ಮ0ಗಳೂರು : ಕಾನೂನು ಮಾಹಿತಿ ಕಾರ್ಯಕ್ರಮ

ಮ0ಗಳೂರು : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು, ಮಂಗಳೂರು ವಕೀಲರ ಸಂಘ, ಮಂಗಳೂರು, ಮತ್ತು ಕರಾವಳಿ ಶ್ರೀ ಸೇವಾಲಾಲ್ ಬಂಜಾರ (ಲಂಬಾಣಿ) ಸಂಘ (ರಿ), ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ನೌಕರರ ಸಂಘದ ಸಭಾಭವನ, ಮಂಗಳೂರು ಇಲ್ಲಿ ಫೆ. 7 ರಂದು  ಮಹಿಳೆ ಮತ್ತು ಮಕ್ಕಳಿಗೆ ಕಾನೂನು ಮಾಹಿತಿ ಮತ್ತು ಪ್ರತಿಭಾ ಪುರಸ್ಕಾರ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಣೇಶ. ಬಿ. ನೆರವೇರಿಸಿ ಮಾತನಾಡುತ್ತಾ,  ಸಮುದಾಯದಿಂದ ಏರ್ಪಡಿಸಿರುವ ಸಮ್ಮಿಲನ ಕಾರ್ಯಕ್ರಮಗಳಲ್ಲಿ ಅವಶ್ಯಕ ಕಾನೂನುಗಳ ಬಗ್ಗೆ ಕಾರ್ಯಕ್ರಮವನ್ನು ಆಯೋಜಿಸಿ ಸಮುದಾಯದ ಜನರಿಗೆ ಕಾನೂನು ಮಾಹಿತಿ ಕೊಡಿಸುವ ಮುಖಾಂತರ ಒಂದು ಸಾಮಾಜಿಕ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ಹೇಳಿದರು.  ಲಂಬಾಣಿ ಜನಾಂಗದಲ್ಲಿ ಇರುವ ಮೌಢ್ಯ ಮತ್ತು ಕಂದಾಚಾರಗಳ ಬಗ್ಗೆ ಅವುಗಳನ್ನು ಮಕ್ಕಳಿಗೆ ಒಳ್ಳೇಯ ವಿದ್ಯಾಭ್ಯಾಸ ನೀಡುವ ಮುಖಾಂತರ ಹೋಗಲಾಡಿಸಬೇಕೆಂದು ಮತ್ತು ಮಹಿಳೆಯರು ಮತ್ತು ಮಕ್ಕಳ ಬಗ್ಗೆ ಇರುವ ಕಾನೂನನ್ನು ಪಾಲಿಸುವ ಮುಖಾಂತರ ಅವರ ಹಕ್ಕನ್ನು ಸಂರಕ್ಷಿಸುವ ಮುಖಾಂತರ ಜೀವನ ಉತ್ತಮ ಪಡಿಸಿಕೊಳ್ಳಬೇಕೆಂದು ಹೇಳಿದರು.

ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಎಸ್.ಪಿ. ಚಂಗಪ್ಪ ರವರು ಮಾತನಾಡುತ್ತಾ ಮನುಷ್ಯ ಎಷ್ಟು ವರ್ಷ ಬದುಕಿದ್ದಾನೆ ಎಂಬುದು ಮುಖ್ಯವಲ್ಲ. ಅವನು ಸಮಾಜಕ್ಕೆ ಏನು ನೀಡಿದ ಎಂಬುದು ಬಹಳ ಮುಖ್ಯವಾಗಿರುತ್ತದೆ. ಆದುದರಿಂದ ಬುಧ್ಧಿವಂತರಾದ ನಾವು ಸಮಾಜಕ್ಕೆ ನಮ್ಮ ಅಮೂಲ್ಯ ಸೇವೆಯನ್ನು ನೀಡಬೇಕೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ  ಜಯಪ್ಪ ಲಮಾಣಿ ವಹಿಸಿದದ್ರು.

Leave a Reply