ಮುಬಾರಕ್ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ಪ್ರತಿಭಾ ಪುರಸ್ಕಾರ

ಮುಬಾರಕ್ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ಪ್ರತಿಭಾ ಪುರಸ್ಕಾರ

ಮಂಗಳೂರು: ಸೋಮೇಶ್ವರ ಉಚ್ಚಿಲದ ಮುಬಾರಕ್ ವೆಲ್ಫೇರ್ ಅಸೋಸಿಯೇಶನ್ (ರಿ) ವತಿಯಿಂದ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವು ಉಚ್ಚಿಲ ಜಂಕ್ಷನ್‍ನಲ್ಲಿ ಆದಿತ್ಯವಾರ ನಡೆಯಿತು.

mubarak-welfare-association

ತಾಲೂಕು ಮಟ್ಟದ ಅರಬಿಕ್ ಪಠಣ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ವಿಜೇತರಾದ ಸೋಮೇಶ್ವರ ಉಚ್ಚಿಲದ ರಹಮಾನಿಯ ಆಂಗ್ಲಮಾದ್ಯಮ ಶಾಲೆಯ ವಿದ್ಯಾರ್ಥಿನಿ ನಫೀಸತ್ ರಿಝಾನ ಮತ್ತು ರಾಜ್ಯ ಮಟ್ಟದ ಮುಕ್ತ ಕರಾಟೆ ಸ್ಪರ್ದೆಯಲ್ಲಿ ಪ್ರಥಮ ಸ್ಥಾನದಲ್ಲಿ ವಿಜೇತರಾದ ಮಂಗಳೂರು ಬರಕ ಇಂಟರ್ ನ್ಯಾಶನಲ್ ಸ್ಕೂಲ್ ವಿದ್ಯಾರ್ಥಿ ಮಹಮ್ಮದ್ ಫೈಝಲ್ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅಥಿತಿಯಾಗಿ ಭಾಗವಹಿಸಿದ ಸಮಾಜ ಸೇವಕ ಅಬ್ಬಾಸ್ ಉಚ್ಚಿಲ್ ಮಾತನಾಡಿ ಪ್ರತಿಭೆ ಮತ್ತು ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಬೇಕು,ಪ್ರತಿಯೊಬ್ಬರಲ್ಲೂ ಪ್ರತಿಭೆ ಇದೆ, ಆದರೆ ಆ ಪ್ರತಿಭೆಯನ್ನು ಹೊರಚಿಮ್ಮಲು ಇಂತಹ ಕಾರ್ಯ ಶ್ಲಾಘನೀಯ ,ಜಾತಿ ಮತ ಧರ್ಮ ಬೇದವಿಲ್ಲದೆ ಹಲವಾರು ಸಕ್ರೀಯ ಕಾರ್ಯಕ್ರಮ ಆಯೋಜಿಸಿದ ಕೀರ್ತಿ ಈ ಸಂಸ್ಥೆಗೆ ಇದೆ ಎಂದರು.

mubarak-welfare-association00

ಮುಬಾರಕ್ ವೆಲ್ಫೇರ್ ಅಸೋಸಿಯೇಶನ್ ಉಚ್ಚಿಲ ಇದರ ಅಧ್ಯಕ್ಷ ಮೌಸೀನ್ ರಹಮಾನ್,ಅಬ್ಬಾಸ್ ಹಾಜಿ ಪೆರಿಬೈಲ್,ಅಬ್ದುಲ್ ಸಲಾಂ ಜಿ.ಐ ,ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಉಚ್ಚಿಲ್,ಅಬ್ದುಲ್ ಸಲಾಂ ಯು, ಇಸ್ಮಾಯಿಲ್ ಜಿ.ಐ , ಅಕ್ಬರ್ ಸಅದಿ,ಜಮಾಲುದ್ದೀನ್ ಸಅದಿ, ಕಾಗ್ರೆಸ್ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಯೂಸುಫ್ ಉಚ್ಚಿಲ್,ಮಜೀದ್ ಎನ್,ಎಚ್, ಹಸೀಬ್ ರಹ್ಮಾನ್ ಉಪಸ್ಥಿತರಿದ್ದರು.

ಫರೀದ್ ಅಬ್ದುಲ್ ಅಮೀನ್ ಕುರಾನ್ ಪಠಿಸಿದರು,ನಾಸೀರ್ ಉಚ್ಚಿಲ್ ಸ್ವಾಗತಿಸಿದರು,ನವಾಝ್ ಉಚ್ಚಿಲ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Please enter your comment!
Please enter your name here