ಮ0ಗಳೂರು : ಮಕ್ಕಳ ಚಲನಚಿತ್ರೋತ್ಸವ: ನಾಳೆಯಿಂದ ಸುಗಮ ಪ್ರದರ್ಶನ

ಮ0ಗಳೂರು : 10ನೇ ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ಪ್ರಯುಕ್ತ ತಾಂತ್ರಿಕ ಕಾರಣಗಳಿಂದ ಮಂಗಳೂರು ಹೊರತುಪಡಿಸಿ ಉಳಿದೆಡೆ ಪ್ರದರ್ಶನಕ್ಕೆ ತೊಂದರಯಾಗಿದ್ದು, ನಾಳೆಯಿಂದ ಮಂಗಳೂರಿನ ಚಿತ್ರಮಂದಿರಗಳಲ್ಲಿ ಸುಗಮ ಪ್ರದರ್ಶನಕ್ಕೆ ಅಗತ್ಯ ಸಿದ್ಧತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದ್ದಾರೆ.

ಅವರು ಇಂದು ಈ ಸಂಬಂಧ ತಮ್ಮ ಕಚೇರಿಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ಹಾಗೂ ಚಿಲ್ಡ್ರನ್ಸ್ ಇಂಡಿಯಾ ಅಧ್ಯಕ್ಷ ನಂಜುಂಡೇಗೌಡ, ಚಿತ್ರಮಂದಿರಗಳ ಮಾಲೀಕರು ಹಾಗೂ ಚಲನಚಿತ್ರೋತ್ಸವ ವಿವಿಧ ಸಮಿತಿಗಳ ತುರ್ತು ಸಭೆ ನಡೆಸಿದರು. ಮಂಗಳೂರಿನ 11 ಚಿತ್ರಮಂದಿರಗಳಲ್ಲಿ ಚಿತ್ರಪ್ರದರ್ಶನವಾಗಲಿದ್ದು, ಪ್ರತಿಯೊಂದು ಚಿತ್ರಮಂದಿರದಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಸಮರ್ಪಕವಾಗಿ ಚಿತ್ರಪ್ರದರ್ಶನ ಆಗಲು ಯಾ ಚಿತ್ರಮಂದಿರಗಳಿಗೆ ಮೇಲ್ವಿಚಾರಕರು ಮತ್ತು ಸಹಾಯಕರನ್ನು ನೇಮಿಸಲಾಗಿದೆ. ಹಿಂದಿನ ದಿವಸವೇ ಚಿತ್ರಮಂದಿರಗಳಿಗೆ ಪ್ರದರ್ಶನವಾಗುವ ಚಿತ್ರವನ್ನು ತಲುಪಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಶಾಲಾ ಮಕ್ಕಳನ್ನು ಕರೆತರಲು ವಾಹನದ ವ್ಯವಸ್ಥೆ ಮಾಡಲಾಗಿದೆ. ಎದುರಾಗಿದ್ದ ಕೆಲವೊಂದು ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ನಾಳೆಯಿಂದ ಸುಗಮವಾಗಿ ಚಿತ್ರಪ್ರದರ್ಶನವಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ಪಿ.ವಿ. ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Please enter your comment!
Please enter your name here