ಯಲ್ಲಾಪುರ: ಬಸ್, ಓಮ್ನಿ ಕಾರು ಹಾಗೂ ಬೈಕ್‍ ನಡುವೆ ಡಿಕ್ಕಿ – 5 ಮಂದಿ ಸಾವು

ಯಲ್ಲಾಪುರ: ಖಾಸಗಿ ಬಸ್, ಓಮ್ನಿ ಕಾರು ಹಾಗೂ ಬೈಕ್‍ ನಡುವೆ ಡಿಕ್ಕಿ ನಡೆದು 5 ಮಂದಿ ಸಾವನ್ನಪಿದ ಘಟನೆ ಉತ್ತರಕನ್ನಡದ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಬಳಿ ನಡೆದಿದೆ. ಕಾರಿನಲ್ಲಿದ್ದ 4 ಮಂದಿ ಮತ್ತು ಬೈಕ್ ಸವಾರ ಖಾಸಗಿ ಬಸ್‍ಗೆ ಬಲಿಯಾದ ಘಟನೆ ಭಾನುವಾರ ನಸುಕಿನಲ್ಲಿ ಸಂಭವಿಸಿದೆ.

06-03-2016-yellapur-accident-001 06-03-2016-yellapur-accident

ದೇವು ಜಾದವ್(35),ಶಶಿಕಲಾ ದೇವಮ್ಮ(42), ಅಕ್ಷತಾ(22), ಶಾರದಾ(55) ಮೃತ ಪಟ್ಟಿದ್ದು, ಬೈಕ್ ಸವಾರನ ಗುರುತು ಇನ್ನು ಪತ್ತೆಯಾಗಿಲ್ಲ. ದ್ಯಾಮಣ್ಣ ವಾಡ್ಕರ್, ಜ್ಯೋತಿ ಹಾಗೂ ಮತ್ತೋರ್ವ ಬಾಲಕನಿಗೆ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಯಲ್ಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಳಿಯಾಳದ 7 ಮಂದಿ ಓಮ್ನಿ ಕಾರಿನಲ್ಲಿ ಶಿವರಾತ್ರಿಗಾಗಿ ಧರ್ಮಸ್ಥಳಕ್ಕೆ ಬರುತ್ತಿದ್ದರು. ಬೆಳಗ್ಗೆ 3.45ರ ವೇಳೆಗೆ ಗುಳ್ಳಾಪುರದ ಹತ್ತಿರ ಬಂದಾಗ ಮುಂದುಗಡೆಯಿಂದ ಮಂಗಳೂರಿನಿಂದ ಗೋಕಾಕ್‍ಗೆ ಹೋಗುತ್ತಿದ್ದ ಗಣೇಶ್ ಟ್ರಾವೆಲ್ಸ್ ಬಸ್ ವೇಗವಾಗಿ ಬಂದು ಕಾರಿಗೆ ಗುದ್ದಿದೆ. ಬಸ್ ಗುದ್ದಿದ ರಭಸಕ್ಕೆ ಓಮ್ನಿಯ ಮುಂದಿನ ಭಾಗ ಮುದ್ದೆಯಾಗಿದೆ. ಡ್ರೈವರ್‍ಗೆ ವೇಗವನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣ ಕಾರಿನ ಹಿಂದೆ ಬರುತ್ತಿದ್ದ ಸ್ಕೂಟರ್‍ಗೆ ಬಸ್ ಗುದ್ದಿ ನಿಂತಿದೆ.

ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

Leave a Reply