ಮುಟ್ಟುಗೋಲು ಹಾಕಿದ ಮರಳು ಹರಾಜು

ಮುಟ್ಟುಗೋಲು ಹಾಕಿದ ಮರಳು ಹರಾಜು

ಮ0ಗಳೂರು: ದ.ಕ ಜಿಲ್ಲೆಯಲ್ಲಿನ ಕೆಲವು ಪ್ರದೇಶಗಳಲ್ಲಿ ದಾಸ್ತಾನು ಮಾಡಿರುವ ಮರಳನ್ನು ಈಗಾಗಲೇ ನಿಯಮಾನುಸಾರ ಮುಟ್ಟುಗೋಲು ಹಾಕಿಕೊಂಡಿದ್ದು, ಈ ರೀತಿ ಮುಟ್ಟುಗೋಲು ಹಾಕಿಕೊಂಡಿರುವ ಮರಳನ್ನು ಬಹಿರಂಗ ಹರಾಜು ಮೂಲಕ ಜುಲೈ 12 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯ, 2ನೇ ಮಹಡಿ, ಇಲ್ಲಿ ವಿಲೇವಾರಿ ಮಾಡಲಾಗುವುದು.
ಹರಾಜಿನಲ್ಲಿ ಭಾಗವಹಿಸುವವರು ಭಾಗವಹಿಸುವ ಮುನ್ನ ಮರಳು ದಾಸ್ತಾನು ಇರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿಕೊಳ್ಳವುದು. ಹರಾಜಿನಲ್ಲಿ ಭಾಗವಹಿಸುವವರು ನಿಗದಿತ ರಾಜಧನದ ಮೊತ್ತಕ್ಕೆ 10% ಗಳ ಇ.ಎಂ.ಡಿ. ಮೊತ್ತವನ್ನು ಉಪ ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಇವರ ಹೆಸರಿನಲ್ಲಿ ಡಿ.ಡಿ.ಯನ್ನು ತೆಗೆದು ಸಲ್ಲಿಸುವುದು. ಹರಾಜಿನಲ್ಲಿ ಅಂತಿಮ ಬಿಡ್‍ದಾರರು 50% ಹಣವನ್ನು ಸದರಿ ದಿನದಂದೆ ಪಾವತಿಸುವುದು. ಉಳಿದ ಮೊತ್ತವನ್ನು 24 ಗಂಟೆಯೊಳಗೆ ಪಾವತಿಸುವುದು. ಸರಿಯಾದ ಸಮಯಕ್ಕೆ ನೊಂದಾಯಿಸಿಕೊಳ್ಳಬೇಕು, ಯಾರು ಯಾವ ಪ್ರದೇಶದ ದಾಸ್ತಾನಿಗೆ ನೊಂದಾವಣೆ ಮಾಡಿಕೊಳ್ಳವುದು ಎಂಬ ಮಾಹಿತಿಯನ್ನು ನಿಖರವಾಗಿ ತಿಳಿಸಬೇಕು ಮತ್ತು ಟೋಕನ್ ನಂಬರ್ ಪಡೆಯಬೇಕು. ಹರಾಜನ್ನು ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಗುವುದು. ಅತೀ ಹೆಚ್ಚು ಬಿಡ್ಡುದಾರರ ಹರಾಜನ್ನು ಸ್ವೀಕರಿಸಲಾಗುವುದು.
ಹರಾಜು ಮರಳಿನ ಬಗ್ಗೆ ಆಸಕ್ತ ಬಿಡ್‍ದಾರರಿಗೆ ದಿನಾಂಕ:11.07.2016 ರಂದು ಸ್ಥಳಕ್ಕೆ ಕರೆದು ಮಾಹಿತಿ ನೀಡಲಾಗುವುದು. ಸದರಿ ಹರಾಜು ಮರಳನ್ನು ಜಿಲ್ಲೆಯೆ ಸ್ಥಳೀಯ ಬಳಕೆಗೆ ಮಾತ್ರ ಸಾಗಾಣಿಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ. ಹರಾಜು ದಿನದಿಂದ 7 ದಿನಗಳೊಳಗಾಗಿ ಮರಳು ಸಾಗಾಣಿಕೆ ಮಾಡಿಕೊಳ್ಳಲು ಅನುಮತಿ ನೀಡಲಾಗುವುದು.
ಮರಳಿನ ವಿವರ: ಜಪ್ಪಿನಮೊಗ್ರು ಗ್ರಾಮ ಕಡೆಕಾರು (10 ಸ್ಥಳಗಳು), ಜಪ್ಪಿನಮೊಗ್ರು ಗ್ರಾಮ ಅಡಾಂಕುದ್ರು- ಕಲ್ಲಾಪು, ಕಣ್ಣೂರು ಗ್ರಾಮ, ಅರ್ಕುಳ ಗ್ರಾಮ, ಅಡ್ಯಾರ್‍ಗ್ರಾಮ, ಗುರುಪುರ ಗ್ರಾಮ ಕೈಕಂಬ, ಗುರುಪುರ ಗ್ರಾಮ ಮೂಳೂರು, ಗುರುಪುರ ಗ್ರಾಮ, ಪರಾರಿ ಗ್ರಾಮ, ಉಳಾಯಿಬೆಟ್ಟು ಗ್ರಾಮ, ವಾಮಂಜೂರು ಗ್ರಾಮ.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಛೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಮಂಗಳೂರು) ದೂರವಾಣಿ ಸಂಖ್ಯೆ:0824-2429932, ಗಣಿ ಮತ್ತು ಭೂವಿಜ್ಞಾನ ಇಲಾಖೆ ಮೊಬೈಲ್ ಸಂಖ್ಯೆ:9902499056 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Leave a Reply