ಯಕ್ಷಮಿತ್ರರು ಅರ್ಪಿಸುವ ಯಕ್ಷಗಾನ ವೈಭವ

ಯಕ್ಷಮಿತ್ರರು ಅರ್ಪಿಸುವ ಯಕ್ಷಗಾನ ವೈಭವ ‘ವಿರೋಚನ – ತರಣಿಸೇನ’

ದುಬಾಯಿ: 2016 ಜೂನ್   3ನೇ ತಾರೀಕು ಶುಕ್ರವಾರ ಸಂಜೆ 5.00 ಗಂಟೆಯಿಂದ ಶೇಖ್ ರಾಶೀದ್ ಸಭಾಂಗಣ – (ಇಂಡಿಯನ್ ಹೈಸ್ಕೂಲ್ ದುಬಾಯಿ) ಭವ್ಯ ರಂಗ ಮಂಟಪದಲ್ಲಿ, ಪ್ರೀಶಿಯಸ್ ಪಾರ್ಟೀಸ್ ಅಂಡ್ ಎಂಟರ್ಟೈನ್ಮೆಂಟ್ ಸರ್ವಿಸಸ್ ಆಶ್ರಯದಲ್ಲಿ ಯಕ್ಷಮಿತ್ರರು ಅರ್ಪಿಸುವ ಯಕ್ಷಗಾನ “ವಿರೋಚನ – ತರಣಿಸೇನ” ಯಕ್ಷಗಾನ ಕಥಾಭಾಗವನ್ನು ಆಡಿ ತೋರಿಸಲಿರುವರು.

ಶ್ರೀ ಕಟೀಲು ಮೇಳದ ಪ್ರಸಿದ್ದ ಭಾಗವತರಾದ ಸುಮಧುರ ಕಂಠದ ಪಟ್ಲ ಸತೀಶ್ ಶೆಟ್ಟಿ ಯವರು ಮತ್ತು ಶ್ರೀ ರವಿಚಂದ್ರ ಕನ್ನಡಿಕಟ್ಟೆ ದುಬಾಯಿಗೆ ಆಗಮಿಸಿ ತಮ್ಮ ಭಾಗವತಿಕೆಯ ಮೂಲಕ ಯಕ್ಷಗಾನ ಪ್ರಿಯರ ಮನತಣಿಸಲಿದ್ದಾರೆ. ಚೆಂಡೆ ವಾದನದಲ್ಲಿ ಶ್ರೀ ಗುರುಪ್ರಸಾದ್ ಬೊಳ್ಳಿಂಜಡ್ಕ, ಶ್ರೀ ವೆಂಕಟೇಶ್ ಶಾಸ್ತ್ರಿ,  ಶ್ರೀ ಮಧೂರ್ ಲಕ್ಷ್ಮಿನಾರಾಯಣ ಶರ್ಮ, ಚಕ್ರತಾಳದಲ್ಲಿ ಶ್ರೀ ಚಂದ್ರಮೋಹನ್ ಹಾಗೂ  ವೇಷ ಭೂಷಣ ಮತ್ತು ವರ್ಣಾಲಾಂಕಾರ  ಶ್ರೀ ಗಂಗಾಧರ ಶೆಟ್ಟಿಗಾರ್ ಮತ್ತು ಶ್ರೀ ಲಕ್ಷ್ಮಣ್ ಕುಮಾರ್ ಮರಕಡ,  ರಂಗ ಸಜ್ಜಿಕೆಯಲ್ಲಿ ದಿನೇಶ್ ಬಿಜೈ, ಭಾಸ್ಕರ್ ನೀರ್ ಮಾರ್ಗ ಮತ್ತು ಆನಂದ್ ಸಾಲಿಯಾನ್ ಉಳ್ಳಂಜೆ ಇವರ ಹಸ್ತಕೌಶಲ್ಯದಲ್ಲಿ ಮೂಡಿಬರಲಿರುವ ಯಕ್ಷಗಾನ ವೈಭವವನ್ನು ವೀಕ್ಷಿಸುವ ಭಾಗ್ಯ ಕೊಲ್ಲಿನಾಡಿನ ಯಕ್ಷಗಾನ ಪ್ರಿಯರಿಗೆ ಲಭ್ಯವಾಗಲಿದೆ.

image003yakshagana-020160528-003 image004yakshagana-020160528-004 image005yakshagana-020160528-005 image007yakshagana-020160528-007 image001yakshagana-020160528-001 image002yakshagana-020160528-002

ಯಕ್ಷಮಿತ್ರರುಹೆಜ್ಜೆ ಗುರುತು….

ಭಾರತೀಯ ಶ್ರೀಮಂತ ಕಲಾಪ್ರಾಕಾರಗಳಲ್ಲಿ ತನ್ನದೇ ಆದ ಸೊಬಗನ್ನು ಉಳಿಸಿಕೊಂಡಿರುವ ಕರಾವಳಿ ಕರ್ನಾಟಕದ ಗಂಡು ಕಲೆ ಯಕ್ಷಗಾನ ವೈಭವವನ್ನು ಅಸ್ವಾದಿಸಿದ್ದ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಯಕ್ಷಗಾನ ಕಲಾವಿದರ ತಂಡ ಕಾನೂನು ಕಟ್ಟಳೆಯ ಚೌಕಟ್ಟಿನ ಒಳಗೆ ಚ್ಯುತಿ ಬಾರದ ರೀತಿಯಲ್ಲಿ ಅಪಾರ ಖರ್ಚು ವೆಚ್ಚ ಮಾಡಿಕೊಂಡು ಪ್ರದರ್ಶನ ನಡೆಸಿದ್ದು ಬರುತ್ತಿದ್ದಾರೆ.

ಯಕ್ಷಗಾನ ಮೇಳಕ್ಕೆ  ಬೇಕಾಗುವ ಅಪಾರ ಪ್ರಮಾಣದ ವಸ್ತ್ರಾಭರಣಗಳು, ಕಿರೀಟ, ಚೆಂಡೆ, ತಾಳ ಮದ್ದಲೆಗಳು. ಆಭರಣಗಳು ವಿವಿಧ ವಿನ್ಯಾಸದ ಉಡುಪುಗಳನ್ನು ಪಾತ್ರಕ್ಕೆ ತಕ್ಕಂತೆ ಸಿದ್ದಪಡಿಸಬೇಕು. ಕೊಲ್ಲಿ ರಾಷ್ಟ್ರದ ಕಲಾಪೋಷಕರು ಯಕ್ಷಮಿತ್ರರ ಉತ್ಸಾಹಕ್ಕೆ ನೀರೆರೆದು ಪೋಷಿಸಿದರು. ಒಂದು ದೇವಿ ಮಹಾತ್ಮೆ ಪ್ರಸಂಗಕ್ಕೆ ಬೇಕಾಗಿರುವ ಪರಿಕರಗಳನ್ನು ಸಂಗ್ರಹಿಸಿದರೆ, ಅದನ್ನು ಇನ್ನಿತರ ಯಾವುದೇ ಪ್ರಸಂಗಕ್ಕೆ ಉಪಯೋಗಿಸ ಬಹುದಾಗಿದೆ. ಯಕ್ಷಮಿತ್ರರು ಪೂರ್ಣ ಪ್ರಮಾಣದ ಪರಿಕರಗಳನ್ನು ಒಟ್ಟು ಮಾಡಿ, ಕೊಲ್ಲಿ ನಾಡಿನಲ್ಲಿ ಯಕ್ಷಗಾನ ಪ್ರದರ್ಶನ ನಡೆಸುತ್ತಿರುವುದು ಹೆಗ್ಗಳಿಕೆಯ ವಿಚಾರವಾಗಿದೆ.

image006yakshagana-020160528-006 image008yakshagana-020160528-008 image009yakshagana-020160528-009

ಯಕ್ಷ ಮಿತ್ರರ ಕಲಾ ಭಂಡಾರದಲ್ಲಿರುವ  ಪರಿಕರಗಳು: ಐದು ಜನ ಹಿಮ್ಮೇಳದ ಮುಂಡಾಸು, ಚೆಂಡೆ, ಮದ್ದಲೆ, ಜಾಗಟೆ, ಚಕ್ರ ತಾಳ, ಹಾರ್ಮೊನಿಯಂ, ವಿಷ್ಣು ಚಕ್ರ, ದೇವೆಂದ್ರನ ವಜ್ರಾಯುದ, ತ್ರಿಶೂಲ, ಬಿಲ್ಲು ಬಾಣ, ಪರಶು, ದಂಡ, ರುದ್ರಾಕ್ಷಿ, ಕಮಂಡಲು, ಗೆಜ್ಜೆ, ಕೇಸರಿ ತಟ್ಟಿ, ಪಗಡಿ, ರಾಜ ವೇಷ, ಬಾಲು ಮುಂಡು ವೇಷ, ತುರಾಯಿ ಕಿರೀಟ, ಕೋಲು ಕಿರೀಟ, ಮಹಿಷಾಸುರನ ಕೊಂಬು, ಎದೆಪಟ್ಟಿ, ಶೋಗಲೆ, ಭುಜಪಟ್ಟಿ, ಕೆನ್ನೆಪು, ಕೈಕಟ್, ತೋಳುಕಟ್, ಕರ್ಣಪಾತ್ರೆ, ಎದೆಪದಕ, ಸಪೂರ ಅಟ್ಟಿಗೆ, ಹೊರಗಿನ ದಗನೆ, ಉಂಡಾಟಿಗೆ, ವೀರಕಸೆ, ಉಲ್ಲನ್ ಡಾಗು, ಹೊರಗಿನ ಚಡ್ಡಿ, ಸಾಕ್ಸ್, ಕಾಲು ಪಟ್ಟಿಸ್ ಇತ್ಯಾದಿ ಪಳ ಪಳನೆ ಹೊಳೆಯುವ ವಸ್ತ್ರಾಭರಣಗಳು ಯಕ್ಷ ಮಿತ್ರರ ಬಹು ದೊಡ್ಡ ಆಸ್ತಿಯಾಗಿದೆ. ಅತ್ಯಂತ ಅಕರ್ಷಕ ಉಡುಗೆ ತೊಡುಗೆಗಳು, ಅಭರಣ, ಅಯುಧಗಳು ಕಲಾವಿದರ ಉತ್ಸಾಹ ಹಿಮ್ಮಡಿಗೊಳಿಸಿದೆ. ಅನುಭವಿ ಕಲಾವಿದರೊಂದಿಗೆ ಯುವ ಪ್ರತಿಭೆಗಳು ಸೇರ್ಪಡೆಗೊಂಡು, ಕಲಾ ದೇವಿಯ ಆರಾಧನೆಯಲ್ಲಿ ತಮ್ಮನು ಸಮರ್ಪಿಸಿ ಕೊಂಡಿದ್ದಾರೆ.

image010yakshagana-020160528-010 image011yakshagana-020160528-011 image012yakshagana-020160528-012

2004 ರಿಂದ ಯಕ್ಷ ಮಿತ್ರರ ಪ್ರದರ್ಶವಾದ ಪ್ರಸಂಗಗಳು

* ಪ್ರಥಮ ಪ್ರದರ್ಶನ 2004 ರಲ್ಲಿ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ, ಶ್ರೀ ಪುರುಷೋತ್ತಮ ಪೂಂಜಾ ರವರ ಭಾಗವತಿಕೆಯಲ್ಲಿ.

* ಶಾಂಭವಿ ವಿಲಾಸ ( ದೇವಿ ಮಹಾತ್ಮೆ) ಶ್ರೀ ಪುರುಷೋತ್ತಮ ಪೂಂಜಾ ರವರ ಭಾಗವತಿಕೆಯಲ್ಲಿ.

* ಶ್ರೀ ದೇವಿ ಲಲಿತೋಪಖ್ಯಾನ – ಶ್ರೀ ನಾರಾಯಣ ಶಭರಾಯ ರವರ ಭಾಗವತಿಕೆಯಲ್ಲಿ.

* ದಕ್ಷ ಯಜ್ಞ ಭಾರ್ಗವ ವಿಜಯ – ಶ್ರೀ ಜಯಪ್ರಕಾಶ ನಿಡುವಣಯ್ಯ ರವರ ಭಾಗವತಿಕೆಯಲ್ಲಿ.

* ಕೋಟಿ ಚೆನ್ನಯ್ಯ – ಶ್ರೀ ಪುರುಷೋತ್ತಮ ಪೂಂಜಾ ರವರ ಭಾಗವತಿಕೆಯಲ್ಲಿ.

* ಶಾಂಭವಿ ವಿಜಯ – ಶ್ರೀ ಕಟೀಲು ಮೇಳದ ಪಟ್ಲ ಸತೀಶ್ ಶೆಟ್ಟಿ ಯವರ ಭಾಗವತಿಕೆಯಲ್ಲಿ. (2011)

* “ತ್ರಿಜನ್ಮ ಮೋಕ್ಷ” (2012)

* “ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ” (2013)

* “ಯಕ್ಷ ವೈಭವ – ಮಾನಿಷಾದ” (2014)

* “ಮಣಿಕಂಠ ಮಹಿಮೆ – ರತಿ ಕಲ್ಯಾಣ” (2015)

ಇನ್ನಿತರ ಸಂಘ ಸಂಸ್ಥೆಗಳಲ್ಲಿ ಯಕ್ಷ ಮಿತ್ರರ ತಂಡ ನೀಡಿರುವ ಪ್ರಸಂಗಗಳು : ಶಾಂಭವಿ ವಿಜಯ – ಶ್ರೀ ಬಲಿಪ ನಾರಾಯಣ ಭಾಗವತರ ಭಾಗವತಿಕೆಯಲ್ಲಿ ನಡೆದಿತ್ತು. ಅಭಿಮನ್ಯು ಕಾಳಗ, ಕರ್ಣಾರ್ಜುನ ಕಾಳಗ, ಶುಂಭಾಸುರ ವಧೆ, ಭಸ್ಮಾಸುರ ಮೋಹಿನಿ, ಅಮರ ಶಿಲ್ಪಿ ವೀರ ಕಲ್ಕುಡ, ಬಿರ್ದ್ ದ ಬೀರೆರ್, ಮಹಿಸಾಸುರ ವಧೆ.

ಯಕ್ಷಗಾನ “ವಿರೋಚನ – ತರಣಿಸೇನ” ಯಕ್ಷಗಾನ ಕಥಾಭಾಗದ ಮುಮ್ಮೇಳದಲ್ಲಿ: ಸ್ಥಳಿಯ ಪರಿಪಕ್ಕ ಕಲಾವಿದರಾದ ಶೇಕರ್ ಡಿ ಶೆಟ್ಟಿಗಾರ್, ಕಿಶೋರ್ ಗಟ್ಟಿ ಉಚ್ಚಿಲ, ಚಿದಾನಂದ ಪೂಜಾರಿ ವಾಮಂಜೂರು, ಕೃಷ್ಣ ಪ್ರಸಾದ್ ಭಟ್, ರವಿ ಭಟ್, ಪ್ರಭಾಕರ ಸುವರ್ಣ, ಸುಧಾಕರ್ ತುಂಬೆ, ಬಾಲಕೃಷ್ಣ ಶೆಟ್ಟಿಗಾರ್, ಭವಾನಿ ಶಂಕರ್ ಶರ್ಮಾ, ವಾಸು ಬಾಯರು, ಕು| ಶರಣ್ಯ ವೆಂಕಟೇಶ್ ಭಟ್, ಪ್ರಾಪ್ತಿ ಜಯಾನಂದ್ ಪಕ್ಕಳ, ಅದಿತಿ ದಿನೇಶ್ ಶೆಟ್ಟಿ, ಆದಿತ್ಯ ದಿನೇಶ್ ಶೆಟ್ಟಿ, ತನೀಶ್ ಪ್ರಕಾಶ್ ಪಕ್ಕಳ, ತನ್ವಿ ಪ್ರಸನ್ನ, ಅನ್ವಿ ಜಗನ್ನಾಥ್ ಬೆಳ್ಳಾರೆ, ಯಶಸ್ವಿನಿ ಶೇಖರ್ ಪೂಜಾರಿ, ಕೃಷ್ಣ ರಾಜ ರಾವ್ ಅಬುಧಾಬಿ, ಸ್ಮೃತಿ ಎಲ್ ಭಟ್, ಮನಸ್ವಿ ಶರ್ಮಾ, ಗಿರಿಶ್ ನಾರಾಯಣ್ ಕಾಟಿಪಳ್ಳ, ಸಂದೀಪ್ ಶೆಟ್ಟಿ, ಸೀತರಾಮ್ ಶೆಟ್ಟಿ, ಜಯಂತ್ ಶೆಟ್ಟಿ, ಶಶಿಕಾಂತ್ ಶೆಟ್ಟಿ ಕಾರ್ಕಳ, ವಸಂತ್ ಶೇರ್ವೆಗಾರ್, ಅನಿಕೇತ್ ಶರ್ಮಾ, ಪ್ರತೀಕ್ ಪಕ್ಕಳ, ಸುಶಾಂತ್ ರಾಂ  ಜೆಪ್ಪು, ಸಮಾಂತ ಹೆಗ್ಡೆ, ಶರತ್ ಪೂಜಾರಿ, ಸ್ವಾತಿ ಶರತ್ ಸರಳಾಯ, ದಕ್ಷಾ ರವೀಂದ್ರ ಕೋಟ್ಯಾನ್, ಸಾತ್ವಿಕ್ ಎಲ್ ಭಟ್, ಸತೀಶ್ ಶೆಟ್ಟಿಗಾರ್, ಅಪೂರ್ವ ದುರ್ಗೇಶ್ ಶೆಟ್ಟಿಗಾರ್, ಯಶಸ್ವಿನಿ ಶೇಖರ್ ಪೂಜಾರಿ ಮತ್ತು ಎಶಿಕ ಶೇಖರ್ ಪೂಜಾರಿ ತಮ್ಮ ಕಲಾಕೌಶಲ್ಯಕ್ಕೆ ಯಕ್ಷಗಾನ ವೇದಿಕೆ ಸಾಕ್ಷಿಯಾಗಲಿದೆ.

image013yakshagana-020160528-013

ಮುಂದಿನ ಪೀಳಿಗೆಯ ಯಕ್ಷಗಾನ ಕಲೆಯ ರಾಯಭಾರಿಗಳು.

ಈ ಬಾರಿಯ ಯಕ್ಷಗಾನ ಪ್ರಸಂಗದಲ್ಲಿ ಕೊಲ್ಲಿನಾಡಿನಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿರುವ ಐದು ವರ್ಷದಿಂದ ಹದಿನೈದು ವಯಸ್ಸಿನ ಒಳಗಿನ ಮಕ್ಕಳು ಮಕ್ಕಳು ತಮ್ಮ ಕಲಿಕೆಯೊಂದಿಗೆ ಯಕ್ಷಗಾನ ಕಲೆಯನ್ನು ಬಾಲ್ಯದಲ್ಲೇ ಮೈಗೂಡಿಸಿಕೊಂಡು ತಮ್ಮ ಅಪೂರ್ವ ಕಲಾಪ್ರತಿಭೆಯನ್ನು ವೇದಿಕೆಯ ಮೇಲೆ ಪ್ರದರ್ಶಿಸುವ ಮೂಲಕ ಮುಂದಿನ ಪೀಳಿಗೆಯ ಸಾಂಸ್ಕೃತಿಕ ರಾಯಭಾರಿಗಳಾಗಿ ಕಲಾದೇವಿಯ ಆರಾಧನೆಯ ಮೂಲಕ ಜನಮನ ಸೆಳೆಯಲಿದ್ದಾರೆ

ಯಕ್ಷಗಾನ ಅಭಿಮಾನಿಗಳಿಗೆ ಸ್ಥಳವಕಾಶ ಕಲ್ಪಿಸುವ ಸಲುವಾಗಿ ಬೃಹತ್ ಸಭಾಂಗಣದಲ್ಲಿ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದ್ದು. ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸುವುದರಿಂದ ಮುಂಗಡವಾಗಿ ಸ್ಥಳವನ್ನು ಕಾದಿರಿಸಲು ಯಕ್ಷಮಿತ್ರರು ವಿನಂತಿಯನ್ನು ಮಾಡಿದ್ದಾರೆ.

ಅತ್ಯಂತ ವೈಭವದ ಯಕ್ಷಗಾನ ಪ್ರಸಂಗದ ಪ್ರದರ್ಶನದ ವ್ಯವಸ್ಥೆಯ ಪೂರ್ಣ ಜವಬ್ಧಾರಿಯನ್ನು ಶ್ರೀ ದಿನೇಶ್ ಶೆಟ್ಟಿ ಕೊಟ್ಟಿಂಜ ಮತ್ತು ತಂಡದವರು ಕಳೆದ ಆರು ತಿಂಗಳಿನಿಂದ ನಿರಂತರವಾಗಿ ಕಾರ್ಯಯೋಜನೆಯನ್ನು ಹಾಕಿಕೊಂಡು ನಿರ್ವಹಿಸುತ್ತಿದ್ದಾರೆ.

ಕೊಲ್ಲಿನಾಡಿನಲ್ಲಿ ಯಕ್ಷಗಾನ ಕಲಾಪ್ರದರ್ಶನದ ಪವಿತ್ರ ಕಾರ್ಯಕ್ಕೆ ಕೊಲ್ಲಿನಾಡಿನ ಪ್ರಮುಖ ಉಧ್ಯಮಿಗಳು ಹಾಗೂ ಕಲಾಪ್ರೇಮಿಗಳು ಸಹಕಾರ ಬೆಂಬಲ ನೀಡಿ ಪ್ರೋತ್ಸಾಹಿಸುತ್ತಿರುವುದು ಸರ್ವಕಾಲಿಕ ಮಾನ್ಯರಾಗಿದ್ದಾರೆ.

ಕೊಲ್ಲಿನಾಡಿನಲ್ಲಿ ನಡೆಯುವ ಯಕ್ಷಗಾನ ಕಲೆಗೆ, ಕಲಾವಿದರಿಗೆ, ಆಯೋಜಕರಿಗೆ, ಪ್ರಾಯೊಜಕರಿಗೆ ಮಾಧ್ಯಮದ ಮೂಲಕ ಶುಭ ಹಾರೈಕೆಗಳು.

ಬಿ. ಕೆ. ಗಣೇಶ್  ರೈ, ಅರಬ್ ಸಂಯುಕ್ತ ಸಂಸ್ಥಾನ

Leave a Reply

Please enter your comment!

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

Please enter your name here