ಯೂತ್ ರೆಡ್‍ಕ್ರಾಸ್ ಚಟುವಟಿಕೆಗಳ ಉದ್ಘಾಟನೆ

ಯೂತ್ ರೆಡ್‍ಕ್ರಾಸ್ ಚಟುವಟಿಕೆಗಳ ಉದ್ಘಾಟನೆ

ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯಡಕ ಇದರ ಯೂತ್‍ರೆಡ್‍ಕ್ರಾಸ್ ಘಟಕದ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿಇತ್ತೀಚಿಗೆ ನಡೆಯಿತು.

youth-redcross

ಮೂಡಬಿದ್ರಿಯ ಆಳ್ವಾಸ್ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಕುರಿಯನ್ ಅಧಿಕಾರತಿಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ‘ಸಮಾಜ ಸೇವೆಯ ಪರಿಕಲ್ಪನೆ ಪ್ರಸ್ತುತ ಸಮಾಜದಲ್ಲಿ ಬೇರೆಯೇ ಅರ್ಥವನ್ನು ಪಡೆದುಕೊಳ್ಳುತ್ತಿದೆ. ನಿಸ್ವಾರ್ಥ ಸೇವೆಯ ಬಗೆಗೆ ಒಲುಮೆ ಕಡಿಮೆಯಾಗುತ್ತಿದ್ದು, ಸಮಾಜ ಸೇವೆ ತೋರಿಕೆಗಾಗಿ ಮಾಡುವ ಪ್ರದರ್ಶನವಾಗುತ್ತಿದೆ. ಯುವಜನತೆ ಸಮಾಜದ ದೀನ-ದುರ್ಬಲರ ನೋವಿಗೆ ಸ್ಪಂದಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕಾಗಿದೆ. ಸದಾ ಸಂಪತ್ತಿನ ಆಸ್ತಿ ಗಳಿಕೆಯ ಉದ್ದೇಶವನ್ನೇ ಹೊಂದಿರುವ ವ್ಯಕ್ತಿಗಳು ಸಮಾಜಕ್ಕೆ ಆಸ್ತಿಯಾಗಲು ಸಾಧ್ಯವಿಲ್ಲ;ಇತರರೊಂದಿಗೆ ಸೌಹಾರ್ದಯುತ ಸಂಬಂಧದೊಂದಿಗೆ ಸಹಕಾರ ಮನೋಭಾವನೆಯ ನಿಸ್ವಾರ್ಥ ಸೇವಾ ಮನೋಭಾವದಚಿಂತನೆ ನಮ್ಮೆಲ್ಲರದ್ದಾಗಬೇಕು’ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯೂತ್‍ರೆಡ್‍ಕ್ರಾಸ್ ಸಭಾಪತಿತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ‘ನಾವು ಒಳ್ಳೆಯವರಾದರೆ ಸಮಾಜವೇ ನಮಗೆ ಒಳ್ಳೆಯದಾಗಿ ಕಾಣುತ್ತದೆ. ನಮ್ಮದೈನಂದಿನ ಬದುಕಿನಲ್ಲಿಇತರರ ನೋವು ನಲಿವಿಗೆ ಸ್ಪಂಧಿಸುವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು’ ಎಂದರು.

ಇನ್ನೋರ್ವ ಅತಿಥಿಗಳಾದ ಚಂದ್ರಶೇಖರ್ ಯೂತ್‍ರೆಡ್‍ಕ್ರಾಸ್ ವಿದ್ಯಾರ್ಥಿಗಳಿಗೆ ರೆಡ್‍ಕ್ರಾಸ್‍ನ ಆಶಯಗಳನ್ನು ತಿಳಿಸಿ ಪ್ರತಿಜ್ಞೆಯನ್ನು ಬೋಧಿಸಿದರು.

ಕಾಲೇಜಿನ ಪ್ರಾಂಶುಪಾಲ ಸೋಜನ್ ಕೆ. ಜಿ., ಸಭಾಧ್ಯಕ್ಷತೆ ವಹಿಸಿದ್ದರು.ಯೂತ್‍ರೆಡ್‍ಕ್ರಾಸ್‍ಕಾರ್ಯಕ್ರಮಅಧಿಕಾರಿ ಉದಯ ಶೆಟ್ಟಿ ಕೆ.,ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರು ಪ್ರಸ್ತಾವಿಸಿ ಸ್ವಾಗತಿಸಿದರು. ವಾಣಿಜ್ಯಶಾಸ್ತ್ರಉಪನ್ಯಾಸಕಿ ಮನೀಷಾ ನಿರೂಪಿಸಿದರು.ಕುಮಾರಿ ಭವ್ಯಶ್ರೀ ವಂದಿಸಿದರು.

Leave a Reply