ಮೂಡಬಿದರೆ: ಹಾಡ ಹಗಲೇ ಹಿಂದೂ ಸಂಘಟನೆಯ ಕಾರ್ಯಕರ್ತ, ಹೂವಿನ ವ್ಯಾಪಾರಿಯ ಕೊಲೆ

ಮೂಡಬಿದರೆ: ಮೂಡಬಿದರೆ ಬಸ್ ನಿಲ್ದಾಣದಲ್ಲಿ ಹೂವಿನ ವ್ಯಾಪಾರವನ್ನು ನಡೆಸುತ್ತಿದ್ದ ಹಿಂದೂ ಸಂಘಟನೆಗೆ ಸೇರಿದ ಯುವಕನ್ನನ್ನು ದುಷ್ಕರ್ಮಿಗಳು ಶುಕ್ರವಾರ ಬೆಳಿಗ್ಗೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ವರದಿಯಾಗಿದೆ.

6 3 4 5 1 2

ಸಾವನಪ್ಪಿದ ಯುವಕನನ್ನು ಮೂಡಬಿದರೆ ಹೊಸಬೆಟ್ಟು ನಿವಾಸಿ ಪ್ರಶಾಂತ್ (27) ಎಂದು ಗುರುತಿಸಲಾಗಿದೆ. ಪ್ರಶಾಂತ್ ಮೂಡಬಿದರೆ ಬಸ್ ನಿಲ್ದಾಣದ ಪ್ರವೇಶ ದ್ವಾರದ ಬಳಿ ಹೂವಿನ ವ್ಯಾಪಾರವನ್ನು ಮಾಡಿಕೊಂಡು ಬರುತ್ತಿದ್ದರು.

ಶುಕ್ರವಾರ ಬೆಳಿಗ್ಗೆ ಎಂದಿನಂತೆ ಅಂಗಡಿಯಲ್ಲಿ ಹೂ ವ್ಯಾಪಾರಕ್ಕೆ ಸಿದ್ದತೆ ನಡೆಸುತ್ತಿದ್ದಾಗ ಆರು ಮಂದಿ ದುಷ್ಕರ್ಮಿಗಳ ತಂಡ ಬೈಕಿನಲ್ಲಿ ಬಂದು ಮಾಂಸ ಕಡಿಯುವ ತಲವಾರಿನಿಂದ ತಲೆಗೆ ಕುತ್ತಿಗೆಗೆ ಬಲವಾಗಿ ಕಡಿದು ಬೈಕಿನಲ್ಲಿ ಮತ್ತೆ ಪರಾರಿಯಾಗಿದ್ದಾರೆ. ತೀವ್ರ ಗಾಯಗೊಂಡ ಪ್ರಶಾಂತ್ ಅವರನ್ನು ಸ್ಥಳೀಯರು ರಿಕ್ಷಾದಲ್ಲಿ ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯದಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಹಿಂದೂ ಸಂಘಟನೆಯಲ್ಲಿ ಸಕ್ರಿಯಾರಾಗಿದ್ದ ಪ್ರಶಾಂತ್ ಇತ್ತೀಚೆಗೆ ಗಂಟಾಲ್ಕಟ್ಟೆಯಲ್ಲಿ ಅಕ್ರಮ ದನ ಕೂಡಿ ಹಾಕಿದ ಪ್ರಕರಣದಲ್ಲಿ ನಡೆದ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು. ಕಳೆದ 15 ದಿನಗಳ ಹಿಂದೆ ಇದೇ ರೀತಿ ಇನ್ನೋರ್ವ ಹಿಂದು ಸಂಘಟನೆಯ ನಾಯಕನ್ನು ಕೊಲೆ ಯತ್ನ ನಡೆಸಿ ಪರಾರಿಯಾಗಿದ್ದು ಇನ್ನೂ ಕೂಡ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಶಾಂತ್ ಕೊಲೆ ಸುದ್ದಿಯನ್ನು ತಿಳಿದ ಸಾವಿರಾರು ಹಿಂದೂ ಕಾರ್ಯಕರ್ತರು ರಸ್ತೆಗಿಳೀದು ಪ್ರತಿಭಟನೆ ನಡೆಸುತ್ತಿದ್ದು, ಮೂಡಬಿದರೆ ಸಂಫೂರ್ಣ ಬಂದ್ ಆಗಿದೆ. ರಸ್ತೆಯಲ್ಲಿ ಯಾವುದೇ ವಾಹನ ಸಂಚಾರ ನಡೆಯುತ್ತಿಲ್ಲ ಅಂಗಡಿ ಮುಂಗಟ್ಟುಗಳು ಕೂಡ ಬಂದ್ ಆಗಿವೆ ಎಂದು ಮಾಹಿತಿಗಳು ತಿಳಿಸಿವೆ. ಸ್ಥಳದಲ್ಲಿ ಬಿಗು ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

Leave a Reply