ಮೈಸೂರಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ಆರೋಪಿಯ ಬಂಧನ

56
Spread the love

ಮೈಸೂರಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ಆರೋಪಿಯ ಬಂಧನ

ಮಂಗಳೂರು: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಟ್ವಾಳದ ಯುವಕನ್ನು ಉಪ್ಪಿನಂಗಡಿ ಪೋಲಿಸರು ಬಂಧಿಸಿದ್ದಾರೆ.

ಬಂಧಿತನನ್ನು ಬಂಟ್ವಾಳ ಅಜಿಲಮೊಗೇರು ನಿವಾಸಿ ಮಹಮ್ಮದ್ ಅಲ್ತಾಫ್ (23) ಎಂದು ಗುರುತಿಸಲಾಗಿದೆ.

ಮೈಸೂರು ನಗರದ ದೇವರಾಜ  ಪೊಲೀಸ್ ಠಾಣಾ ಸರಹದ್ದಿನ ಕೆ ಆರ್ ಆಸ್ಪತ್ರೆಯ ಆವರಣದ BSC ಶೂಶ್ರಕಿಯರ ವಿದ್ಯಾರ್ಥಿ ನಿಲಯಕ್ಕೆ ಜುಲೈ 20 ರಂದು ರಾತ್ರಿ ಸುಮಾರು 02.00 ಗಂಟೆಯ ವೇಳೆಗೆ ಒಬ್ಬ ಅಪರಿಚಿತ ವ್ಯಕ್ತಿ ಅಕ್ರಮ ಪ್ರವೇಶ ಮಾಡಿ  ಸೆಕ್ಯೂರಿಟಿ ಗಾರ್ಡ ನ್ನು ಚಾಕು ತೋರಿಸಿ ಬೆದರಿಸಿ ಒಳಗೆ ಮಲಗಿದ್ದ  ವಿದ್ಯಾರ್ಥಿನಿಗೆ  ಬಲಾತ್ಕಾರವಾಗಿ ಲೈಂಗಿಕ ಕಿರುಕುಳ ನೀಡಿ ವಿದ್ಯಾರ್ಥಿ ನಿಲಯದ ಇತರೆ ಎಚ್ಚರವಾದಗ ಓಡಿ ಹೋಗಿ ತಪ್ಪಿಸಿಕೊಂಡಿದ್ದು, ಈ ಬಗ್ಗೆ ಮೈಸೂರು ದೇವರಾಜ ಪೊಲೀಸ್ ಠಾಣೆಯಲ್ಲಿ   ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಮಹಮ್ಮದ್ ಅಲ್ತಾಫ್ ನ್ನು ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಸಂಕೇಶ ಎಂಬಲ್ಲಿ ಕೇರಳದ ಕೊಟ್ಟಾಯಂ ಜಿಲ್ಲೆಯ ಪುದುಪಳ್ಲಿ ಎಂಬಲ್ಲಿ ಯ ಜಿನುಲಾಲ್ ವಿಸಿ ಎಂಬವರ ತೋಟದಲ್ಲಿ  ಕೂಲಿ ಕೆಲಸ ಮಾಡಿಕೊಂಡು ತಲೆಮರೆಸಿಕೊಂಡಿದ್ದ ಆಪಾದಿತನನ್ನು  ಖಚಿತ ಮಾಹಿತಿಯಂತೆ   ಉಪ್ಪಿನಂಗಡಿ ಪೊಲೀಸ್ ಠಾಣಾ ಪಿಎಸ್ಐ ನಂದಕುಮಾರ್ ಎಂ ಎಂ, ಮತ್ತು ಅವರ ತಂಡವು ಪತ್ತೆ ಹಚ್ಚಿದ್ದು , ಸದ್ರಿಯಾತನ್ನು ಮೈಸೂರು ಪೊಲೀಸ ರಿಗೆ ಹಸ್ತಾಂತರ ಮಾಡಲಾಗುವುದು.


Spread the love

1 Comment

  1. How come this report doesn’t identify him as ‘Congress supporter’ or ‘Muslim activist’? I guess those ‘tricks’ are applicable only when a Hindu is involved in crime.

Comments are closed.