ಮ0ಗಳೂರು : ಅಧಿಕೃತ ದಾಖಲೆ ಇಲ್ಲದೆ ಅಕ್ರಮ ಮರ ಸಾಗಟ ಮಾಡುತ್ತಿದ್ದ ವಾಹನ ಹಾಗೂ ಸೊತ್ತುಗಳ ವಶ

ಮ0ಗಳೂರು : ಡಿ: 04 ರಂದು ಮಂಗಳೂರು ತಾಲೂಕು ಬಂಗ್ರಕುಳೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 66, ಕೂಳೂರು ಸೇತುವೆಯ ಅಯ್ಯಪ್ಪ ಗುಡಿ ಎಂಬಲ್ಲಿ ಅಕ್ರಮವಾಗಿ ಅಧಿಕೃತ ದಾಖಲಾತಿಗಳಿಲ್ಲದೆ ವಿವಿಧ ಜಾತಿಯ 49 ದಿಮ್ಮಿ =4.732 ಘ.ಮೀ. ಹಾಗೂ 6.000 ಘ.ಮೀ. ಕಟ್ಟಿಗೆಯನ್ನು ಲಾರಿ ನಂಬ್ರ ಕೆಎ-17ಬಿ-6833 ರಲ್ಲಿ ಸಾಗಾಟ ಮಾಡುತ್ತಿರುವ ಪ್ರಕರಣವನ್ನು ಪತ್ತೆ ಹಚ್ಚಿ ವಾಹನ ಹಾಗೂ ಸೊತ್ತುಗಳನ್ನು ಸರಕಾರ ಪರವಾಗಿ ಅಮಾನತು ಪಡಿಸಿ ಲಾರಿ ಚಾಲಕ ಮಹಮ್ಮದ್ ಅಪ್ಸರ್ ಇವರನ್ನು ಬಂಧಿಸಿ ಮುಚ್ಚಳಿಕೆ ಪತ್ರದ ಮೂಲಕ ಬಿಡುಗಡೆಗೊಳಿಸಲಾಗಿದೆ. ಸದ್ರಿ ಕಾರ್ಯಾಚರಣೆಯನ್ನು ಮಂಗಳೂರು ವಲಯ ಅರಣ್ಯಾಧಿಕಾರಿ ಪಿ. ಶ್ರೀಧರ, ಮತ್ತು ಸಿಬ್ಬಂದಿಗಳಾದ ಉಪ ವಲಯ ಅರಣ್ಯಾಧಿಕಾರಿಯವರಾದ . ಅಶ್ವಿತ್ ಕೆ. ಗಟ್ಟಿ, ಪ್ರೀತಮ್, ರವಿ ಕುಮಾರ್ ಅರಣ್ಯ ರಕ್ಷಕರಾದ . ಜಿತೇಶ್ ಪಿ., ಕೃಷ್ಣ ಜೋಗಿ , ಅರಣ್ಯ ವೀಕ್ಷಕರಾದ ಪ್ರಿನ್ಸ್ ಹಾಗೂ ಚಾಲಕ ಸೂರಜ್ ಸುವರ್ಣ ಇವರು ಸಹಕರಿಸಿದರು.
ಪ್ರಕರಣದ ತನಿಖೆಯನ್ನು ಭಾಅಸೇ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು ವಿಭಾಗ, ಕೆ.ಟಿ.ಹನುಮಂತಪ್ಪ, ಇವರ ನಿರ್ದೇಶನದಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಅಬ್ಬಾಸ್, ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ತಾಂತ್ರಿಕ ಸಹಾಯಕರು, ಮಂಗಳೂರು ಇವರು ನಡೆಸುತ್ತಿದ್ದಾರೆ.

Leave a Reply

Please enter your comment!
Please enter your name here