ಮ0ಗಳೂರು :ನಗರ ಪಾಲಿಕೆಯಲ್ಲಿ ಸಾರ್ವಜನಿಕರ ಕುಂದು ಕೊರತೆ ನಿರ್ವಹಣಾ ಕೇಂದ್ರ

ಮ0ಗಳೂರು : ಮಂಗಳುರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರು ತಮ್ಮ ದೂರುಗಳನ್ನು ಆನ್‍ಲೈನ್‍ನಲ್ಲಿ ದಾಖಲಿಸುವ ಸಲುವಾಗಿ ಹೊಸ ತಂತ್ರಾಂಶ “ಜನಹಿತ” ಅಭಿವೃದ್ಧಿಪಡಿಸಲಾಗಿದ್ದು ಇದರ ಸದುಪಯೋಗ ಪಡೆಯಬಹುದಾಗಿದೆ.

ಆನ್‍ಲೈನ್‍ನಲ್ಲಿ ದೂರುಗಳನ್ನು ದಾಖಲಿಸಲು ಮಂಗಳೂರು ಮಹಾನಗರ ಪಾಲಿಕೆಯ ಅಧಿಕೃತ ವೆಬ್‍ಸೈಟ್  ನೋಡಬಹುದಾಗಿದೆ. ಈ ಕೇಂದ್ರವು ದಿನದ 24 ಗಂಟೆಯೂ ಹಾಗೂ ವಾರದ 7 ದಿನಗಳಲ್ಲಿ ಕಾರ್ಯವನ್ನು ನಿರ್ವಹಿಸುತ್ತಿರುತ್ತದೆ. ದೂರುಗಳನ್ನು ದೂರವಾಣಿಯ ಮೂಲಕ 155313 , 0824-2220306 ಸಲ್ಲಿಸಬಹುದಾಗಿದೆ. ದಾಖಲಾದ ದೂರುಗಳನ್ನು ಕೂಡಲೇ ಸಂಬಂಧಪಟ್ಟ ವಿಭಾಗದ ಅಧಿಕಾರಿ/ ಸಿಬ್ಬಂದಿಗಳವರಿಗೆ ರವಾನಿಸಲಾಗುತ್ತದೆ.

 ಸಾರ್ವಜನಿಕರು ದೂರವಾಣಿ ಮೂಲಕ ದೂರುಗಳನ್ನು ನೀಡುವ ಜೊತೆಗೆ ತಮ್ಮ ಮೊಬೈಲ್ ನಂಬರನ್ನು ಕಡ್ಡಾಯವಾಗಿ ಒದಗಿಸಬೇಕು. ಇದರಿಂದ ದೂರಿನ ಸ್ಥಿತಿಗತಿಯ ಬಗ್ಗೆ ಮೊಬೈಲ್‍ಗೆ ಸಂದೇಶ ರವಾನಿಸಲಗುತ್ತದೆ ಎಂದು  ಮಹಾನಗರಪಾಲಿಕೆ ಆಯುಕ್ತರ  ಪ್ರಕಟಣೆ ತಿಳಿಸಿದೆ.

Leave a Reply

Please enter your comment!
Please enter your name here