ಮ0ಗಳೂರು: ಸ್ವಯಂ ಉದ್ಯೋಗ ಸಾಲ ಯೋಜನೆ

ಮ0ಗಳೂರು : ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿ ಹಿಂದುಳಿದ ವರ್ಗಗಳಲ್ಲಿ ಬರುವ ಅಲೆಮಾರಿ/ಅರೆ ಅಲೆಮಾರಿ ಜನಾಂಗದವರಿಗೆ (ಜೋಗಿ ಮತ್ತು ಗೊಲ್ಲ) ಸ್ವಯಂ ಉದ್ಯೋಗ ಸಾಲ ಯೋಜನೆ ಹಾಗೂ ವಿವಿಧ ವೃತ್ತಿಪರ (ಬಿ.ಇ. ಎಂ.ಬಿ.ಬಿ.ಎಸ್. ಎಂ.ಡಿ ಡಿಪ್ಲೋಮ, ಐ.ಟಿ.ಐ, ನರ್ಸಿಂಗ್, ಬಿ.ಎ, ಬಿ.ಎಸ್ಸಿಇ, ಎಂ.ಎ, ಎಂ.ಎಸ್ಸಿ, ಡಿಇಡಿ ಮತ್ತು ಬಿ.ಇಡಿ) ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಈ ವರ್ಗಗಳ ಅಭ್ಯರ್ಥಿಗಳಿಗೆ ಅರಿವು:ಶೈಕ್ಷಣಿಕ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜ. 15ರೊಳಗೆ ಆಸಕ್ತರು ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಿ. ದೇವರಾಜ ಅರಸು ನಿಗಮ, ರೇಡಿಯೋ ಪಾರ್ಕ್ ಉರ್ವಸ್ಟೋರ್, ಮಂಗಳೂರು ಅರ್ಜಿ ಸಲ್ಲಿಸುವಂತೆ ಜಿಲ್ಲಾ ವ್ಯವಸ್ಥಾಪಕರು, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಮಂಗಳೂರು ಪ್ರಕಟಣೆ ತಿಳಿಸಿದೆ.

Leave a Reply