ಮ0ಗಳೂರು: ಮರಳು ಸಾಗಾಟ: ವಾಹನ ವಶ

ಮ0ಗಳೂರು : ಮಂಗಳೂರು ತಾಲ್ಲೂಕು ಪಡುಶೆಡ್ಡೆ ಗ್ರಾಮದ ಬಳಿ ಮರಳು ತೆಗೆದು ಸಾಗಾಟ ಮಾಡಲು ತೆರಳಿದ್ದ 4 ವಾಹನಗಳು ಮತ್ತು 1 ಜೆ.ಸಿ.ಬಿ.ಯನ್ನು ವಶಪಡಿಸಿಕೊಂಡು, ಕಾವೂರು ಪೊಲೀಸ್ ಠಾಣೆಯ ವಶಕ್ಕೆ ನೀಡಿ ಸದರಿ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿರುತ್ತದೆ. 3 ವಾಹನಗಳು ಮರಳು ತುಂಬಿದ್ದು, 1 ವಾಹನ ಲೋಡ್‍ಗೆ ಸಿದ್ಧವಾಗಿತ್ತು. ಮಾರ್ಚ್ 1 ಹಾಗೂ 2 ರಂದು ಈ ಕಾರ್ಯಾಚರಣೆ ನಡೆಸಲಾಗಿದ್ದು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಭಾರ ಉಪ ನಿರ್ದೇಶಕರಾದ ಕೆ.ಎಸ್.ನಾಗೇಂದ್ರಪ್ಪ, ಸಹಾಯಕ ಅಭಿಯಂತರರಾದ ಎಸ್. ಮಹದೇವಪ್ಪ, ಕೊರೆಯುವ ಅಭಿಯಂತರರಾದ ರಾಮಕೃಷ್ಣಯ್ಯ ಹಾಗೂ ವಾಹನ ಚಾಲಕರಾದ ಕೆ.ಆರ್.ಚನ್ನಪ್ಪ ಇದರಲ್ಲಿ ಭಾಗವಹಿಸಿದ್ದರು.

Leave a Reply

Please enter your comment!
Please enter your name here