ಮೂಡಬಿದಿರೆಯಲ್ಲಿ ಜಿಲ್ಲಾಮಟ್ಟದ ವಾಲೀಬಾಲ್ ಪಂದ್ಯಾಟ ಸಿದ್ಧತೆ ಪೂರ್ಣ

Spread the love

ಮೂಡಬಿದಿರೆಯಲ್ಲಿ ಜಿಲ್ಲಾಮಟ್ಟದ ವಾಲೀಬಾಲ್ ಪಂದ್ಯಾಟ ಸಿದ್ಧತೆ ಪೂರ್ಣ

ಮೂಡಬಿದಿರೆ: ಮೂಡಬಿದಿರೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ `ರೋಟರಿ ಪ್ರೀ ಯೂನಿವರ್ಸಿಟಿ ಕಾಲೇಜು’ ಆಶ್ರಯದಲ್ಲಿ ಸೆಪ್ಟಂಬರ್ 17ರಂದು ಜಿಲ್ಲಾ ಮಟ್ಟದ ವಾಲೀಬಾಲ್ ಪಂದ್ಯಾಟ ನಡೆಯಲಿದ್ದು ಸಿದ್ಧತೆಗಳು ಪೂರ್ಣಗೊಂಡಿವೆ.

rotary-eng-vollyball-photo

ಶನಿವಾರ ಬೆಳಗ್ಗೆ 10ಗಂಟೆಗೆ ರೋಟರಿ ಶಾಲೆಯ ಮೈದಾನದಲ್ಲಿ ಪದವಿ ಪೂರ್ವ ಕಾಲೇಜು ವಿಭಾಗದ ಪುರುಷರ ಮತ್ತು ಮಹಿಳೆಯರ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ ನಡೆಯಲಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ತಂಡಗಳು ಆಗಮಿಸುತ್ತಿದ್ದು, ಸುಮಾರು 80 ಮಂದಿ ತೀರ್ಪುಗಾರರು ಹಾಗೂ ತಂಡದ ವ್ಯವಸ್ಥಾಪಕರು ಭಾಗವಹಿಸಲಿದ್ದಾರೆ. ಪಂದ್ಯಾಟವನ್ನು ಮೂಡುಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವರು ಉದ್ಘಾಟಿಸಲಿದ್ದಾರೆ. ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಕೆ.ಅಮರನಾಥ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಮೂಡುಬಿದ್ರೆಯ ಉದ್ಯಮಿ ಶ್ರೀಪತಿ ಭಟ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರಾದ ಕೆ.ಆರ್. ತಿಮ್ಮಯ್ಯ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಕ್ರೀಡಾ ಸಂಯೋಜಕರಾದ ಶಶಿಧರ್ ಮಾಣಿ ಇವರುಗಳು ಭಾಗವಹಿಸಲಿದ್ದಾರೆ. ಪುರುಷರ 6 ಹಾಗೂ ಮಹಿಳೆಯರ 6 ತಂಡಗಳು ಜಿಲ್ಲಾಮಟ್ಟದ ಈ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ. ಇದರಲ್ಲಿ ವಿಜೇತ ತಂಡಗಳು ರಾಜ್ಯಮಟ್ಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಾಯಂಕಾಲ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಅಧ್ಯಕ್ಷತೆಯನ್ನು ಮೂಡಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ಮೊಹಮ್ಮದ್ ಶರೀಫ್ ವಹಿಸುವರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಅಶ್ವಿನ್ ಜೆ ಪಿರೇರಾ, ಉದ್ಯಮಿ ರೋಹನ್ ರಾಜೇಶ್ ಮೆಂಡಿಸ್ ಭಾಗವಹಿಸುವರು.


Spread the love