ರತ್ನಗಿರಿಯಲ್ಲಿ ಮತ್ಸ ್ಯಗಂಧ ರೈಲ್ವೇ ಘಟನೆ-ರೈಲ್ವೇ ಯಾತ್ರಿ ಸಂಘ ಮುಂಬಯಿ ಖಂಡನೆ ರೈಲು ಯಾನದಲ್ಲಿ ಅನಾಗರಿಕ ವರ್ತನೆ ಬೇಡ – ಶಿಮಂತೂರು ಉದಯ ಶೆಟ್ಟಿ

ಮುಂಬಯಿ: ರತ್ನಗಿರಿಯಲ್ಲಿ ಮತ್ಸ ್ಯಗಂಧ ರೈಲ್ವೇ ಘಟನೆ ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ (ಪಶ್ಚಿಮ ವಲಯ) ಮತ್ತು ರೈಲ್ವೇ ಯಾತ್ರಿ ಸಂಘ (ರಿ.) ಉಡುಪಿ ತೀವ್ರವಾಗಿ ಖಂಡಿಸಿದೆ.

ಕಳೆದ ಬುಧವಾರ ತಡರಾತ್ರಿ ಕುಲರ್ಾ ಸಿಎಸ್ಟಿಯಿಂದ ಮಂಗಳೂರುಗೆ ಮತ್ಸ ್ಯಗಂಧ ರೈಲಿನ ಬೋಗಿ ಸಂಖ್ಯೆ ಎಸ್9ರಲ್ಲಿ ಪ್ರಯಾಣಿಸುತ್ತಿದ್ದ ಅಜಿತ್ಕುಮಾರ್ ಶೆಟ್ಟಿ ಕುಟುಂಬದ ಮೇಲೆ ಕಿಡಿಗೇಡಿಗಳು ನಡೆಸಿದ ಪುಂಡಾಟಿಕೆ, ಹಲ್ಲೆ ಮತ್ತು ಕಳವು ಯತ್ನವನ್ನು ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ ಅಧ್ಯಕ್ಷ ಶಿಮಂತೂರು ಉದಯ ಶೆಟ್ಟಿ, ಗೌರವಾಧ್ಯಕ್ಷ ವಿರಾರ್ ಶಂಕರ್ ಶೆಟ್ಟಿ, ಪ್ರಧಾನ ಕಾರ್ಯದಶರ್ಿ ಶೀಲಾ ಶೆಟ್ಟಿ ಹಾಗೂ ರೈಲ್ವೇ ಯಾತ್ರಿ ಸಂಘ (ರಿ.) ಉಡುಪಿ ಇದರ ಅಧ್ಯಕ್ಷ ಆರ್.ಎಲ್ ಡಾಯಸ್ ಸೇರಿದಂತೆ ಪದಾಧಿಕಾರಿಗಳು ಘಟನೆಯನ್ನು ಖಂಡಿಸಿದ್ದಾರೆ. ಘಟನೆಯಲ್ಲಿ ಪಾಲ್ಗೊಂಡಎಲ್ಲಾ ಕಿಡಿಗೇಡಿಗಳನ್ನು ತತ್ಕ್ಷಣವೇ ಬಂಧಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಉಭಯ ಸಂಸ್ಥೆಗಳು ಒತ್ತಾಯಿಸಿದ್ದು, ಇಂತಹ ಘಟನೆಗಳು ಪುನಾರಾವರ್ತನೆ ಗೊಳ್ಳದಂತೆ ಕೊಂಕಣ ರೈಲ್ವೇ ಪ್ರಾಧೀಕಾರ ಹಾಗೂ ರೈಲ್ವೇ ಸಚಿವಾಲಯವು ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Konkan Rail Gold Theft-A8 Konkan Rail Gold Theft-A7 Konkan Rail Gold Theft-A6 Konkan Rail Gold Theft-A5 Konkan Rail Gold Theft-A4 Konkan Rail Gold Theft-A3 Konkan Rail Gold Theft-A2 Konkan Rail Gold Theft-A1

ಡಾಯಸ್ ಅವರ ಮಕ್ಕಳೂ ಇದೇ ರೈಲಿನಲ್ಲಿ ಉಡುಪಿಗೆ ತೆರಳುತ್ತಿದ್ದರು ಎನ್ನಲಾಗಿದ್ದು, ಅಜಿತ್ಕುಮಾರ್ರಲ್ಲಿ ಕಾಯ್ದಿರಿಸಿದ ಟಿಕೇಟು ಇದ್ದು ನಮ್ರತೆಯಿಂದ ಆತನಲ್ಲಿಕೋರಿದರೂ ವಾಗ್ವಾದಕ್ಕಿಳಿದ ಆತ ಜಗಳಗಂಟನಂತೆ
ವತರ್ಿಸಿ ರತ್ನಗಿರಿಯಲ್ಲಿ ನೋಡಿಕೊಳ್ಳುವುದಾಗಿ ಬೆದರಿಕೆ ಹಕಿದ್ದ ಎನ್ನಲಾಗಿದೆ. ಎಲ್ಲವನ್ನೂ ಸಹ ಪ್ರಯಾಣಿಕರು ಮೌನವಾಗಿಯೇ ವೀಕ್ಷಿಸುತ್ತಿದ್ದು ರತ್ನಗಿರಿಯಲ್ಲಿ ನಡೆದಂತೆ ನುಡಿದ ಆತನ ಸಹಚರರು ಏಕಾಏಕಿ ಮಾರಾಕಾಯುಧಗಳಿಂದ ರೈಲಿನೊಳಗೆ ನುಗ್ಗಿ ದಾಂಧಲೆ ನಡೆಸಿದ್ದು ಪರಿಸ್ಥಿತಿ ಬಿಗಡಾಯಿಸಿದಾಗ ಯಾರೋಬ್ಬರು ಟ್ರೈನ್ನ ಚೈನ್ ಎಳೆದು ರೈಲನ್ನು ನಿಲ್ಲಿಸಿದ್ದು ಬಳಿಕ ಪೋಲಿಸರು ಆಗಮಿಸುವ ವರೇಗೆ ರೈಲು ಸಾಗಲು ಪ್ರಯಾಣಿಕರು ಬಿಟ್ಟಿಲ್ಲ ಎಂದು ಪ್ರತ್ಯಕ್ಷದಶರ್ಿಗಳು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಬೋರಿವಿಲಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ ಸಿ.ಶೆಟ್ಟಿ ಅವರಲ್ಲಿ ಮಾತುಕತೆ ನಡೆಸಿದ್ದು ಅವರು ರೈಲ್ವೇ ಸಚಿವ ಸುರೇಶ್ ಪ್ರಭು ಅವರೊಂದಿಗೆ ಮಾತುಕತೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನೀಡಿರುವುದಾಗಿ ಸಂಘದ ಅಧ್ಯಕ್ಷ ಉದಯ ಶೆಟ್ಟಿ ತಿಳಿಸಿದ್ದಾರೆ. ಕೊಂಕಣ ರೈಲ್ವೇ ಮೂಲಕ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು ಇನ್ಮುಂದೆ ತಮ್ಮ ಕಾಯ್ದಿರಿಸಿದ ಟಿಕೇಟುಗಳ ಸೀಟುಗಳಲ್ಲೇ ಪ್ರಯಾಣಿಸಿ ಟಿಸಿಗಳಲ್ಲಿ ಸೂಕ್ತ ಸಮಯದಲ್ಲಿ ತಮ್ಮ ಕಾಯ್ದಿರಿಸಿದ ಟಿಕೇಟು ನೊಂದಾಯಿಸಿ ಕೊಳ್ಳಬೇಕು. ಅನೇಕ ಪ್ರಯಾಣಿಕರು ಟಿಸಿಗಳು ಬರುವಾಗ ಬೇರೆಲ್ಲೋ (ಸಹ ಪ್ರಯಾಣಿಕ ಸಂಬಂಧಿ, ಮಿತ್ರರ) ಸೀಟುಗಳಲ್ಲಿ ಕುಳಿತು ಟಿಸಿಗಳಿಗೆ ಸಹಕರಿಸದಿರುವುದು, ಪ್ರಯಾಣದುದ್ದಕ್ಕೂ ಬೀಡಿಸಿಗರೇಟು ಸೇವನೆ, ಸರಾಯಿ ಕುಡಿತ, ಬೀಗರೂಟ, ಮಸ್ತಿಮಜ್ಹಾ ಮಾಡಿ ಅನಾಗರಿಕರಾಗಿ ವತರ್ಿಸುವುದು ದೈನಂದಿನವಾಗಿ ಕೇಳಿ ಬರುತ್ತಿದೆ. ಇಂತಹ ಅಸಭ್ಯತನ ನಡತೆ ಕಿಡಿಗೇಡಿಗಳಿಗೆ ವರವಾಗಬಲ್ಲದು. ಇಂತಹ ದುರ್ವರ್ತನೆಗಳು ಮುಂದುವರಿದರೆ ಮುಂದೊಂದು ದಿನ ಕಿಡಿಗೇಡಿಗಳು ಇಡೀ ರೈಲನ್ನೇ ಲೂಟಿಗೊಳಿಸ ಬಹುದು ಎಂದು ಆತಂಕ ವ್ಯಕ್ತ ಪಡಿಸಿದ ರೈಲ್ವೇ ಯಾತ್ರಿ ಸಂಘವು ಇಂತಹ ಯಾವುದೇ ಘಟನೆಗಳಿಗೆ ಪ್ರಯಾಣಿಕರು ಅವಕಾಶ ಮಾಡಿ ಕೊಡದಂತೆ ಶಿಮಂತೂರು ಉದಯ ಶೆಟ್ಟಿ ಕೋರಿದ್ದಾರೆ.

ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಕನರ್ಿರೆ ವಿಶ್ವನಾಥ್ ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಭಂಡಾರಿ ಸೇವಾ ಸಂಘ ಮುಂಬಯಿ ಅಧ್ಯಕ್ಷ ನ್ಯಾ| ಶೇಖರ್ ಪಿ.ಭಂಡಾರಿ, ಶಾಫಿ ವೆಲ್ಫೇರ್ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನ್ಯಾ| ಬಿ.ಮೊಹಿದ್ಧೀನ್ ಮುಂಡ್ಕೂರು, ತೀಯಾ ಸಮಾಜ, ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಆರ್.ಬೆಳ್ಚಡ, ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ, ಬಾಂಬೇ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ನ್ಯಾ| ಯು.ಶೇಖರ್ ಶೆಟ್ಟಿ, ಬಿಲ್ಲವರ ಜಾಗ್ರತಿ ಬಳಗ ಮುಂಬಯಿ ಅಧ್ಯಕ್ಷ ಎನ್.ಟಿ.ಪೂಜಾರಿ, ರಜಕ ಸಂಘ ಮುಂಬಯಿ ಅಧ್ಯಕ್ಷ ಸತೀಶ್ ಆರ್.ಸಾಲ್ಯಾನ್, ಭಂಡಾರಿ ಮಹಾ ಮಂಡಲದ ಅಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ ಸೇರಿದಂತೆ ಮಹಾನಗರದಲ್ಲಿನ ಅನೇಕ ಸಂಘ ಸಂಸ್ಥೆಗಳ ಮುಖಂಡರು, ಐಕಳ ಹರೀಶ್ ಶೆಟ್ಟಿ, ಎಮರ್ಾಳ್ ಹರೀಶ್ ಶೆಟ್ಟಿ, ಹರೀಶ್ ಎನ್.ಶೆಟ್ಟಿ ಮಲಾಡ್, ತೋನ್ಸೆ ಸಂಜೀವ ಪೂಜಾರಿ, ಸುರೇಶ್ ಶೆಟ್ಟಿ ಯೆಯ್ಯಾಡಿ ಸೇರಿದಂತೆ ಅನೇಕರು ಘಟನೆಯನ್ನು ಖಂಡಿಸಿದ್ದು ಆಕ್ರಮಣಕಾರರ ಮೇಲೆ ಗಂಭೀರ ಕ್ರಮ ಕೈಗೊಳ್ಳುವ ಂತೆ ರೈಲ್ವೇ ಸಚಿವಾಲಯವನ್ನು ಆಗ್ರಹಿಸಿದ್ದರೆ.

Leave a Reply

Please enter your comment!
Please enter your name here