ಮ0ಗಳೂರು :ಪಿಲಿಕುಳ ಮಕ್ಕಳ ಹಬ್ಬದಲ್ಲಿ ಮಕ್ಕಳಿಂದ ರಾಷ್ಟ್ರ ನಾಯಕರ ವೇಷ ವೈಭವ

ಮ0ಗಳೂರು : ನವೆಂಬರ್ 14ರಂದು ಪಿಲಿಕುಳ ಮಕ್ಕಳ ಹಬ್ಬದಲ್ಲಿ ರಾಷ್ಟ್ರ ನಾಯಕರ ವೇಷ ವೈಭವ ಕಾರ್ಯಕ್ರಮ ಆಯೋಜಿಸಲಾಗಿದ್ದು ಮಕ್ಕಳು ರಾಷ್ಟ್ರ ನಾಯಕರ ವೇಷಧರಿಸಿ ಈ ಸಂಬ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಸಲಾಗಿದೆ. ಸ್ವಾತಂತ್ರ್ಯ ಹೋರಾಟಗಾರರು ನೋಬೆಲ್ ಪ್ರಶಸ್ತಿ ಪುರಸ್ಕøತರು, ಜ್ಞಾನಪೀಠ ಪ್ರಶಸ್ತಿ ಪುರಸ್ಕøತರು, ವಿಜ್ಞಾನಿಗಳು, ಹರಿದಾಸರು, ಸಂತರು, ರಾಷ್ಟ್ರಾಧ್ಯಕ್ಷರು, ರಾಷ್ಟ್ರದ ಪ್ರಧಾನ ಮಂತ್ರಿಗಳು ಹೀಗೆ ಮಹಾ ಪುರುಷರುಗಳ ವೇಷಧಾರಿಗಳ ಅನಾವರಣವಾಗಲಿದೆ. ಉದಾಹರಣೆಗೆ : ಮಹಾತ್ಮಾಗಾಂಧಿ, ಜವಹಾರ್‍ಲಾಲ್ ನೆಹರೂ, ಲಾಲ್‍ಬಹೂದ್ದೂರ್ ಶಾಸ್ತ್ರಿ, ಸುಭಾಷ್ ಚಂದ್ರ ಬೋಸ್, ಸ್ವಾಮಿ ವಿವೇಕಾನಂದ, ಬಿ. ಆರ್. ಅಂಬೇಡ್ಕರ್, ಸಂತ ಶಿಶುನಾಳ ಶರೀಫ, ಬಸವೇಶ್ವರರು, ಕನಕದಾಸರು, ಪುರಂದರ ದಾಸರು, ಸಂತ ಕಬೀರ, ಶಿವಾಜಿ ಮಹಾರಾಜ, ರಾಣಾ ಪ್ರತಾಪ್ ಸಿಂಹ, ವೀರರಾಣಿ ಅಬ್ಬಕ್ಕ, ಝಾನ್ಸಿ ರಾಣಿ ಲಕ್ಷ್ಮೀ ಭಾಯಿ, ಒನಕೆ ಓಬವ್ವ, ಇಂದಿರಾಗಾಂಧಿ, ಮೊರಾರ್ಜಿ ದೇಸಾಯಿ, ಮದರ್ ತೇರೆಸಾ, ಗೋಪಾಲಕೃಷ್ಣ ಗೋಖಲೆ, ಬಾಲಗಂಗಾಧರ ತಿಲಕ್, ಸರ್ವಪಳ್ಳಿ ರಾಧಾಕೃಷ್ಣನ್, ರವೀಂದ್ರನಾಥ್ ಠಾಗೂರ್, ಜಗದೀಶ್ ಚಂದ್ರ ಬೋಸ್, ಕುವೆಂಪು, ಕುದ್ಮುಲ್ ರಂಗರಾವ್, ಕಯ್ಯಾರ ಕಿಞ್ಞಣ್ಣ ರೈ, ಮಂಜೇಶ್ವರ ಗೋವಿಂದ ಪೈ, ಕೋಟ ಶಿವರಾಮ ಕಾರಂತ, ಸರ್ ಎಂ. ವಿಶ್ವೇಶ್ವರಯ್ಯ, ಅಬ್ದುಲ್ ಕಲಾಂ, ಅನ್ನಿ ಬೆಸೆಂಟ್, ಇತ್ಯಾದಿ

ಈ ನೆಲೆಯಲ್ಲಿ ರಾಷ್ಟ್ರ ಸಾಧಕ ಕ್ಷೇತ್ರದ ವೇಷಧರಿಸಿದ ಮಕ್ಕಳ ವಿವಿಧ ವಿಭಾಗಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ವಿಭಾಗ 1: ಒಂದನೇ ತರಗತಿಯಿಂದ ಕೆಳಗಿನ ಮಕ್ಕಳು

ವಿಭಾಗ 2: ಒಂದನೇ ತರಗತಿಯಿಂದ ಐದನೇ ತರಗತಿವರೆಗೆ

ವಿಭಾಗ 3: ಐದನೇ ತರಗತಿಯಿಂದ ಏಳನೇ ತರಗತಿವರೆಗೆ

ವಿಭಾಗ 4: ಏಂಟನೇ ತರಗತಿಯಿಂದ ಹತ್ತನೇ ತರಗತಿವರೆಗೆ

ಈ ಬೃಹತ್ ವೇಷಧಾರಿಗಳ ಪ್ರದರ್ಶನ ನವೆಂಬರ್ 14ರಂದು ಬೆಳಿಗ್ಗೆ 10 ಗಂಟೆಯಿಂದ 12ರ ಒಳಗೆ ಅನಾವರಣಗೊಳ್ಳಲಿದೆ. ಪಿಲಿಕುಳದ ಮುಖ್ಯದ್ವಾರದಿಂದ ವೇಷಧಾರಿಗಳು ಮೆರವಣಿಗೆ ಸಂಭ್ರಮದೊಂದಿಗೆ ಸಾಗಿ ಡಾ. ಕೋಟ ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಎದುರು ಸಂಪನ್ನಗೊಳ್ಳಲಿರುವರು. ಪ್ರತ್ಯೇಕ ಪ್ರತ್ಯೇಕವಾಗಿ ಎಲ್ಲಾ ಮಕ್ಕಳಿಗೂ ಸಂಭ್ರಮದ ಉಡುಗೊರೆ ಹಾಗೂ ಪ್ರಶಸ್ತಿ ಪತ್ರದೊಂದಿಗೆ ಗೌರವಿಸಲಾಗುವುದು.

ವಿವಿಧ ಶಾಲಾ ಕಾಲೇಜುಗಳ, ಸಂಘ ಸಂಸ್ಥೆಗಳ ನಾಮಾಂಕಿತದ ಬ್ಯಾನರ್‍ಗಳೊಂದಿಗೆ ಸಾಮೂಹಿಕವಾಗಿಯೂ ಮಕ್ಕಳು ಪಾಲ್ಗೊಳ್ಳಬಹುದು. ಸಾರ್ವಜನಿಕರಿಗೆ ತಮ್ಮ ಮಕ್ಕಳೊಂದಿಗೆ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರುಗಳು ಈ ವಿಶೇಷ ರಾಷ್ಟ್ರ ಪುರುಷರ ವೇಷಧಾರಿಗಳ ಅನಾವರಣದ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಪಿಲಿಕುಳ ಮಕ್ಕಳ ಹಬ್ಬದ ಪರವಾಗಿ ಎಸ್. ಪ್ರದೀಪ ಕುಮಾರ ಕಲ್ಕೂರ ವಿನಂತಿಸಿದ್ದಾರೆ. ನೊಂದಾವಣಿ ಅರ್ಜಿ ಹಾಗೂ ವಿವರಗಳಿಗೆ ಶ್ರೀಮತಿ ವಿಜಯಲಕ್ಷ್ಮೀ ಬಿ. ಶೆಟ್ಟಿ (9448163607), ದಯಾನಂದ ಕಟೀಲು (9448545578), ಮಂಜುಳಾ ಶೆಟ್ಟಿ (9591469555), ಕಲ್ಕೂರ ಪ್ರತಿಷ್ಠಾನ, ಶ್ರೀಕೃಷ್ಣ ಸಂಕೀರ್ಣ, ಮಹಾತ್ಮಾಗಾಂಧಿ ರಸ್ತೆ, ಕೊಡಿಯಾಲ್‍ಬೈಲ್, ಮಂಗಳೂರು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Leave a Reply

Please enter your comment!
Please enter your name here