ಮೌಂಟ್ ರೋಜರಿ ಚರ್ಚಿನಲ್ಲಿ ಮಳೆ ನೀರು ಮರುಪೂರಣ ಘಟಕ ಉದ್ಘಾಟನೆ

ಉಡುಪಿ : ಉಡುಪಿ ಜಿಲ್ಲೆಯಲ್ಲಿ ವರ್ಷಕ್ಕೆ 3,500ದಿಂದ 4,000 ಮೀ.ಮೀ.ವರೆಗೆ ಮಳೆ ಯಾದರೂ ಇಲ್ಲಿನ ಮಣ್ಣಿನ ಗುಣದಿಂದ ಎಪ್ರಿಲ್‌ -ಮೇ ತಿಂಗಳಲ್ಲಿ ಗ್ರಾಮೀಣ ಪ್ರದೇಶಗಳಿಗೆ ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡುವ ಸ್ಥಿತಿ ಇದೆ. ಆದ್ದರಿಂದ ಅನಿವಾರ್ಯವಾಗಿ ಮಳೆನೀರನ್ನು ಸಂಗ್ರಹಿಸಿಡುವ ಕಾರ್ಯ ಆಗಬೇಕು. ಇದರಿಂದ ಅಂತರ್ಜಲ ವೃದ್ಧಿಸುತ್ತದೆ ಎಂದು ಉಡುಪಿ ಜಿಪಂ ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಹೇಳಿದ್ದಾರೆ.
ಅವರು ಮಂಗಳವಾರ ಕಲ್ಯಾಣಪುರ ಮೌಂಟ್‌ ರೋಸರಿ ಚರ್ಚ್‌ನ ಸಾಮಾಜಿಕ ಅಭಿವೃದ್ಧಿ ಆಯೋಗದ ನೇತೃತ್ವ ದಲ್ಲಿ ಚರ್ಚ್‌ನ ಪಾಲನಾ ಮಂಡಳಿಯ ಸಹಯೋಗ ದೊಂದಿಗೆ ಆಯೋಜಿಸಲಾದ “ಮಳೆ ನೀರಿನೊಂದಿಗೆ ಅನುಸಂಧಾನ ಅಂತರ್ಜಲ ಮರುಪೂರಣ’ ಘಟಕವನ್ನು ಚರ್ಚ್‌ ಆವರಣದಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

image001water-harvesting-20160406 image003water-harvesting-20160406 image004water-harvesting-20160406 image005water-harvesting-20160406 image007water-harvesting-20160406 image010water-harvesting-20160406 image011water-harvesting-20160406 image012water-harvesting-20160406

ಬಳಿಕ ನಡೆದ ಜಲ ಸಂರಕ್ಷಣೆ ಜಾಗೃತಿ ಕಾರ್ಯಾ ಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಚಿತ್ರದುರ್ಗದ ಭೂಗರ್ಭ ಶಾಸOಉಜ್ಞ ಹಾಗೂ ಜಲತಜ್ಞ ಎನ್‌. ಜೆ.ದೇವರಾಜ ರೆಡ್ಡಿ ಮಾತನಾಡಿ, ಕರಾವಳಿಯಲ್ಲಿ 30 ವರ್ಷಗಳ ಹಿಂದೆ ಸಮೃದ್ಧ ಅರಣ್ಯ ಪ್ರದೇಶ ಇದ್ದುದರಿಂದ ಅಂತರ್ಜಲ ಹೆಚ್ಚಿತ್ತು. ಆದರೆ ಇಂದಿನ
ಪರಿಸ್ಥಿತಿ ಬದಲಾಗಿದೆ. ಅರಣ್ಯಗಳು ನಾಶವಾಗಿರುವ ಪರಿಣಾಮ ಮಳೆಯ ನೀರು ಭೂಮಿಯಲ್ಲಿ ಇಂಗದೆ ನೇರವಾಗಿ ಸಮುದ್ರ ಪಾಲಾಗುತ್ತಿದೆ. ಇದರಿಂದ ಅಂತರ್ಜಲ ಮಟ್ಟ ಸಂಪೂರ್ಣ ಕುಸಿತ ಕಂಡಿದೆ. ಹನಿಹನಿ ನೀರನ್ನು ಇಂಗಿಸಿದರೆ ಮಾತ್ರ ಅಂತರ್ಜಲಮಟ್ಟ ವೃದ್ಧಿಸಬಹುದು ಎಂದರು.

ಸಮುದ್ರಮಟ್ಟದಿಂದ 2,000 ಅಡಿ ಎತ್ತರದ ಲ್ಲಿರುವ ಬಯಲು ಸೀಮೆಯಲ್ಲಿ ಸಮುದ್ರ ಮಟ್ಟದವರೆಗೆ ಕೊಳವೆಬಾವಿ ಕೊರೆದರೆ ನೀರು ಸಿಗುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಹೀಗೆ ಕೊರೆದ ಕೊಳವೆ ಬಾವಿಯಲ್ಲಿ ನೀರು ಸಿಗದೆ ಕೋಟ್ಯಂತರ ರೂ. ನಷ್ಟವಾಗುತ್ತಿದೆ. ಆದ್ದರಿಂದ ಸಮುದ್ರಮಟ್ಟಕ್ಕೂ ಅಂರ್ಜಲಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದವರು ತಿಳಿಸಿದರು.

image014water-harvesting-20160406 image016water-harvesting-20160406 image017water-harvesting-20160406 image019water-harvesting-20160406 image020water-harvesting-20160406 image021water-harvesting-20160406 image022water-harvesting-20160406 image023water-harvesting-20160406 image024water-harvesting-20160406

ಅಂತರ್ಜಲ ಮರುಪೂರಣ ಘಟಕಕ್ಕೆ ಚರ್ಚ್‌ನ ಪ್ರಧಾನ ಧರ್ಮಗುರು ವಂ. ಫಿಲಿಪ್ ನೆರಿ ಆರಾನ್ನ ಚಾಲನೆ ನೀಡಿದರು. ಮಾಹಿತಿ ಪತ್ರವನ್ನು ಮಿಲಾಗ್ರಿಸ್‌ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ವಂ.ಗುರು ಮಹೇಶ್‌ ಡಿಸೋಜ ಬಿಡುಗಡೆಗೊಳಿಸಿದರು. ಜಿಲ್ಲಾ ವಾರ್ತಾಧಿಕಾರಿ ರೋಹಿಣಿ, ಕಲ್ಯಾಣಪುರ
ಗ್ರಾಪಂ ಅಧ್ಯಕ್ಷೆ ಪುಷ್ಪಾ ಕೋಟ್ಯಾನ್‌, ಸಾಮಾಜಿಕ ಅಭಿವೃದ್ಧಿ ಆಯೋಗದ ಕೇಂದ್ರ ನಿರ್ದೇಶಕ ವಂ. ರೆಜಿನಾಲ್ಡ್‌ ಪಿಂಟೊ, ವಲಯ ಸಂಚಾಲಕ
ಹ್ಯೂಬರ್ಟ್‌ ಲೂವಿಸ್‌ ಉಪಸ್ಥಿತ ರಿದ್ದರು. ಚರ್ಚ್‌ನ ಪಾಲನಾ ಮಂಡಳಿಯ ಉಪಾಧ್ಯಕ್ಷ ಜೆರಿ ವಿನ್ಸೆಂಟ್‌ ಡಯಸ್‌ ಸ್ವಾಗತಿಸಿದರು. ಆಯೋ ಗದ ಸಂಚಾಲಕ ಜೋಸೆಫ್ ಜಿ.ಎಂ.ರೆಬೆಲ್ಲೊ ಪ್ರಾಸ್ತಾ ವಿಕವಾಗಿ ಮಾತನಾಡಿ, ವಂದಿಸಿದರು. ಮೀನಾ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.

Leave a Reply

Please enter your comment!
Please enter your name here