ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ- ಅರ್ಜಿ ಆಹ್ವಾನ

ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ- ಅರ್ಜಿ ಆಹ್ವಾನ

ಉಡುಪಿ : ಪ್ರಧಾನಮಂತ್ರಿಗಳ ಮುದ್ರಾ ಯೋಜನೆ (PMMY)ಹಾಗೂ ಸ್ಟಾಂಡ್ ಅಪ್(SUI) ಯೋಜನೆಗಳಡಿ ಅತೀ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಘಟಕಗಳನ್ನು ಸ್ಥಾಪಿಸುವ ಉದ್ದಿಮೆದಾರರಿಗೆ ಸಾಲ ಸೌಲಭ್ಯ ಮಂಜೂರಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ್ರಧಾನಮಂತ್ರಿಗಳ ಮುದ್ರಾ ಯೋಜನೆಯನ್ನು ಪ್ರಧಾನಮಂತ್ರಿಗಳು 2015 ರ ಏಪ್ರಿಲ್ 8 ರಂದು ಉದ್ಘಾಟನೆ ಮಾಡಿದ್ದು, ಈ ಯೋಜನೆಯಡಿಯಲ್ಲಿ ಸಣ್ಣ ಕೈಗಾರಿಕಾ ಘಟಕಗಳಿಗೆ ಶಿಶು ಸಾಲ ರೂ.50 ಸಾವಿರ ದ ವರೆಗೆ, ಕಿಶೋರ್ ಸಾಲ ರೂ.50 ಸಾವಿರದಿಂದ ರೂ.5 ಲಕ್ಷ ದವರೆಗೆ ಹಾಗೂ ತರುಣ್ ಸಾಲ ರೂ.5 ಲಕ್ಷ ದಿಂದ ರೂ.10 ಲಕ್ಷ ದ ವರೆಗಿನ ಸೌಲಭ್ಯ ಒದಗಿಸಿದೆ.

ಸ್ಟಾಂಡ್ ಅಪ್ ಯೋಜನೆಯನ್ನು ಪ್ರಧಾನಮಂತ್ರಿಗಳು 2016 ರ ಏಪ್ರಿಲ್ 5 ರಂದು ಉದ್ಘಾಟನೆ ಮಾಡಿದ್ದು, ಈ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರು ಮಾತ್ರ ಗ್ರೀನ್ ಪೀಲ್ಡ್ ಎಂಟರ್‍ಪ್ರೈಸಸ್ ಸ್ಥಾಪನೆಗೆ ಸಾಲ ಸೌಲಭ್ಯಗಳನ್ನು ಪಡೆಯಲು ಅರ್ಹ ಇರುತ್ತಾರೆ. ಸಾಲದ ಮೊತ್ತವು ರೂ.10 ಲಕ್ಷ ಗಳಿಂದ ರೂ.1 ಕೋಟಿಯ ವರೆಗೆ ನಿಗದಿಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಪ್ಲ್ಯಾಟ್ ನಂ.36-ಸಿ, ಶಿವಳ್ಳಿ ಕೈಗಾರಿಕಾ ಪ್ರದೇಶ ಮಣಿಪಾಲ ದೂರವಾಣಿ ಸಂಖ್ಯೆ 0820-2575650 ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Leave a Reply

Please enter your comment!
Please enter your name here