ಮ0ಗಳೂರು : ಸುಳ್ಯದಲ್ಲಿ  ಜಿಲ್ಲಾ ಮಟ್ಟದ ಯುವಜನೋತ್ಸವ

ಮ0ಗಳೂರು : 2015-16ನೇ ಸಾಲಿನ ಜಿಲ್ಲಾ ಮಟ್ಟದ ಯುವಜನೋತ್ಸವವು ದಿನಾಂಕ: 28-11-2015 ಶನಿವಾರ ಪೂರ್ವಹ್ನ 9.00  ಗಂಟೆಗೆ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಸಭಾಂಗಣ ಸುಳ್ಯ ತಾಲೂಕು ಇಲ್ಲಿ ನಡೆಸಲಾಗುವುದು.  ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಜನಪದ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು.

ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ತಮ್ಮ ಪ್ರವೇಶ ಪತ್ರಗಳನ್ನು ನ: 26 ರ ಒಳಗಾಗಿ ಶ್ರೀ ದೇವರಾಜ್ ಮುತ್ಲಾಜೆ ಸಹಾಯಕ ಯುವ ಸಬಲೀಕರಣ ಕ್ರೀಡಾಧಿಕಾರಿ ತಾಲೂಕು ಪಂಚಾಯತ್ ಸುಳ್ಯ (ದೂ: 9448548449) ಇವರಿಗೆ ಕಳುಹಿಸಿ ಕೊಡುವಂತೆ  ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು ಪ್ರಕಟಣೆ ತಿಳಿಸಿದೆ.

Leave a Reply

Please enter your comment!
Please enter your name here