ರೂಬಿಯನ್ನು ಇಟ್ಟುಕೊಂಡು ಅಕ್ರಮವಾಗಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಮಾಹಿತಿಯನ್ನು ಆಧರಿಸಿ ಸಿಸಿಬಿ ಪೊಲೀಸರು ದಾಳಿ ನಡೆಸಿ ಮಾರುತಿ ಆಲ್ಟೋ ಕಾರನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದ ಸಂದರ್ಭದಲ್ಲಿ ಆರೋಪಿಗಳು ಕಾರಿನೊಂದಿಗೆ ಪರಾರಿಯಾಗಲು ಯತ್ನಿಸಿದ್ದರು. ಕಾರಿನಲ್ಲಿದ್ದ ತಲ್ಲತ್‌ ಎಂಬಾತನು ಕಾರಿನಿಂದ

ಓಡಿ ಪರಾರಿಯಾಗುವಲ್ಲಿ ಯಶಸ್ವಿಯಾಗಿಧಿ ದ್ದರೆ, ಕಾರಿನಲ್ಲಿದ್ದ ಯೂನುಸ್‌ನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈತ ತಲ್ಲತ್‌ ಬಜಾಲ…, ಲಿಖೀತ್‌ ಗೋಪಾಲ ಶೆಟ್ಟಿ, ನಾಸಿರ್‌ ಅಹ್ಮದ್‌ ಖಾನ್‌ ಮುಂಬಯಿ, ಫ‌ಕೀರ್‌ ಮುಹಮ್ಮದ್‌ ಶಮೀರ್‌ ಶೇಖ್‌, ಗೌತಮ… ಅನಂತ್‌ ಕದಂ, ಪ್ರತೀಕ್‌ ಅಲೋಕ್‌ ಮೊಯ್ತಿ, ಶಮೀರ್‌ ಹಸನ್‌ ಖಾನ್‌ ಇವರೊಂದಿಗೆ ಸೇರಿ ಮುಂಬೈಯ ಉದ್ಯಮಿಯೊಬ್ಬರನ್ನು ಅಪಹರಣ ಮಾಡಿ ಅವರ ವಶದಿಂದ ಕೋಟ್ಯಾಂತರ ಬೆಲೆಬಾಳುವ

ರೂಬಿಯನ್ನು ದರೋಡೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ನಗರ ಪೊಲೀಸರು ಮುಂಬೈ ಪೊಲೀಸರಲ್ಲಿ ವಿಚಾರ ವಿನಿಮಯ ಮಾಡಿಕೊಂಡಾಗ ಜುಲೈನಲ್ಲಿ ಈ ದರೋಡೆ ಪ್ರಕರಣ ನಡೆದ ಬಗ್ಗೆ ಮಾಹಿತಿ ದೊರೆಯಿತು. ಅಲ್ಲದೇ ಈ ಸಂಬಂಧ ಮುಂಬೈ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಹಾಗೂ ವಶಪಡಿಸಿಕೊಂಡ ರೂಬಿ, ಡೈಮಂಡ್, ಚಿನ್ನ ಅಳವಡಿಸಿದ ಸೊತ್ತು, ಮಾರುತಿ ಅಲ್ಟೋ ಕಾರು, ಮೊಬೈಲ್ ಫೋನ್ ನ್ನು  ಮುಂದಿನ ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಸಿ.ಸಿ.ಬಿ ಘಟಕದ ಇನ್ಸಪೆಕ್ಟರ್ ಸುನೀಲ್ ವೈ ನಾಯಕ್, ಪಿ.ಎಸ್.ಐ  ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.


Spread the love