ಮೇ. 27, 28 ಹಾಗೂ 29 ರಂದು ಸಸಿಹಿತ್ಲು ಬೀಚ್ ನಲ್ಲಿ ಸರ್ಫಿಂಗ್ ಸ್ಪರ್ಧೆ

Spread the love

ಮ0ಗಳೂರು: ಮೇ. 27, 28 ಹಾಗೂ 29 ರಂದು, ಮಂಗಳೂರು ತಾಲೂಕು, ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಸಿಹಿತ್ಲು ಬೀಚ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ, ಮಂತ್ರ ಸರ್ಫ್ ಕ್ಲಬ್ ಹಾಗೂ Kanara Surfing and Water sports promotion council, ರವರ ಸಹಯೋಗದೊಂದಿಗೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಸರಕಾರ, ಇವರ ಪ್ರಾಯೋಜಕತ್ಷದಲ್ಲಿ All Cargo Indian open of Surfing (ಕರ್ನಾಟಕ ಸರ್ಫಿಂಗ್ ಫೆಸ್ಟಿವಲ್) ಆಯೋಜಿಸಲಾಗಿದೆ.
ಈ ಸರ್ಫಿಂಗ್ ಸ್ಪರ್ಧೆಗೆ ಅಂದಾಜು ರೂ. 40 ಲಕ್ಷ ವೆಚ್ಚವಾಗಲಿದ್ದು, ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ರೂ.24. ಲಕ್ಷ ಅನುದಾನವನ್ನು ಬಿಡುಗಡೆ ಮಾಡಿದ್ದು, ಉಳಿದ ರೂ.16. ಲಕ್ಷ ಗಳನ್ನು All Cargo Pvt. Ltd., ಹಾಗೂ ಇತರ ಪ್ರಾಯೋಜಕರಿಂದ ಸಂಗ್ರಹಿಸಲಾಗಿದೆ.
ಈ ಸ್ಪರ್ಧೆಯಲ್ಲಿ ಅಂದಾಜು 90 ರಿಂದ 100 ಸ್ಪರ್ಧಿಗಳು ಭಾಗವಹಿಸುವ ನೀರಿಕ್ಷೆಯಿದ್ದು, 86 ಸ್ಪರ್ಧಿಗಳು ತಮ್ಮ ಹೆಸರನ್ನು ನೊಂದಣಿ ಮಾಡಿರುತ್ತಾರೆ. ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಿಂದ ಸುಮಾರು 20 ರಿಂದ 25 ಸ್ಪರ್ಧಿಗಳು ಭಾಗವಹಿಸುವ ನೀರಿಕ್ಷೆಯಿದೆ.


Spread the love