ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ಎಪ್ರಿಲ್ 30 ರಂದು ಉದ್ಯೋಗ ಮೇಳ

ಉಡುಪಿ: ಜಿಲ್ಲೆಯ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಕುಂದಾಪುರ ಇದರ ಆಶ್ರಯದಲ್ಲಿ ಎಪ್ರಿಲ್ 30 ರಂದು ಒಂದು ದಿನದ ಬೃಹತ್ ಎಂ.ಐ.ಟಿ.ಕೆ. ಉದ್ಯೋಗ ಮೇಳವನ್ನು ಆಯೋಜಿಸಿದ್ದು, ಸಕಲ ಸಿದ್ದತೆಗಳು ನಡೆದಿವೆ.

image001mitk-job-fair-pressmeet-20160415-001 image002mitk-job-fair-pressmeet-20160415-002 image003mitk-job-fair-pressmeet-20160415-003

ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಉದ್ಯೋಗ ಮೇಳದ ಕುರಿತು ಮಾಹಿತಿ ಕಾಲೇಜಿನ ಚೇರ್ ಮ್ಯಾನ್ ಸಿದ್ದಾರ್ಥ್ ಶೆಟ್ಟಿ ಯವರು ಎಂ.ಐ.ಟಿ.ಕೆ. ಉದ್ಯೋಗ ಮೇಳದಲ್ಲಿ 20 ಅಧಿಕ ಹೆಸರಾಂತ ಕಂಪೆನಿಗಳು ಭಾಗವಹಿಸಲಿದ್ದು, ಜಿಲ್ಲೆಯ ಹಾಗೂ ಹೊರಜಿಲ್ಲೆಯ 1000 ಕ್ಕೂ ಅಧಿಕ ಅಭ್ಯರ್ಥಿಗಳು ಮೇಳದಲ್ಲಿ ಭಾಗವಹಿಸಲಿದ್ದಾರೆ. ಪ್ರಮುಖ ಕಂಪೆನಿಗಳಾದ ಎಕ್ಷಂಚರ್, ಇನ್ಫೋಸಿಸ್, ಎಂಫಾಸಿಸ್, ಹಿಂದುಜಾ ಗ್ಲೋಬಲ್ ಸೊಲ್ಯೂಷನ್, ವಿಪ್ರೊ, ಝೆನಿಸಸ್, ವೊಡಾಫೋನ್, ಪ್ರೆಸ್ಟಿಜ್ ಗ್ರೂಪ್, ಭಾರತ್ ಅಟೋಮೋಟಿವ್, ಪೂರ್ವಾಂಕರ, ಸುಜ್ಲಾನ್, ಬಿಲಿಯನ್ಸ್ ಸ್ಮೈಲ್ ಹೊಸ್ಪಿಟಾಲಿಟಿ ಪ್ರೈ ಲಿ., ಟಿವಿಎಸ್ ಟ್ರೈನಿಂಗ್ ಎಂಡ್ ಸರ್ವಿಸಸ್, ಸೊಫ್ಟೆಕ್, ನ್ಯೂಟೆಕ್, ಭೀಮಾ ಜ್ಯುವೆಲ್ಲರ್ಸ್, ಒರಿಯೆಂಟ್ ಬೆಲ್, ಎಸ್.ವಿ. ಇನ್ಫ್ರಾ, ಎಡು ಗ್ರೂಪ್ ಇನ್ನಿತರ ಹಲವು ಕಂಪೆನಿಗಳು ಮೇಳದಲ್ಲಿ ಭಾಗವಹಿಸಲಿವೆ.
ವಿಜ್ಞಾನ, ಕಲೆ, ವಾಣಿಜ್ಯ, ಎಂಜಿನಿಯರಿಂಗ್, ಎಮ್ ಬಿ ಎ ಸೇರಿದಂತೆ ವಿವಿಧ ಪದವಿ ಡಿಪ್ಲೋಮಾ, ಐಟಿಐ ಶಿಕ್ಷಣ ಹೊಂದಿರುವವರಿಗೆ ವ್ಯಾಪಕ ಅವಕಾಶಗಳು ಈ ಉದ್ಯೋಗ ಮೇಳದಲ್ಲಿ ಒದಗಿ ಬರಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳದಲ್ಲಿ ನೇಮಕಾತಿ ಪತ್ರವನ್ನು ನೀಡುವುದು ಉದ್ಯೋಗ ಮೇಳದ ವಿಶೇಷತೆಯಾಗಿದೆ.
ಅಭ್ಯರ್ಥಿಗಳು ಎಂ.ಐ.ಟಿ.ಕೆ. ಉದ್ಯೋಗ ಮೇಳಕ್ಕೆ ಆಗಮಿಸುವಾಗ ಕಡ್ಡಾಯವಾಗಿ 5 ರಿಂದ 10 ಪಾಸ್‍ಪೋರ್ಟ್ ಸೈಜ್ ಭಾವಚಿತ್ರ ಹಾಗೂ ಸ್ವವಿವರ್‍ವುಳ್ಳ, ಎಲ್ಲಾ ಅಂಕಪಟ್ಟಿಗಳ ನಕಲು ತರತಕ್ಕದ್ದು. ಹಾಜರಾಗುವ ಅಭ್ಯರ್ಥಿಗಳು ಬೆಳಿಗ್ಗೆ 8.30 ಕ್ಕೆ ಕಾಲೇಜು ಕ್ಯಾಂಪಸ್‍ನಲ್ಲಿ ಹಾಜರಿರಬೇಕು.
ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅಪೇಕ್ಷೆ ಪಡುವ ಅಭ್ಯರ್ಥಿಗಳು ಮುಂಚಿತವಾಗಿ ಅಥವಾ ಸ್ಥಳದಲ್ಲಿಯೇ ನೋಂದಾಯಿಸಲು ವ್ಯವಸ್ಥೆಯಿದ್ದು, ಮಾಹಿತಿಗಾಗಿ 9731488528 / 9972060143 / 9945796476 / 9844847554 / 8722097810 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Leave a Reply

Please enter your comment!
Please enter your name here