ಮ0ಗಳೂರು: ಮಾರ್ಚ್ 8: ತುಳು ಭವನದಲ್ಲಿ ಗಿರಿಜನ ಉತ್ಸವ

ಮ0ಗಳೂರು : ಕನ್ನಡ ಮತ್ತು ಸಂಸ್ಕøತಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ಮಾ. 8 ರಂದು, ಗಿರಿಜನ ಉತ್ಸವ ಕಾರ್ಯಕ್ರಮವು ತುಳು ಭವನ, ಉರ್ವಸ್ಟೋರ್, ಮಂಗಳೂರಿನಲ್ಲಿ ನಡೆಯಲಿರುವುದು.
ಅಂದು ಪೂರ್ವಾಹ್ನ 11.30ಕ್ಕೆ ಉದ್ಘಾಟನಾ ಕಾರ್ಯಕ್ರಮವನ್ನು ಅರಣ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ಉದ್ಘಾಟಿಸಲಿರುವರು. ಶಾಸಕ ಜೆ.ಆರ್ ಲೋಬೋg ಅಧ್ಯಕ್ಷತೆ ವಹಿಸಲಿರುವರು.
ಪೂರ್ವಾಹ್ನ 10.30 ರಿಂದ ದಿನವಿಡಿ ನಡೆಯುವ ಸಾಂಸ್ಕøತ್ರಿಕ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಕಲಾವಿದರಿಂದ ಬುಡಕಟ್ಟು ಕಲಾಪ್ರದರ್ಶನ, ಜನಪದ ಹಾಡುಗಳು, ಕಂಗೀಲು, ಕೊರಗರ ಡೋಲು ಕುಣಿತ, ಕೊರಗರ ಗಜ ಮೇಳ, ಸುಗಮ ಸಂಗೀತ, ಗುಮಟೆ ನೃತ್ಯ, ಕೋಲಾಟ, ಶಾಸ್ತ್ರೀಯ ನೃತ್ಯ, ದಾಸರ ಪದಗಳು, ಯಕ್ಷಗಾನ ಮೊದಲಾದ ಕಲಾಪ್ರಕಾರಗಳು ಪ್ರದರ್ಶನಗೊಳ್ಳಲಿವೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Leave a Reply

Please enter your comment!
Please enter your name here