ಯುವ ಕಾಂಗ್ರೆಸ್ ವತಿಯಿಂದ ಹೊನಲು ಬೆಳಕಿನ ರಾಷ್ಟೀಯ ಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ಯುವಕಾಂಗ್ರೆಸ್ ವತಿಯಿಂದ “ರಾಜೀವ್ ಗಾಂಧಿ ಟ್ರೋಪಿ-2016” ಹೊನಲು ಬೆಳಕಿನ ರಾಷ್ಟೀಯ ಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಬೀಡಿನಗುಡ್ಡೆ ಬಯಲುರಂಗ ಮಂದಿರದಲ್ಲಿ ಶುಕ್ರವಾರ ಚಾಲನೆ ನೀಡಿದರು.

rajiv gandhi trophy inauguration

ಮುಖ್ಯ ಅತಿಥಿಗಳಾಗಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷೀ ಮಾಧವ ಬನ್ನಂಜೆ, ಜಿಪಂ ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್, ಸುನೀಲ್ ಬಂಗೇರ, ಕೇಶವ ಕೋಟ್ಯಾನ್, ಅಮೃತ್ ಶೈಣೈ, ರಮೇಶ್ ಕಾಂಚನ್, ನಾರಾಯಣ ಕುಂದರ್, ಯುವರಾಜ್, ವಿಜಯ ಪೂಜಾರಿ, ಲತಾ ಶೇರಿಗಾರ್, ಪ್ರಖ್ಯಾತ್ ಶೆಟ್ಟಿ, ರಾಘವೇಂದ್ರ ಶೆಟ್ಟಿ ಕರ್ಜೆ, ಪ್ರಶಾಂತ್ ಪೂಜಾರಿ, ಯತೀಶ್ ಕರ್ಕೆರ,ಭಾಸ್ಕರ ರಾವ್ ಕಿದಿಯೂರು,ಜ್ಯೋತಿ ಹೆಬ್ಬಾರ್,ನಾಗೇಶ ಉದ್ಯಾವರ, ನಗರ ಸಭಾ ಸದಸ್ಯರು ಉಪಸ್ಥಿತರಿದ್ದರು.
ಮೂರು ದಿನಗಳ ಕಾಲ ಹೊನಲು ಬೆಳಕಿನಲ್ಲಿ ನಡೆಯುವ ಈ ಪಂದ್ಯಾಟದ ಪ್ರಥಮ ಬಹುಮಾನ 3 ಲಕ್ಷ ನಗದು ಮತ್ತು”ರಾಜೀವ್ ಗಾಂಧಿ ಟ್ರೋಪಿ, ದ್ವಿತೀಯ ಬಹುಮಾನ 1.5 ಲಕ್ಷ ನಗದು ಮತ್ತು “ರಾಜೀವ್ ಗಾಂಧಿ ಟ್ರೋಪಿ ನೀಡಲಾಗುವುದು.

Leave a Reply